ನವದೆಹಲಿ : ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ವೈರಲ್ (Viral video) ಆಗುತ್ತಿದೆ. ಈ ವಿಡಿಯೋದಲ್ಲಿ ಮಗುವೊಂದು ತನ್ನ ಶಾಲಾ ಶಿಕ್ಷಕರ ಮುಂದೆ ತನ್ನ ಸಂಕಟವನ್ನು ತೋಡಿಕೊಂಡು ಅಳುತ್ತಿದ್ದಾನೆ. ವೀಡಿಯೊದಲ್ಲಿ, ಮಗು ತನ್ನ ಶಿಕ್ಷಕರಿಗೆ ತನ್ನ ತಂದೆ ತನಗೆ ಪುಸ್ತಕವನ್ನು ನೀಡುವುದಿಲ್ಲ, ಆದರೆ ಪ್ರತಿದಿನ ಮದ್ಯಪಾನ ಮಾಡಿಕೊಂಡು ಬರುತ್ತಾನೆ ಎಂದು ಹೇಳುತ್ತದೆ. ಮಗು ಅಳುತ್ತಾ ಹೀಗೆ ಹೇಳುತ್ತಿರುವುದನ್ನು ನೋಡಿದರೆ ಕರುಳು ಚುರುಕೆನ್ನಿಸುತ್ತದೆ.
ವೈರಲ್ ಆಗುತ್ತಿದೆ ವಿಡಿಯೋ :
ಬಿಹಾರದ ರೋಹ್ತಾಸ್ ಜಿಲ್ಲೆಯ ತಿಲೋತು ಬ್ಲಾಕ್‌ನಲ್ಲಿರುವ ಸರ್ಕಾರಿ ಶಾಲೆಯೊಂದರ ವಿಡಿಯೋ (School video) ಇದಾಗಿದೆ. ತರಗತಿಯಲ್ಲಿ ಶಿಕ್ಷಕನ ಮುಂದೆ ಮಗು ಅಳುತ್ತಿರುವುದನ್ನು ಇದರಲ್ಲಿ ಕಾಣಬಹುದು. ಬಾಲಕನಲ್ಲಿ ಪುಸ್ತಕ ಯಾಕೆ ತಂದಿಲ್ಲ ಎಂದು ಶಿಕ್ಷಕರು ಕೇಳಿದ ಪ್ರಶ್ನೆಗೆ ಬಾಲಕ ಉತ್ತರಿಸುತ್ತಾನೆ. ತಂದೆ ಎಲ್ಲಾ ಹಣವನ್ನು ಮದ್ಯಪಾನಕ್ಕಾಗಿ ಖರ್ಚು ಮಾಡುತ್ತಾರೆ ಮತ್ತು ಓದಲು ಪುಸ್ತಕವನ್ನು ನೀಡುವುದಿಲ್ಲ ಎಂದು ತನ್ನ ಸಂಕಟವನ್ನು ಹೇಳಿಕೊಂಡು ಅಳುತ್ತಾನೆ (Boy crying video) .
बच्चे ने पिता के सामने टीचर से रोते हुए की शिकायत
"पापा किताब नहीं खरीद रहे, सिर्फ दारू पी रहे हैं" pic.twitter.com/3RbHkBL5Tz
— Utkarsh Singh (@UtkarshSingh_) November 26, 2021
ಇದನ್ನೂ ಓದಿ : ಹೆಬ್ಬಾವಿನ ಮೊಟ್ಟೆಯನ್ನು ಮುಟ್ಟಲು ಹೋದ ವ್ಯಕ್ತಿಗೆ ಹಾವು ಮಾಡಿದ್ದೇನು ? ಈ ವಿಡಿಯೋ ನೋಡಿ
‘ಐದು ದಿನ ನಿರಂತರವಾಗಿ ಹೇಳಿದರೂ ಪುಸ್ತಕವನ್ನು ಏಕೆ ಖರೀದಿಸಲಿಲ್ಲ’ ಎಂದು ಶಿಕ್ಷಕರು ಮಗುವನ್ನು ಕೇಳುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ವೇಳೆ ಮಗು ತನ್ನ ನೋವನ್ನು ಹೇಳಿಕೊಳ್ಳುತ್ತದೆ. ಈ ಸಮಯದಲ್ಲಿ ಮಗುವಿನ ತಂದೆ ಕೂಡ ತರಗತಿಯಲ್ಲಿ ಇರುವುದನ್ನು ಕಾಣಬಹುದು. ತನ್ನ ತಂದೆ ಪುಸ್ತಕಗಳ ಬದಲು ಮದ್ಯಕ್ಕೆ ಹಣವನ್ನು ಖರ್ಚು ಮಾಡುತ್ತಾನೆ ಎಂದು ಮಗು ದೂರು ನೀಡುವಾಗ ತರಗತಿಯಲ್ಲಿದ್ದ ತಂದೆ ಕೂಡಾ ತನ್ನ ತಪ್ಪನ್ನು ಒಪ್ಪಿಕೊಳ್ಳುವುದನ್ನು ಕಾಣಬಹುದು.
ಬಿಹಾರದಲ್ಲಿ ಮದ್ಯ ನಿಷೇಧ ಜಾರಿಯಲ್ಲಿದೆ. ಈ ನಡುವೆ ಈ ವಿಡಿಯೋ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಈ ಮಗುವಿನ ಸಹೋದರಿ ಕೂಡ ವಿಡಿಯೋದಲ್ಲಿ (Viral video) ಕಾಣಿಸಿಕೊಂಡಿದ್ದಾರೆ. ಆಕೆ ಕೂಡಾ ತನ್ನ ತಂದೆ ಎಲ್ಲಾ ಹಣವನ್ನು ಮದ್ಯಕ್ಕೆ ಖರ್ಚು ಮಾಡುತ್ತಿದ್ದಾನೆ ಎಂದು ಹೇಳುತ್ತಿದ್ದಾಳೆ.
ಇದನ್ನೂ ಓದಿ : Viral Video:ಕೈ ಪಂಪ್ ಒತ್ತಿ ನೀರು ಕುಡಿದು ಬಾಯಾರಿಕೆ ತಣಿಸಿಕೊಂಡ ಎಮ್ಮೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.