ಬೆಂಗಳೂರು: ಮಾನ್ಸೂನ್ ವಿಳಂಬದಿಂದಾಗಿ ದೇಶದ ಬಹುತೇಕ ಭಾಗಗಳಲ್ಲಿ ಈಗ ಬಿಸಿಲಿನ ತೀವ್ರತೆ ಅಧಿಕಗೊಂಡಿದೆ. ಈ ಹಿನ್ನಲೆಯಲ್ಲಿ ಈಗ ಜನರು ಬಗೆ ಬಗೆ ತಂತ್ರಗಳ ಮೂಲಕ ಮಳೆರಾಯನನ್ನು ಒಲಿಸಿಕೊಳ್ಳುವ ಯತ್ನಕ್ಕೆ ಮುಂದಾಗಿದ್ದಾರೆ.
Bengaluru: Pooja performed at Someshwara temple in Halasuru yesterday for better monsoon. #Karnataka pic.twitter.com/Pe8Fo91MMU
— ANI (@ANI) June 7, 2019
ಎಎನ್ಐ ಸುದ್ದಿ ಸಂಸ್ಥೆ ಶೇರ್ ಮಾಡಿರುವ ಫೋಟೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ವೈರಲ್ ಆಗಿದೆ.ಇದರಲ್ಲಿ ಹಲಸೂರಿನ ಸೋಮೇಶ್ವರ್ ದೇವಸ್ತಾನದಲ್ಲಿ ನೀರಿನ ತುಂಬಿಸಿದ ಬೋಗಾನಿಗಳಲ್ಲಿ ಕುಳಿತುಕೊಂಡು ಪುಜಾರಿಗಳು ಮೊಬೈಲ್ ಮಂತ್ರ ಪಠಿಸುವ ಮೂಲಕ ವಿಶೇಷ ಪೂಜಾ ಕಾರ್ಯವನ್ನು ಕೈಗೊಂಡಿದ್ದಾರೆ.
Pujaris connecting to iCloud https://t.co/Vfw77k0NGV
— ankit upadhyay (@sunny_shine1991) June 7, 2019
ಈ ಫೋಟೋದಲ್ಲಿ ಇಬ್ಬರು ಪುಜಾರಿಗಳಿದ್ದಾರೆ ಅದರಲ್ಲಿ ಒಬ್ಬ ಯುವಕ, ಇನ್ನೊಬ್ಬ ಹಿರಿಯ ಪುಜಾರಿ ವಿಶೇಷ ಪೂಜಾ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ. ಈ ಪೂಜಾ ವಿಧಾನಕ್ಕೆ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಟ್ರೋಲ್ ಮಾಡಲಾಗಿದೆ.ಅಂಕಿತ್ ಉಪಾಧ್ಯಾಯ ಎನ್ನುವವರು ಪುಜಾರಿಗಳು ಈಗ ಐಕ್ಲೌಡ್ ಗೆ ಸಂಪರ್ಕಿಸುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. ಇನ್ನೊಬ್ಬರು ಮಳೆಗಾಗಿ ಇಂದ್ರ ದೇವ್ ನಿಗೆ ವಾಟ್ಸಪ್ ಮಾಡುತ್ತಿದ್ದಾರೆಯೇ ? ಎಂದು ಪ್ರಶ್ನಿಸಿದ್ದಾರೆ. ವೆಂಕಟೇಶ್ ಭಟ್ ಎನ್ನುವವರು ಬೇಸಿಗೆಯಲ್ಲಿ ಕರೆಂಟ್ ಇಲ್ಲದಿರುವ ಸಂದರ್ಭದಲ್ಲಿ ಈ ರೀತಿ ಮಾಡಲಾಗುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.