ಪಣಜಿ : ಗೋವಾದ ಪ್ರತಿಯೊಬ್ಬರು ಕೊರೋನಾ ಮೊದಲ ಡೋಸ್ ಲಸಿಕೆ ಪಡೆದ ಬಳಿಕವಷ್ಟೇ ಪ್ರವಾಸಿಗರಿಗೆ ರಾಜ್ಯಕ್ಕೆ ಬರಲು ಅನುಮತಿ ನೀಡಲಾಗುವುದು ಎಂದು ಸಿಎಂ ಪ್ರಮೋದ್ ಸಾವಂತ್ ತಿಳಿಸಿದ್ದಾರೆ.
ಜುಲೈ 30ರೊಳಗೆ ಸರ್ಕಾರವೂ ರಾಜ್ಯದಲ್ಲಿರುವ ಪ್ರತಿಯೊಬ್ಬ ನಾಗರಿಕನಿಗೂ ಮೊದಲ ಲಸಿಕೆಯನ್ನು ನೀಡುವ ಗುರಿ ಹೊಂದಲಾಗಿದೆ. ರಾಜ್ಯದಲ್ಲಿ ಕೊರೋನಾ ಪ್ರಕರಣಗಳು(Corona Case) ಸಂಖ್ಯೆ ಕಡಿಮೆಯಾಗಿದ್ದು, ಕೊರೋನಾ ನಿಯಮಗಳ ಸಡಿಲಿಕೆ ಮಾಡಲಾಗಿದೆ, ಸಡಿಲಿಕೆ ಎಂದ ಮಾತ್ರಕ್ಕೆ ಪ್ರವಾಸಿಗರಿಗೆ ಸಧ್ಯಕ್ಕೆ ಅವಕಾಶವಿಲ್ಲ, ಪ್ರತಿಯೊಬ್ಬರೂ ಮೊದಲ ಕೊರೋನಾ ಡೋಸ್ ಲಸಿಕೆ ಪಡೆದ ಬಳಿಕವಷ್ಟೇ ಅವಕಾಶ ನೀಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ : 2nd PUC Result 2021 : ದ್ವಿತೀಯ PU ವಿದ್ಯಾರ್ಥಿಗಳಿಗೆ ಮತ್ತೆ ಶಾಕ್ ನೀಡಿದ ಹೈಕೋರ್ಟ್!
ಹೀಗಾಗಿ ಗೋವಾ ಪ್ರವಾಸೋದ್ಯಮ(Goa Tourism) ಜುಲೈ 30ರ ನಂತರ ಮತ್ತೆ ಆರಂಭವಾಗಲಿದೆ, ನೃತ್ಯ ಹಾಗೂ ಇತರೆ ಸಂಗೀತ ಕಾರ್ಯಕ್ರಮಗಳನ್ನು 2022ರ ಮಾರ್ಚ್ ವರೆಗೆ ಮುಂದೂಡಲಾಗಿದೆ, ರಾಜ್ಯದಲ್ಲಿ ಪ್ರವಾಸಿಗರಿಗೆ ಕ್ವಾರಂಟೈನ್ ಕೇಂದ್ರಗಳನ್ನು ತೆರೆಯಲಾಗಿದೆ.
ಇದನ್ನೂ ಓದಿ : Karnataka Heavy Rain : ರಾಜ್ಯದಲ್ಲಿ ಇನ್ನೂ ಎರಡು ದಿನ ಭಾರೀ ಮಳೆ : ಈ ಜಿಲ್ಲೆಗಳಲ್ಲಿ 'ಆರೆಂಜ್' ಅಲರ್ಟ್'
ಈ ವಾರದ ಆರಂಭದಲ್ಲಿ ಪ್ರಮೋದ್ ಸಾವಂತ್(Pramod Sawant) ಪ್ರವಾಸೋದ್ಯಮ ಕೈಗಾರಿಕೆ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ್ದರು ಹಾಗೂ ಕಠಿಣ ನಿಯಮಗಳನ್ನು ಪಾಲಿಸುವ ಕುರಿತು ಸೂಚನೆ ನೀಡಿದ್ದರು.
ಇದನ್ನೂ ಓದಿ : SSLC exam 2021 : SSLC ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆಯ 'ಪ್ರಶ್ನೆಪತ್ರಿಕೆ' ಪ್ರಕಟ : ಇಲ್ಲಿದೆ ಡೌನ್ ಲೋಡ್ ಮಾಡುವ ವಿಧಾನ!
ಹುನಾರ್ ಹಾತ್, ಸನ್‌ಬರ್ನ್ ಹಾಗೂ ಇನ್ನಿತರೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮಾರ್ಚ್ 2022ರವರೆಗೆ ಅವಕಾಶವಿಲ್ಲ. ಗೋವಾ(Goa)ದಲ್ಲಿ ಬುಧವಾರ 310 ಕೊರೋನಾ ಸೋಂಕಿತರು ಪತ್ತೆಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 1,63,358ಕ್ಕೆ ಏರಿಕೆಯಾಗಿದೆ.
ಇದನ್ನೂ ಓದಿ : e-Sahamati App : ರೈತ ಸಮುದಾಯಕ್ಕೆ ರಾಜ್ಯ ಸರ್ಕಾರದಿಂದ 'ಗುಡ್ ನ್ಯೂಸ್'!
ಇದುವರೆಗೆ 2960 ಮಂದಿ ಮೃತಪಟ್ಟಿದ್ದು ಕಳೆದ 24 ಗಂಟೆಗಳಲ್ಲಿ 13 ಮಂದಿ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಬುಧವಾರ 2588 ಮಂದಿಯನ್ನು ಪರೀಕ್ಷೆ(Corona Test)ಗೆ ಒಳಪಡಿಸಲಾಗಿತ್ತು, ಇದುವರೆಗೆ 8,75,538 ಮಂದಿಯನ್ನು ಪರೀಕ್ಷಿಸಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.