Call Girlಗೆ ಕರೆ ಮಾಡಿದ ಪತಿ ಮಹಾಶಯನಿಗೆ ಕಾದಿತ್ತು ಈ ಶಾಕ್!

ಪತಿ ಮಹಾಶಯನೊಬ್ಬ ತನ್ನ WhatsApp ಖಾತೆ ಮೂಲಕ ಕಾಲ್ ಗರ್ಲ್ ಗೆ ಕಾಲ್ ಮಾಡಿದ್ದಾನೆ. ಸದ್ಯ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಪತ್ನಿ ತನ್ನ ಪತಿಯ ಮೇಲೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪ ಮಾಡಿದ್ದಾನೆ.

Last Updated : Jan 22, 2020, 03:22 PM IST
Call Girlಗೆ ಕರೆ ಮಾಡಿದ ಪತಿ ಮಹಾಶಯನಿಗೆ ಕಾದಿತ್ತು ಈ ಶಾಕ್! title=

ಉತ್ತರಾಖಂಡ್:ಉತ್ತರಾಖಂಡ್ ರಾಜ್ಯದ ಕಾಶೀಪುರ್ ಎಂಬಲ್ಲಿ ವಿಚಿತ್ರ ಘಟನೆಯೊಂದು ಸಂಭವಿಸಿದೆ. ದಿನೇಶ್ ಪುರ ರಹವಾಸಿಯಾಗಿರುವ ವ್ಯಕ್ತಿಯೋರ್ವ ಕಾಲ್ ಗರ್ಲ್ ಕರೆಯಿಸಿದ್ದಾನೆ. ಬಳಿಕ ಆತನ ಬಳಿ ಬಂದ ಕಾಲ್ ಗರ್ಲ್ ನೋಡಿ ಆತ ಬೆಚ್ಚಿಬಿದ್ದಿದ್ದಾನೆ. ಏಕೆಂದರೆ ವ್ಯಕ್ತಿ ಕರೆಯಿಸಿದ ಕಾಲ್ ಗರ್ಲ್ ಅವನ ಪತ್ನಿಯಾಗಿದ್ದಳು. ತನ್ನ ಪತ್ನಿ ಸೆಕ್ಸ್ ರಾಕೆಟ್ ನಡೆಸುತ್ತಿದ್ದಾಳೆ ಎಂದು ಕೆಲ ಜನರು ಆ ವ್ಯಕ್ತಿಗೆ ಮಾಹಿತಿ ನೀಡಿದ್ದರು.

ಈ ಕುರಿತು ಹೇಳಿಕೆ ನೀಡಿರುವ ಕಾಶಿಪುರ್ ASP ರಾಜೇಶ್ ಭಟ್, ಕಾಶಿಪುರದ ITI ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ. ITI ಠಾಣಾ ವ್ಯಾಪ್ತಿಗೆ ಬರುವ ಓರ್ವ ಮಹಿಳೆಯ ವಿವಾಹ ದಿನೇಶ್ ಪುರ್ ನಿವಾಸಿಯ ಜೊತೆ ನೆರವೇರಿತ್ತು. ಸ್ವಲ್ಪ ಕಾಲ ತನ್ನ ಗಂಡನ ಮನೆಯಲ್ಲಿ ವಾಸಿಸುತ್ತಿದ್ದ ಮಹಿಳೆ ಬಳಿಕ ತನ್ನ ತವರೂರಾದ ಕಾಶಿಪುರಕ್ಕೆ ವಾಪಾಸಾಗಿದ್ದಳು. ಏತನ್ಮಧ್ಯೆ ಕೆಲ ಜನರು ಮಹಿಳೆಯ ಗಂಡನಿಗೆ ಆತನ ಪತ್ನಿ ದೇಹವ್ಯಾಪಾರದಲ್ಲಿ ತೊಡಗಿರುವುದಾಗಿ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಇದನ್ನು ಕೇಳಿ ಬೆಚ್ಚಿಬಿದ್ದ ಪತಿ ತನ್ನ ಪತ್ನಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಲು ಪಣತೊಟ್ಟಿದ್ದಾನೆ.

ಈ ಹಿನ್ನೆಲೆಯಲ್ಲಿ ಕಾಶಿಪುರ್ ನಲ್ಲಿ ಸೆಕ್ಸ್ ರಾಕೆಟ್ ನಡೆಸುತ್ತಿದ್ದ ಓರ್ವ ಮಹಿಳೆಯ ಜೊತೆ ಪತಿ ಸಂಪರ್ಕ ಸಾಧಿಸಿದ್ದಾನೆ. ಈ ವೇಳೆ ಆ ಮಹಿಳೆ ವ್ಯಕ್ತಿಗೆ ಕೆಲ ಮಹಿಳೆಯರ ಹೆಸರು ಹೇಳಿದ್ದಾರೆ. ಈ ವೇಳೆ ತನ್ನ ಪತ್ನಿಯ ಹೆಸರು ಕೇಳುತ್ತಲೇ ಆತ ತನ್ನ ಪತ್ನಿಯನ್ನು ಒಂದು ನಿರ್ಧಾರಿತ ಸ್ಥಾನಕ್ಕೆ ಕಳುಹಿಸಿಕೊಡಲು ಹೇಳಿದ್ದಾನೆ. ವ್ಯಕ್ತಿ ಹೇಳಿದ ಮಹಿಳೆ ತಲುಪಿದ ಬಳಿಕ ಆ ವ್ಯಕ್ತಿ ಮಹಿಳೆಯನ್ನು ತನ್ನ ಪತ್ನಿ ಎಂದು ಗುರುತಿಸಿದ್ದಾನೆ. ಇನ್ನೊಂದೆಡೆ ಮಹಿಳೆಯೂ ಕೂಡ ತನ್ನ ಪತಿಯ ಮೇಲೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪ ಮಾಡಿದ್ದು, ಪೊಲೀಸರು ಪ್ರಕರಣದಲ್ಲಿ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
 

Trending News