ನವದೆಹಲಿ:ಫೇಸ್ ಬುಕ್ ಶೀಘ್ರದಲ್ಲಿಯೇ ತನ್ನ ಬಳಕೆದಾರರಿಗೆ ಹೊಸ ವೈಶಿಷ್ಟ್ಯವೊಂದನ್ನು ಪರಿಚಯಿಸಲಿದೆ. ಹೌದು, ಶೀಘ್ರದಲ್ಲಿಯೇ ಫೇಸ್ ಬುಕ್ ತನ್ನ ಅಂಡ್ರಾಯಿಡ್ ಬಳಕೆದಾರರಿಗಾಗಿ ಈ ವೈಶಿಷ್ಟ್ಯ ಪರಿಚಯಿಸಲಿದೆ. ಕಳೆದ ಕೆಲ ದಿನಗಳ ಹಿಂದೆಯಷ್ಟೇ ಈ ವೈಶಿಷ್ಟ್ಯವನ್ನು ಖ್ಯಾತ ಮೆಸೇಜಿಂಗ್ ಆಪ್ ವಾಟ್ಸ್ ಆಪ್ ಗಾಗಿ ಬಿಡುಗಡೆಗೊಳಿಸಲಾಗಿತ್ತು. ಬಳಿಕ ಈ ವೈಶಿಷ್ಟ್ಯವನ್ನು ಫೇಸ್ ಬುಕ್ ಮೆಸ್ಸೆಂಜರ್ ಗಾಗಿ ರೋಲ್ ಔಟ್ ಮಾಡಲಾಯಿತು. ಈ ಎಲ್ಲ ಪ್ಲಾಟ್ ಫಾರಂಗಳ ಮೇಲೆ ಮೆಚ್ಚುಗೆಗೆ ಪಾತ್ರವಾಗಿರುವ ಡಾರ್ಕ್ ಮೋಡ್ ವೈಶಿಷ್ಟ್ಯವನ್ನು ಇದೀಗ ಫೇಸ್ ಬುಕ್ ತನ್ನ ಪ್ರೊಫೈಲ್ ನಲ್ಲಿಯೂ ಕೂಡ ಅಳವಡಿಸಲು ಮುಂದಾಗಿದೆ.
ಡಾರ್ಕ್ ಮೋಡ್ ಎಲ್ಲರ ಅಚ್ಚುಮೆಚ್ಚಿನ ವೈಶಿಷ್ಟ್ಯಗಳಲ್ಲಿ ಒಂದಾಗಿದೆ. ಇದಕ್ಕೂ ಮೊದಲು ತನ್ನ ಮೆಸೇಜಿಂಗ್ ಆಪ್ ಆಗಿರುವ ವಾಟ್ಸ್ ಆಪ್ ಹಾಗೂ ಇನ್ಸ್ಟಾಗ್ರಾಮ್ ಗಳಲ್ಲಿ ಈ ವೈಶಿಷ್ಟ್ಯವನ್ನು ಪರಿಚಯಿಸಿದ್ದ ಫೇಸ್ ಬುಕ್ ಇದೀಗ ತನ್ನ ಪ್ರೊಫೈಲ್ ಗಳಲ್ಲಿಯೂ ಕೂಡ ಈ ವೈಶಿಷ್ಟ್ಯವನ್ನು ಜಾರಿಗೊಳಿಸಲು ಸಿದ್ಧತೆ ನಡೆಸಿದೆ.
ಇತ್ತೀಚೆಗಷ್ಟೇ ಫೇಸ್ ಬುಕ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಾರ್ಕ್ ಜುಕರ್ಬರ್ಗ್ ಅವರ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಈ ವೈಶಿಷ್ಟ್ಯವನ್ನು ದೀರ್ಘಕಾಲದವರೆಗೆ ಪರೀಕ್ಷೆಗೆ ಒಳಪಡಿಸಿ ನಂತರ ಸ್ಟೇಬಲ್ ವರ್ಜನ್ ಗಾಗಿ ಬಿಡುಗಡೆ ಮಾಡಲಾಗಿದೆ.
ಇದಲ್ಲದೆ ಕಂಪನಿ ಅಂಡ್ರಾಯಿಡ್ ಆಪ್ ನಲ್ಲಿ ಹಲವು ವೈಶಿಷ್ಟ್ಯಗಳನ್ನೂ ಕೂಡ ಬಿಡುಗಡೆ ಮಾಡಲಿದೆ. ಇವುಗಳಲ್ಲಿ ಕೋರೋಣ ವೈರಸ್ ಟ್ರ್ಯಾಕಿಂಗ್ ವೈಶಿಷ್ಟ್ಯ ಹಾಗೂ ಕ್ವಿಟ್ ಮೋಡ್ ಕೂಡ ಶಾಮೀಲಾಗಿದೆ. ಇದಕ್ಕೊ ಮೊದಲು ಕಂಪನಿ ಐಓಎಸ್ ಗಾಗಿ ಕ್ವಿಟ್ ಮೋಡ್ ವೈಶಿಷ್ಟ್ಯವನ್ನು ಈ ವರ್ಷದ ಆರಂಭದಲ್ಲಿ ಅಂದರೆ ಏಪ್ರಿಲ್ ನಲ್ಲಿ ಬಿಡುಗಡೆಗೊಳಿಸಿತ್ತು. ಇದಲ್ಲದೆ ಫೇಸ್ ಬುಕ್ ನ ಡೆಸ್ಕ್ ಟಾಪ್ ಗಾಗಿಯೂ ಕೂಡ ಡಾರ್ಕ್ ಮೋಡ್ ವೈಶಿಷ್ಟ್ಯ ಪರಿಚಯಿಸಲಾಗಿತ್ತು.
ಫೇಸ್ ಬುಕ್ ನ ಈ ವೈಶಿಷ್ಟ್ಯ ಒಂದು ಟಾಗಲ್ ಜೊತೆಗೆ ಬರುತ್ತದೆ. ಈ ಟಾಗಲ್ ಬಳಕೆದಾರರಿಗೆ ಈ ವೈಶಿಷ್ಟ್ಯ ಅಳವಡಿಸಬೇಕೆ ಅಥವಾ ಇಲ್ಲವೇ ಎಂಬ ಆಯ್ಕೆಯನ್ನು ನೀಡುತ್ತದೆ.