Mumbai: ಭಾರಿ ಮಳೆಯಿಂದಾಗಿ ಧರೆಗುರುಲಿದ ನಾಲ್ಕು ಅಂತಸ್ತಿನ ಕಟ್ಟಡ, 11 ಮಂದಿ ಮೃತ, ಹಲವರಿಗೆ ಗಾಯ

Mumbai Building Collapse: ಬಿಎಂಸಿ ಪ್ರಕಾರ, ಮಲಾಡ್‌ನ ಮಾಲ್ವಾನಿ ಪ್ರದೇಶದಲ್ಲಿ ಈ ಘಟನೆಯಿಂದಾಗಿ, ಹತ್ತಿರದ ಇತರ ಎರಡು ವಸತಿ ಕಟ್ಟಡಗಳು ಸಹ ಹಾನಿಗೀಡಾಗಿವೆ, ಅವು ಈಗ ಅಪಾಯಕಾರಿ ಸ್ಥಿತಿಯಲ್ಲಿವೆ ಎಂದು ತಿಳಿದುಬಂದಿದೆ.  

Written by - Yashaswini V | Last Updated : Jun 10, 2021, 08:59 AM IST
  • ಮಾಲಾಡ್‌ನ ಮಾಲ್ವಾನಿ ಪ್ರದೇಶದಲ್ಲಿ ರಾತ್ರಿ 11 ರ ಸುಮಾರಿಗೆ 4 ಅಂತಸ್ತಿನ ಕಟ್ಟಡ ಇದ್ದಕ್ಕಿದ್ದಂತೆ ಕುಸಿದಿದೆ
  • ಅಪಘಾತದಲ್ಲಿ 11 ಜನರು ಸಾವನ್ನಪ್ಪಿದ್ದರೆ
  • 7 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ
Mumbai: ಭಾರಿ ಮಳೆಯಿಂದಾಗಿ ಧರೆಗುರುಲಿದ ನಾಲ್ಕು ಅಂತಸ್ತಿನ ಕಟ್ಟಡ, 11 ಮಂದಿ ಮೃತ, ಹಲವರಿಗೆ ಗಾಯ title=
ಮುಂಬೈನಲ್ಲಿ ವಸತಿ ಕಟ್ಟಡ ಕುಸಿತ, 11 ಮಂದಿ ಮೃತ, ಹಲವರಿಗೆ ಗಾಯ (Image courtesy: ANI)

ಮುಂಬೈ: ಮುಂಬೈನಲ್ಲಿ ನಿನ್ನೆ ದಿನವಿಡೀ ಸುರಿಯುತ್ತಿದ್ದ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿತ್ತು. ಈ ಮಧ್ಯೆ ಮಾಲಾಡ್‌ನ ಮಾಲ್ವಾನಿ ಪ್ರದೇಶದಲ್ಲಿ ರಾತ್ರಿ 11 ರ ಸುಮಾರಿಗೆ 4 ಅಂತಸ್ತಿನ ಕಟ್ಟಡ ಇದ್ದಕ್ಕಿದ್ದಂತೆ ಕುಸಿದಿದೆ. ಅಪಘಾತದಲ್ಲಿ 11 ಜನರು ಸಾವನ್ನಪ್ಪಿದ್ದರೆ, 7 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಅಪಘಾತದ ಸಮಯದಲ್ಲಿ 20ಕ್ಕೂ ಹೆಚ್ಚು ಜನರು ಕಟ್ಟಡದಲ್ಲಿದ್ದರು:
ಮಾಹಿತಿಯ ಪ್ರಕಾರ, ವಸತಿ ಕಟ್ಟಡ ಕುಸಿತ (Building Collapse) ಸಮಯದಲ್ಲಿ 20 ಕ್ಕೂ ಹೆಚ್ಚು ಜನರು ಕಟ್ಟಡದಲ್ಲಿದ್ದರು. ಘಟನೆಯ ನಂತರ ಅಗ್ನಿಶಾಮಕ ದಳ ಮತ್ತು ಪೊಲೀಸರು ಆಗಮಿಸಿ, ಸ್ಥಳೀಯ ಜನರ ಸಹಾಯದಿಂದ, ಅವಶೇಷಗಳಲ್ಲಿ ಸಿಲುಕಿರುವ ಜನರನ್ನು ಹೊರಗೆ ತರಲು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು.

ಇದನ್ನೂ ಓದಿ - Video : ರೈಲಿನ ಕೆಳಗೆ ಸಿಲುಕಿದ ವ್ಯಕ್ತಿಯನ್ನು ದೇವರಂತೆ ಬಂದು ಕಾಪಾಡಿದ RPF ಯೋಧ

ಈವರೆಗೆ 15 ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ:
ಮುಂಬೈನ (Mumbai) ವಲಯ 11 ರ ಜಿಲ್ಲಾಧಿಕಾರಿ (ಡಿಸಿಪಿ) ವಿಶಾಲ್ ಠಾಕೂರ್ ಮಾತನಾಡಿ, ಇದುವರೆಗೆ 5 ಮಕ್ಕಳು, ಮಹಿಳೆಯರು ಸೇರಿದಂತೆ 15 ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ಹೆಚ್ಚಿನ ಜನರು ಅವಶೇಷಗಳಡಿ ಸಿಲುಕಿರುವ  ಶಂಕೆ ಇದೆ. ಅವರಿಗಾಗಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ - Big Relief: ಕುಟುಂಬದಲ್ಲಿ ಯಾರಾದರೂ ಕೊರೊನಾ ಸೊಂಕಿತರಾದರ ಎಷ್ಟು ದಿನ Special Casual Leave ಸಿಗಲಿದೆ ಗೊತ್ತಾ?

ಹತ್ತಿರದ 2 ಕಟ್ಟಡಗಳಿಗೂ ಹಾನಿಯಾಗಿದೆ:
ಈ ಘಟನೆಯಿಂದಾಗಿ ಹತ್ತಿರದ ಇತರ ಎರಡು ವಸತಿ ಕಟ್ಟಡಗಳು ಸಹ ಹಾನಿಗೀಡಾಗಿವೆ, ಅದು ಈಗ ಅಪಾಯಕಾರಿ ಸ್ಥಿತಿಯಲ್ಲಿದೆ ಎಂದು ಬಿಎಂಸಿ ತಿಳಿಸಿದೆ. ಬಾಧಿತ ಕಟ್ಟಡಗಳಿಂದ ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News