Farmer Protest: ಅಕ್ಟೋಬರ್ ವರೆಗೂ ಮುಂದುವರೆಯಲಿದೆ ದೆಹಲಿ ರೈತರ ಪ್ರತಿಭಟನೆ..!

ಸಿಂಘು ಗಡಿಯಲ್ಲಿ ರೈತರನ್ನುದ್ದೇಶಿಸಿ ಮಾತನಾಡಿದ ಟಿಕೈಟ್, ಬೇಡಿಕೆ ಈಡೇರುವವರೆಗೆ ಹಿಂದೆ ಸರಿಯುವ ಪ್ರಶ್ನೆ ಇಲ್ಲ. ಅಕ್ಟೋಬರ್ ವರೆಗೆ ಖಚಿತ ಎಂದಿದ್ದಾರೆ.

Last Updated : Feb 2, 2021, 09:00 PM IST
  • ಕೇಂದ್ರ ಕೃಷಿ ಕಾಯ್ದೆ ವಿರೋಧಿಸಿ ರೈತ ಸಂಘಟನೆಗಳು ದೆಹಲಿ ಗಡಿಯಲ್ಲಿ ಕಳೆದೆರಡು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದೆ. ಪ್ರತಿಭಟನೆ ಹಿಂಸಾ ರೂಪ ಪಡೆದು ಕೋಲಾಹಲ ಸೃಷ್ಟಿಸಿದೆ.
  • ಇದೀಗ ಫೆ.6 ರಂದು ದೇಶಾದ್ಯಂತ ರಸ್ತೆ ತಡೆ ನಡೆಸಲು ಕರೆ ನೀಡಿದೆ. ಇದರ ನಡುವೆ ಎಲ್ಲರನ್ನು ಒಂದು ಪ್ರಶ್ನೆ ಕಾಡುತ್ತಿದೆ. ರೈತ ಪ್ರತಿಭಟನೆ ಎಲ್ಲೀವರಗೆ ನಡೆಯಲಿದೆ? ಇದೀಗ ಈ ಕುತೂಹಲಕ್ಕೆ ಭಾರತೀಯ ಕಿಸಾನ್ ಯೂನಿಯನ್ ಸಂಘದ ನಾಯಕ ರಾಕೇಶ್ ಟಿಕೈಟ್ ಅಧೀಕೃತ ಹೇಳಿಕೆ
  • ಸಿಂಘು ಗಡಿಯಲ್ಲಿ ರೈತರನ್ನುದ್ದೇಶಿಸಿ ಮಾತನಾಡಿದ ಟಿಕೈಟ್, ಬೇಡಿಕೆ ಈಡೇರುವವರೆಗೆ ಹಿಂದೆ ಸರಿಯುವ ಪ್ರಶ್ನೆ ಇಲ್ಲ. ಅಕ್ಟೋಬರ್ ವರೆಗೆ ಖಚಿತ ಎಂದಿದ್ದಾರೆ.
Farmer Protest: ಅಕ್ಟೋಬರ್ ವರೆಗೂ ಮುಂದುವರೆಯಲಿದೆ ದೆಹಲಿ ರೈತರ ಪ್ರತಿಭಟನೆ..! title=

