ಪ್ರಜಾಪ್ರಭುತ್ವದ ಬಗೆಗಿನ ರಾಹಲ್‌ ಗಾಂಧಿ ಹೇಳಿಕೆ ಖಂಡನೀಯ; ಸಚಿವ ಪ್ರಲ್ಹಾದ್‌ ಜೋಶಿ

Pralhad Joshi : "ರಾಹುಲ್ ಗಾಂಧಿ ಅವರಿಗೆ ಮಾನಸಿಕವಾಗಿ ಏನೋ ಸಮಸ್ಯೆ ಆದ ಹಾಗಿದೆ ಸತತ ಸೋಲಿನಿಂದ ಹತಾಶರಾಗಿ ಅವರು ದೇಶದ ಪ್ರಜಾಪ್ರಭುತ್ವದ ಬಗ್ಗೆ ಅತ್ಯಂತ ಬಾಲಿಶವಾಗಿ ಮಾತನಾಡುತ್ತಿದ್ದಾರೆ". ಎಂದು ಸಚಿವ ಪ್ರಲ್ಹಾದ್‌ ಜೋಶಿ ಮಂಗಳವಾರ ಬಳ್ಳಾರಿಯಲ್ಲಿ ರಾಹುಲ್‌ ಗಾಂಧಿ ಹೇಳಿಕೆ ವಿರುಧ್ಧ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದಾರೆ.   

Written by - Zee Kannada News Desk | Last Updated : Mar 7, 2023, 06:19 PM IST
  • ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಕೂಡ ಕಿಡಿ ಕಾರಿದ್ದು,
  • ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ನಾಯಕರು ತೀವ್ರ ಟೀಕೆ ಮಾಡುತ್ತಿದ್ದಾರೆ.
  • ತಂದೆಯ ಹತ್ಯೆಗೆ ಭಯೋತ್ಪಾದಕರೆ ಕಾರಣ ಅನ್ನೋದನ್ನ ರಾಹುಲ್ ಗಾಂಧಿ ಮರೆಯದಿರಲಿ"
ಪ್ರಜಾಪ್ರಭುತ್ವದ ಬಗೆಗಿನ ರಾಹಲ್‌ ಗಾಂಧಿ ಹೇಳಿಕೆ ಖಂಡನೀಯ; ಸಚಿವ ಪ್ರಲ್ಹಾದ್‌ ಜೋಶಿ  title=

Pralhad Joshi : ದೇಶದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಹೇಳಿಕೆ ನೀಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ನಾಯಕರು ತೀವ್ರ ಟೀಕೆ ಮಾಡುತ್ತಿದ್ದಾರೆ. ಇದರ ನಡುವೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಕೂಡ ಕಿಡಿ ಕಾರಿದ್ದು, "ಬ್ರಿಟನ್‌ನಲ್ಲಿ ಭಾರತದ ಪ್ರಜಾಪ್ರಭುತ್ವದ ಬಗ್ಗೆ ರಾಹುಲ್ ಗಾಂಧಿ ಅತ್ಯಂತ ಬಾಲಿಶವಾಗಿ ಹೇಳಿಕೆ ನೀಡಿದ್ದಾರೆ" ಅಲ್ಲದೇ "ಬ್ರಿಟನ್, ಅಮೆರಿಕಾ ಎಂದು ಓಡಾಡುತ್ತಿರುವ ರಾಹುಲ್ ಗಾಂಧಿ ದೇಶದ ಪ್ರಜಾಪ್ರಭುತ್ವದ ಬಗ್ಗೆ ನೀಡುತ್ತಿರುವ ಹೇಳಿಕೆ ಖಂಡನೀಯ. ರಾಹುಲ್ ಗಾಂಧಿ ಅವರು ಬ್ರಿಟನ್ ನಲ್ಲಿ ಭಾರತದ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದಿದ್ದಾರೆ‌. ಪ್ರಪಂಚದ ಮೂರನೇ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತ" ಎಂದು ರಾಹುಲ್‌ ಗಾಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ, 

"ರಾಹುಲ್ ಗಾಂಧಿ ಅವರಿಗೆ ಮಾನಸಿಕವಾಗಿ ಏನೋ ಸಮಸ್ಯೆ ಆದ ಹಾಗಿದೆ. ಸತತ ಸೋಲಿನಿಂದ ಹತಾಶರಾಗಿ ಅವರು ದೇಶದ ಪ್ರಜಾಪ್ರಭುತ್ವದ ಬಗ್ಗೆ ಅತ್ಯಂತ ಬಾಲಿಶವಾಗಿ ಮಾತನಾಡುತ್ತಿದ್ದಾರೆ. ಮಾನಸಿಕವಾಗಿ ಅವರಿಗೆ ತೊಂದರೆ ಇದ್ದಂತೆ ಕಾಣ್ತಿದೆ. ಪ್ರತಿಪಕ್ಷಗಳ ಮೈಕ್ ಗಳು ಆಫ್ ಆಗ್ತಾ ಇವೆ ಅಂದಿದ್ದಾರೆ. ಆದರೆ ದೇಶದ ಜನರೇ ಅವರ ಮೈಕ್ ಗಳನ್ನ ಆಫ್ ಮಾಡಿದ್ದಾರೆ ಅನ್ನೋ ಸತ್ಯವನ್ನ ರಾಹುಲ್ ಗಾಂಧಿ ತಿಳಿದುಕೊಳ್ಳಬೇಕು" ಎಂದು ಲೇವಡಿ ಮಾಡಿದ್ದಾರೆ.

