ಗೋವಾ ಕನ್ನಡಿಗ ನಿರಾಶ್ರಿತರ ರಕ್ಷಣೆಗೆ ಮುಂದಾದ ಸರ್ಕಾರ

ಗೋವಾ ಬೈನಾ ಬೀಚ್ ನ ನಿರಾಶ್ರಿತ ಕನ್ನಡಿಗರಿಗೆ ಪುನರ್ವಸತಿ ಕಲ್ಪಿಸುವ ಬಗ್ಗೆ ಸಭೆ.

Last Updated : Oct 10, 2017, 11:24 AM IST
ಗೋವಾ ಕನ್ನಡಿಗ ನಿರಾಶ್ರಿತರ ರಕ್ಷಣೆಗೆ ಮುಂದಾದ ಸರ್ಕಾರ title=
Pic: youtube

ಬೆಂಗಳೂರು: ಗೋವಾ ಬೈನಾ ಬೀಚ್ ನ ನಿರಾಶ್ರಿತರಾಗಿರುವ ಕನ್ನಡಿಗರಿಗೆ ಪುನರ್ವಸತಿ ಕಲ್ಪಿಸಲು ಸರ್ಕಾರ ಮುಂದಾಗಿದೆ. ಈ ಕುರಿತಂತೆ ಸಮಾಲೋಚನೆ ನಡೆಸಲು ಇಂದು ಸಂಜೆ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ ಸಭೆ ಕರೆದಿದ್ದಾರೆ. 

ಗಡಿನಾಡು ಅಭಿವೃದ್ಧಿ ಪ್ರಾಧಿಕಾರ ಸದಸ್ಯರು ಮತ್ತು ಅಧಿಕಾರಿಗಳನ್ನು ಸಭೆ ಕರೆದಿರುವ ಸಿಎಂ, ನಿರಾಶ್ರಿತ ಕನ್ನಡಿಗರಿಗೆ ರಾಜ್ಯ ಸರ್ಕಾರದಿಂದ ನೆರವು ನೀಡುವುದು. ಗೋವಾ ಸರ್ಕಾರಕ್ಕೆ ಕೂಡಲೇ ಪುನರ್ವಸತಿ ಕಲ್ಪಿಸುವಂತೆ ಒತ್ತಾಯಿಸುವುದು ಸೇರಿದಂತೆ ಗೋವಾ ಕನ್ನಡಿಗರ ರಕ್ಷಣೆ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಿದ್ದಾರೆ.

ಸಭೆಯಲ್ಲಿ ಖಾಸಗಿ ಭೂಮಿ ಖರೀದಿಸಿ ಅಲ್ಲಿ ನಿವೇಶನ ಹಂಚುವ ಕುರಿತಂತೆ ತೀರ್ಮಾನ ಸಾಧ್ಯತೆ ಇದ್ದು, 70 ಕೋಟಿ ವೆಚ್ಚದಲ್ಲಿ ಭೂಮಿ ಖರೀದಿಸಲು ಸರ್ಕಾರದ ಚಿಂತನೆ ನಡೆಸಿದೆ.

Trending News