Rakshabandhan 2021: ಭಾನುವಾರ (ಆಗಸ್ಟ್ 22) ದೇಶಾದ್ಯಂತ ರಕ್ಷಾಬಂಧನ ಆಚರಿಸಲಾಯಿತು. ಸಹೋದರ-ಸಹೋದರಿಯರ ಪವಿತ್ರ ಬಾಂಧವ್ಯ ಬೆಸೆಯುವ ಈ ಹಬ್ಬದಲ್ಲಿ ಸಹೋದರಿಯರು ಸಹೋದರನಿಗೆ ರಾಖಿ ಕಟ್ಟುವ ಮೂಲಕ ಪರಸ್ಪರ ಪ್ರೀತಿಯನ್ನು ಹಂಚಿಕೊಳ್ಳುತ್ತಾರೆ. ಏತನ್ಮಧ್ಯೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಸ್ಥಳೀಯ ಜನರು ಭಾರತೀಯ ಸೇನಾ ಸಿಬ್ಬಂದಿಗೆ ರಾಖಿ ಕಟ್ಟಿ ಸಂಭ್ರಮಿಸಿದರು.
ಜಮ್ಮು ಮತ್ತು ಕಾಶ್ಮೀರದ ಪೂಂಚ್ ನಲ್ಲಿ, ಭಾರತೀಯ ಸೇನೆಯ (Indian Army) ಸೈನಿಕರಿಗೆ ರಾಖಿ ಕಟ್ಟಲು ಮಹಿಳೆಯರು ಮತ್ತು ಮಕ್ಕಳು ಆಗಮಿಸಿದರು. ಇಲ್ಲಿ ಅನೇಕ ಸೈನಿಕರಿಗೆ ರಾಖಿ ಕಟ್ಟಿ, ತಿಲಕ ಇಡಲಾಯಿತು. ಜೊತೆಗೆ ಸಿಹಿತಿಂಡಿಗಳನ್ನು ನೀಡಲಾಯಿತು. ಸೈನಿಕರು ಮಕ್ಕಳಿಗೆ ಸಿಹಿ ತಿನ್ನಿಸುವ ಮೂಲಕ ರಾಖಿ ಹಬ್ಬವನ್ನು ಆಚರಿಸಿದರು.
Jammu and Kashmir: Women and children tie rakhis on the wrist of Indian Army personnel in Poonch
"We are here to tie rakhis to jawans so that they do not miss their sisters on the occasion of #Rakshabandhan. We all are sisters of Armymen guarding our borders," says Rozia Kazmi pic.twitter.com/RaNZZqB0pp
— ANI (@ANI) August 22, 2021
ಇದನ್ನೂ ಓದಿ- ಆಫ್ಘಾನ್ ನಿಂದ ಜನರನ್ನು ಭಾರತಕ್ಕೆ ಸ್ಥಳಾಂತರಿಸುವ ಕೇಂದ್ರದ ಕಾರ್ಯ ಶ್ಲಾಘನೀಯ -ಪಿಣರಾಯಿ ವಿಜಯನ್
ಗಡಿ ಕಾಯುವ ಸೈನಿಕರಿಗೆ ರಾಖಿ ಕಟ್ಟಲು ಬಂದಿದ್ದ ರೋಜಿಯಾ ಕಜ್ಮಿ ಎಂಬ ಮಹಿಳೆ, ರಕ್ಷಾಬಂಧನದ (Rakshabandhan) ಈ ಸಂದರ್ಭದಲ್ಲಿ ಸೈನಿಕರು ತಮ್ಮ ಸಹೋದರಿಯರನ್ನು ಮಿಸ್ ಮಾಡಿಕೊಳ್ಳಬಾರದು. ಆದ್ದರಿಂದ ಅವರ ಕೊರತೆಯನ್ನು ಪೂರೈಸಲು, ನಾವು ರಾಖಿ ಕಟ್ಟಲು ಬಂದೆವು. ರಕ್ಷಾಬಂಧನದ ಸಂದರ್ಭದಲ್ಲಿ ನಾವು ಸೈನಿಕರಿಗೆ ನಮ್ಮ ಸಹೋದರರೆಂದು ಭಾವಿಸಿ ರಾಖಿ ಕಟ್ಟಿದ್ದೇವೆ. ಸೇನಾ ಸಿಬ್ಬಂದಿ ನಮ್ಮನ್ನು ಮತ್ತು ಗಡಿಯನ್ನು ರಕ್ಷಿಸುತ್ತಾರೆ. ನಾವೆಲ್ಲರೂ ಅವರ ಸಹೋದರಿಯರು ಎಂದರು.
ಇದನ್ನೂ ಓದಿ- ಆಗಸ್ಟ್ 30 ವರೆಗೆ ಲಾಕ್ ಡೌನ್ ವಿಸ್ತರಿಸಿದ ಗೋವಾ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