ನವದೆಹಲಿ: ಕೇಂದ್ರ ಕೃಷಿ ಕಾಯ್ದೆ ವಿರೋಧಿಸಿ ರೈತ ಸಂಘಟನೆಗಳು ದೆಹಲಿ ಗಡಿಯಲ್ಲಿ ಕಳೆದೆರಡು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದೆ. ಪ್ರತಿಭಟನೆ ಹಿಂಸಾ ರೂಪ ಪಡೆದು ಕೋಲಾಹಲ ಸೃಷ್ಟಿಸಿದೆ. ಇದೀಗ ಫೆ.6 ರಂದು ದೇಶಾದ್ಯಂತ ರಸ್ತೆ ತಡೆ ನಡೆಸಲು ಕರೆ ನೀಡಿದೆ. ಇದರ ನಡುವೆ ಎಲ್ಲರನ್ನು ಒಂದು ಪ್ರಶ್ನೆ ಕಾಡುತ್ತಿದೆ. ರೈತ ಪ್ರತಿಭಟನೆ ಎಲ್ಲೀವರಗೆ ನಡೆಯಲಿದೆ? ಇದೀಗ ಈ ಕುತೂಹಲಕ್ಕೆ ಭಾರತೀಯ ಕಿಸಾನ್ ಯೂನಿಯನ್ ಸಂಘದ ನಾಯಕ ರಾಕೇಶ್ ಟಿಕೈಟ್ ಅಧೀಕೃತ ಹೇಳಿಕೆ ನೀಡಿದ್ದಾರೆ.

ಕೇಂದ್ರ ಸರ್ಕಾರ ರೈತರ ಬೇಡಿಕೆ ಈಡೇರಿಸುವ ವರೆಗೆ ಪ್ರತಿಭಟನೆ(Farmer Protest) ಮುಂದುವರೆಯಲಿದೆ. ಅಕ್ಟೋಬರ್ ವರೆಗೆ ಪ್ರತಿಭಟನೆ ಮುಂದುವರಿಯುವುದು ಎಂದು ರಾಕೇಶ್ ಟಿಕೈಟ್ ಹೇಳಿದ್ದಾರೆ. ಸಿಂಘು ಗಡಿಯಲ್ಲಿ ರೈತರನ್ನುದ್ದೇಶಿಸಿ ಮಾತನಾಡಿದ ಟಿಕೈಟ್, ಬೇಡಿಕೆ ಈಡೇರುವವರೆಗೆ ಹಿಂದೆ ಸರಿಯುವ ಪ್ರಶ್ನೆ ಇಲ್ಲ. ಅಕ್ಟೋಬರ್ ವರೆಗೆ ಖಚಿತ ಎಂದಿದ್ದಾರೆ.

CBSE Exam Date Sheet 2021: CBSE 10ನೇ ಮತ್ತು 12ನೇ ತರಗತಿ ಪರೀಕ್ಷೆಗಳ Date Sheet ಬಿಡುಗಡೆ, ಹೀಗೆ ಡೌನ್ಲೋಡ್ ಮಾಡಿ

ವಿರೋಧ ಪಕ್ಷಗಳು ರೈತ ಪ್ರತಿಭಟನೆಗೆ ಆಗಮಿಸುವುದರ ಕುರಿತ ನಮಗೇನು ಅಭ್ಯಂತರವಿಲ್ಲ. ಆದರೆ ಪ್ರತಿಭಟನೆನಯನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ಅವಕಾಶ ನೀಡುವುದಿಲ್ಲ ಎಂದು ಟಿಕೈಟ್ ಹೇಳಿದ್ದಾರೆ.

BJP: ದೀದಿ ಬಳಿ ಅನುಮತಿ ಕೇಳಿದ ಬಿಜೆಪಿ..!

ಜನವರಿ 26 ರಂದು ರೈತರು ಆಯೋಜಿಸಿದ್ದ ಟ್ರಾಕ್ಟರ್ ರ್ಯಾಲಿ ಹಿಂಸಾ ರೂಪ ಪಡೆದಿತ್ತು. 500ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದಾರೆ. ದೆಹಲಿ ಕೆಂಪು ಕೋಟೆಯಲ್ಲಿ ಸಿಖ್ ಧ್ವಜ ಹಾರಿಸಿ, ಕೆಂಪು ಕೋಟೆಗೆ ಮುತ್ತಿಗೆ ಹಾಕಲಾಗಿತ್ತು.

Farmers Protest: ಭದ್ರತಾ ಪಡೆಗಳ ಹಠಾತ್ ನಿಯೋಜನೆ, Singhu Border ಪ್ರಸ್ತುತ ಪರಿಸ್ಥಿತಿ ಹೇಗಿದೆ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News