ನವದೆಹಲಿ: ಸುಧಾರಿತ ಸ್ಫೋಟಕ ಸಾಧನಗಳೊಂದಿಗೆ (IED) ಅಸ್ಸಾಂನ ಮೂವರು ಭಯೋತ್ಪಾದಕರನ್ನು ದೆಹಲಿ ಪೊಲೀಸರು ಸೋಮವಾರ ಬಂಧಿಸಿದ್ದರಿಂದ ರಾಷ್ಟ್ರ ರಾಜಧಾನಿಯಲ್ಲಿ ಯೋಜಿಸಲಾಗಿದ್ದ ಭಯೋತ್ಪಾದಕ ದಾಳಿಯನ್ನು ತಪ್ಪಿಸಿದಂತಾಗಿದೆ.
ದೆಹಲಿ ಪೊಲೀಸ್ ವಿಶೇಷ ಸೆಲ್ ಡಿಸಿಪಿ ಪ್ರಮೋದ್ ಕುಶ್ವಾಹಾ ಈ ವರದಿಯನ್ನು ದೃಢಪಡಿಸಿದರು ಮತ್ತು ಸುದ್ದಿ ಸಂಸ್ಥೆ ಎಎನ್‌ಐಗೆ, "ಸುಧಾರಿತ ಸ್ಫೋಟಕ ಸಾಧನಗಳೊಂದಿಗೆ (IED) ಮೂರು ಜನರನ್ನು ಬಂಧಿಸಲಾಗಿರುವುದರಿಂದ ಉಗ್ರರ ಯೋಜಿತ ಭಯೋತ್ಪಾದಕ ದಾಳಿಯನ್ನು ತಪ್ಪಿಸಲಾಗಿದೆ" ಎಂದು ಹೇಳಿದರು.
DCP Pramod Kushwaha, Delhi Police Special Cell: The three arrested persons were from an ISIS inspired module and were planning to attack using an IED blast a local fair in Goalpara (Assam). They were planning to replicate it in Delhi. pic.twitter.com/mjRkIk8EN1
— ANI (@ANI) November 25, 2019
ನಿಷೇಧಿತ ಸಾಹಿತ್ಯ ಮತ್ತು ಇತರ ಸ್ಫೋಟಕ ವಸ್ತುಗಳನ್ನು ಪೊಲೀಸರು ಅವರ ಬಳಿಯಿಂದ ವಶಪಡಿಸಿಕೊಂಡಿದ್ದಾರೆ. ವರದಿಗಳ ಪ್ರಕಾರ, ಬಂಧಿತ ಭಯೋತ್ಪಾದಕರು ರಾಷ್ಟ್ರ ರಾಜಧಾನಿಯಲ್ಲಿ ದೊಡ್ಡ ಭಯೋತ್ಪಾದಕ ದಾಳಿ ನಡೆಸಲು ಯೋಜಿಸುತ್ತಿದ್ದರು ಎನ್ನಲಾಗಿದೆ.
ರಾಜಧಾನಿ ಹೊರತುಪಡಿಸಿ ದೇಶದ ಇತರ ಭಾಗಗಳಲ್ಲಿ ಭಯೋತ್ಪಾದಕರು ದಾಳಿ ನಡೆಸಲು ಯೋಜಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಭಯೋತ್ಪಾದಕರನ್ನು ರಂಜಿತ್ ಅಲಿ, ಇಸ್ಲಾಂ, ಜಮಾಲ್ ಎಂದು ಗುರುತಿಸಲಾಗಿದೆ. ಇವರೆಲ್ಲರೂ ಅಸ್ಸಾಂನ ಗೋಲ್ಪಾರ ನಿವಾಸಿಗಳು ಎಂದು ಹೇಳಲಾಗಿದೆ.