ನವದೆಹಲಿ: ಜೀವ ವಿಮಾ ಕಂಪೆನಿಗಳು ಸಂಭಾವ್ಯ ಪಾಲಿಸಿದಾರರಿಂದ ಮುಂದೆಯೂ ಕೂಡ ಎಲೆಕ್ಟ್ರಾನಿಕ್ ರೀತಿಯಲ್ಲಿ ತಮ್ಮಅನುಮೋದನೆಯನ್ನು ಪಡೆಯಲು ಸಾಧ್ಯವಾಗುತ್ತದೆ. ವಿಮಾ ನಿಯಂತ್ರಕ ಪ್ರಾಧಿಕಾರ (IRDAI) 2021 ರ ಮಾರ್ಚ್ 31 ರವರೆಗೆ ವಿಮಾ ಉತ್ಪನ್ನಗಳ ಎಲೆಕ್ಟ್ರಾನಿಕ್ ಒಪ್ಪಿಗೆಯನ್ನು ಪಡೆದುಕೊಳ್ಳುವ ಸೌಲಭ್ಯವನ್ನು ವಿಸ್ತರಿಸಿದೆ.
ಇದನ್ನು ಓದಿ- Gym, Yoga ಮಾಡುವವರಿಗೆ ಸಂತಸದ ಸುದ್ದಿ ಪ್ರಕಟಿಸಿದ IRDAI
ಏನಿದು Electronic Consent?
ಆಗಸ್ಟ್ 2020 ರಲ್ಲಿ, ಕೊರೊನಾವೈರಸ್ ಸಾಂಕ್ರಾಮಿಕ ಕಾರಣ, ಐಆರ್ಡಿಎಐ ಜೀವ ವಿಮಾ ಕಂಪನಿಗಳಿಗೆ ರಿಸ್ಕ್ ಹೊಂದಿರುವ ಉತ್ಪನ್ನಗಳ ಮೇಲೆ ಗ್ರಾಹಕರಿಗೆ ವಿದ್ಯುನ್ಮಾನ ಒಪ್ಪಿಗೆ ನೀಡಲು ಅವಕಾಶ ಮಾಡಿಕೊಟ್ಟಿದೆ. ಈ ಸೌಲಭ್ಯವು ಡಿಸೆಂಬರ್ 31, 2020 ರವರೆಗೆ ಇರುತ್ತದೆ. ವಿಮಾ ಕಂಪನಿಗಳ ಪ್ರತಿಕ್ರಿಯೆಯ ನಂತರ, ವಿಮಾ ನಿಯಂತ್ರಕ ಐಆರ್ಡಿಎಐ ಎಲ್ಲಾ ಉತ್ಪನ್ನಗಳಿಗೆ ಈ ಸೌಲಭ್ಯವನ್ನು ಮತ್ತಷ್ಟು ವಿಸ್ತರಿಸಿದೆ.
ಇದನ್ನು ಓದಿ-ಇನ್ಮುಂದೆ ವಿಮಾ ಕಂಪನಿಗಳು ಇ-ಪಾಲಸಿ ಜಾರಿಗೊಳಿಸಬಹುದಾಗಿದೆ, IRDAI ಅನುಮತಿ
Electronic Consent ಹೇಗೆ ಸಿಗುತ್ತದೆ?
ಸುತ್ತೋಲೆಯ ಪ್ರಕಾರ, ಜೀವ ವಿಮಾ ಕಂಪನಿಗಳು ಗ್ರಾಹಕರಿಂದ ವಿದ್ಯುನ್ಮಾನವಾಗಿ ಒಪ್ಪಿಗೆ ಪಡೆಯಬೇಕು, ಅಂದರೆ,ಇದರಲ್ಲಿ ಪ್ರಸ್ತಾವನೆ ರೂಪದಲ್ಲಿ ಗ್ರಾಹಕರ ಭೌತಿಕ ಸಹಿ ಮಾಡುವ ಆವಶ್ಯಕತೆ ಇಲ್ಲ. ಪ್ರಸ್ತಾವನೆಯ ಫಾರ್ಮ್ ಅನ್ನು ಪ್ರಪೋಜರ್ ಇಮೇಲ್ ಐಡಿಗೆ ಅಥವಾ ಮೊಬೈಲ್ ಸಂಖ್ಯೆಗೆ ಇಮೇಲ್ ಅಥವಾ ಸಂದೇಶ ರೂಪದಲ್ಲಿ ಕಳುಹಿಸಲಾಗುತ್ತದೆ ಅಥವಾ ಲಿಂಕ್ ಕಳುಹಿಸಲಾಗುತ್ತದೆ.
ಇದನ್ನು ಓದಿ-ದೇಶದ ಮೊದಲ ವೈಯಕ್ತಿಕ ಕೊವಿಡ್ Life Insurance ಪಾಲಸಿ ಬಿಡುಗಡೆ, ಸಿಗಲಿದೆ ಈ ಲಾಭ
ಪ್ರಪೋಜರ್ ಈ ಸಂದೇಶವನ್ನು ಓದುತ್ತಾರೆ, ಪ್ರಸ್ತಾವನೆಗೆ ಅಂಗೀಕಾರ ನೀಡಲು ಅವರು ಡಿಜಿಟಲ್ ಸಹಿಯನ್ನು ಮಾಡಿ ಕನ್ಫಾರ್ಮೆಶನ್ ಲಿಂಕ್ ಮೇಲೆ ಕ್ಲಿಕ್ಕಿಸುತ್ತಾನೆ. ಈ ಮೌಲ್ಯಮಾಪನದ ನಂತರ ಮೊಬೈಲ್ ಸಂಖ್ಯೆಗೆ ಬಂದ OTP ನಮೂದಿಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುತ್ತದೆ.