ಇದನ್ನೂ ಓದಿ-ಶಾರ್ಟ್ ಸರ್ಕ್ಯೂಟ್‌ನಿಂದ ಎಸಿ ಸ್ಫೋಟ- ತಾಯಿ ಮತ್ತಿಬ್ಬರು ಮಕ್ಕಳು ಸಜೀವ ದಹನ

ಇತ್ತೀಚೆಗೆ ಲೋಕಸಭೆಯಲ್ಲಿ ಮೋಷನ್ ಆಪ್ ಥ್ಯಾಂಕ್ ವೇಳೆ ರಾಹುಲ್ ಗಾಂಧಿ ಅವರಿಗೆ 1 ಗಂಟೆ 9 ನಿಮಷ ಮಾತನಾಡಲು ಸಮಯದ ಅವಕಾಶವಿತ್ತು. ಆದರೆ, ಸ್ಪೀಕರ್ ಅವರು ಅವರು 2 ಗಂಟೆ ಸಮಯ ಕೊಟ್ಟಿದ್ದರು. ಸದನದಲ್ಲಿ ಪ್ರತಿಪಕ್ಷಗಳಿಗೆ ಹೆಚ್ಚಿನ ಕಾಲಾವಕಾಶ ನೀಡಲಾಗ್ತಿದೆ. ಆದರೆ, ಪ್ರತಿಪಕ್ಷಗಳೇ ಸದನದಲ್ಲಿ ಚರ್ಚಿಸದೆ ಗದ್ದಲ ಎಬ್ಬಿಸಿದ್ದನ್ನ ದೇಶದ ಜನ ನೋಡಿದ್ದಾರೆ ಎಂದು ಸದನದಲ್ಲಿ ಪ್ರತಿಪಕ್ಷಗಳ ಗದ್ದಲವನ್ನು ವಿವರಿಸಿದ್ದಾರೆ.

ಹೊರದೇಶಕ್ಕೆ ಹೋಗಿ ದೇಶದ ಪ್ರಜಾಪ್ರಭುತ್ವದ ಬಗ್ಗೆ ನೆಗೆಟಿವ್ ಆಗಿ ಮಾತಾಡುವ ರಾಹುಲ್ ಗಾಂಧಿ ತಮ್ಮ ಅಜ್ಜಿ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಜಾರಿ ಮಾಡಿದ್ದು ಮರೆತಿದ್ದಾರೆ. ಇಡೀ ಪ್ರಜಾಪ್ರಭುತ್ವದ ವಿರುದ್ಧ ತುರ್ತು ಪರಿಸ್ಥಿತಿ ಹೇರಿ ಸರ್ವಾಧಿಕಾರಿ ಧೋರಣೆ ಅನುಸರಿಸಿದವರು ಕಾಂಗ್ರೆಸ್‌ನವರೇ. ಇಡೀ ಮಂತ್ರಿಮಂಡಲ ಜಾರಿ ಮಾಡಿದ ನಿರ್ಣಯಗಳನ್ನ ಹರಿದುಹಾಕುವ ಮೂಲಕ ಪ್ರಜಾಪ್ರಭುತ್ವಕ್ಕೆ ಅವಮಾನ ಮಾಡಿದವರು ರಾಹುಲ್ ಗಾಂಧಿ. ಈಗ ಪ್ರಜಾಪ್ರಭುತ್ವ ತೊಂದರೆಯಲ್ಲಿದೆ ಅಂತಿದ್ದಾರೆ ಎಂದು ಪ್ರಲ್ಹಾದ್ ಜೋಶಿ ಕಿಡಿಕಾರಿದ್ದಾರೆ. 

ಇದನ್ನೂ ಓದಿ-ಇಬ್ಬರು ʼಗಂಡಸರʼ ನಡುವೆ ʼಹೋಮೋ ಸೆಕ್ಸ್‌ʼ : ಬೇರೆ ಹುಡುಗಿ ಮದುವೆಯಾಗಿದ್ದಕ್ಕೆ ಕೊಲೆ..!  

ಮುಂದುವರಿದು, "ಭಾರತ್ ಜೋಡೋ ವೇಳೆ ಭಯೋತ್ಪಾದಕರ ಬಗ್ಗೆ ರಾಹುಲ್ ಗಾಂಧಿ ಅವರಿಗೆ ಸಂಶಯ ಬಂದಿದ್ದರೇ ಆಗ ಏಕೆ ದೂರು ನೀಡಲಿಲ್ಲ. ಇವರ ತಂದೆಯ ಹತ್ಯೆಗೆ ಭಯೋತ್ಪಾದಕರೆ ಕಾರಣ ಅನ್ನೋದನ್ನ ರಾಹುಲ್ ಗಾಂಧಿ ಮರೆಯದಿರಲಿ" ಎಂದು ಪ್ರಲ್ಹಾದ್ ಜೋಶಿ ಹೇಳಿದ್ದಾರೆ. ಇನ್ನು, ಚನ್ನಗಿರಿ ಶಾಸಕ ಮಾಡಳ್ ವಿರೂಪಾಕ್ಷಪ್ಪ ಲಂಚ ಪ್ರಕರಣದ ವಿಚಾರದಲ್ಲಿ ಪಕ್ಷ ಸೂಕ್ತ ತನಿಖೆ ನಡೆಸುತ್ತಿದೆ. ರಾಷ್ಟ್ರೀಯ ನಾಯಕರು ಪ್ರಕರಣವನ್ನು ಸೂಕ್ಷವಾಗಿ ಗಮನಿಸುತ್ತಿದ್ದು ಸೂಕ್ತ ತೀರ್ಮಾನ ಕೈಗೊಳ್ಳುತ್ತಾರೆ ಎಂದು ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News