ಷೇರು ಮಾರುಕಟ್ಟೆಯಲ್ಲಿ ಮತ್ತೆ ತಲ್ಲಣ, 500ಕ್ಕೂ ಅಧಿಕ ಸೂಚ್ಯಂಕ ಕುಸಿತ

ಎಸ್ & ಪಿ ಬಿಎಸ್ಇ ಸೆನ್ಸೆಕ್ಸ್ ಮತ್ತು ಎನ್ಎಸ್ಇ ನಿಫ್ಟಿ 50 ಸೂಚ್ಯಂಕಗಳು ಇಂದಿನ ಶೇರು ಮಾರುಕಟ್ಟೆ ವ್ಯಾಪಾರ ವಹಿವಾಟಿನಲ್ಲಿ ತೀವ್ರ ನಷ್ಟ ಅನುಭವಿಸಿವೆ. 

Last Updated : Sep 25, 2019, 03:34 PM IST
ಷೇರು ಮಾರುಕಟ್ಟೆಯಲ್ಲಿ ಮತ್ತೆ ತಲ್ಲಣ, 500ಕ್ಕೂ ಅಧಿಕ ಸೂಚ್ಯಂಕ ಕುಸಿತ  title=
file photo

ನವದೆಹಲಿ: ಎಸ್ & ಪಿ ಬಿಎಸ್ಇ ಸೆನ್ಸೆಕ್ಸ್ ಮತ್ತು ಎನ್ಎಸ್ಇ ನಿಫ್ಟಿ 50 ಸೂಚ್ಯಂಕಗಳು ಇಂದಿನ ಶೇರು ಮಾರುಕಟ್ಟೆ ವ್ಯಾಪಾರ ವಹಿವಾಟಿನಲ್ಲಿ ತೀವ್ರ ನಷ್ಟ ಅನುಭವಿಸಿವೆ. 

ಒಂದೇ ದಿನದಲ್ಲಿ ಹಲವು ಬಾರಿಗೆ ಕುಸಿತ ಕಂಡು ಅಂತಿಮವಾಗಿ 516 ಸೂಚ್ಯಂಕದಷ್ಟು ಕುಸಿತ ಕಾಣುವ ಮೂಲಕ ಈಗ ಸೆನ್ಸೆಕ್ಸ್ 38,580.31ಕ್ಕೆ ತಲುಪಿದೆ. ಎನ್‌ಎಸ್‌ಇ ನಿಫ್ಟಿ 50 ಸೂಚ್ಯಂಕವು 148 ಸೂಚ್ಯನ್ಕದಷ್ಟು ಕುಸಿತ ಕಂಡು 11,450 ರ ಪ್ರಮುಖ ಮಟ್ಟಕ್ಕಿಂತ ಕೆಳಗಿಳಿದಿದೆ ಎನ್ನಲಾಗಿದೆ. 

ಭಾರತದಲ್ಲಿನ ಮಾರುಕಟ್ಟೆಯಲ್ಲಿನ ನಷ್ಟವು ಪ್ರಮುಖವಾಗಿ ಏಷ್ಯಾದ ಇತರ ಕಂಪನಿಗಳ ಹಿನ್ನಲೆಯಲ್ಲಿ ಬಂದಿದೆ ಎನ್ನಲಾಗಿದೆ. ಅಮೆರಿಕದ ಸಂಸದರು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ದೋಷಾರೋಪಣೆ ವಿಚಾರಣೆಗೆ ಕರೆ ನೀಡಿದ ನಂತರ, ಅಮೆರಿಕಾದ ರಾಜಕೀಯ ಅನಿಶ್ಚಿತತೆಯ ನಿರೀಕ್ಷೆಯನ್ನು ಹೆಚ್ಚಿಸಿತು. ಈ ಹಿನ್ನಲೆಯಲ್ಲಿ ಮಾರುಕಟ್ಟೆಯಲ್ಲಿನ ಕುಸಿತಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.

ಈಗ ಸೆನ್ಸೆಕ್ಸ್ ನಲ್ಲಿ ನಷ್ಟವಾಗಿರುವ ಕಂಪನಿಗಳಲ್ಲಿ ಎಚ್‌ಡಿಎಫ್‌ಸಿ, ಎಚ್‌ಡಿಎಫ್‌ಸಿ ಬ್ಯಾಂಕ್, ಕೊಟಕ್ ಮಹೀಂದ್ರಾ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಆಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ಮಾರುತಿ ಸುಜುಕಿ ಸೇರಿವೆ ಎನ್ನಲಾಗಿದೆ .

 

Trending News