ನಕಲಿ ಕೊರೊನಾ ಲಸಿಕೆ ಪಡೆದ ನಂತರ ಟಿಎಂಸಿ ಸಂಸದೆ ಮಿಮಿ ಚಕ್ರವರ್ತಿ ಆರೋಗ್ಯದಲ್ಲಿ ಅಸ್ತವ್ಯಸ್ಥ

ತೃಣಮೂಲ ಕಾಂಗ್ರೆಸ್ ಸಂಸದೆ ಮಿಮಿ ಚಕ್ರವರ್ತಿ ನಾಲ್ಕು ದಿನಗಳ ಹಿಂದೆ ನಕಲಿ ಕೋವಿಡ್ ಲಸಿಕೆ ತೆಗೆದುಕೊಂಡಿದ್ದರಿಂದಾಗಿ ಶನಿವಾರದಂದು ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಎಂದು ಪಿಟಿಐ ವರದಿ ತಿಳಿಸಿದೆ.

Written by - Zee Kannada News Desk | Last Updated : Jun 26, 2021, 05:45 PM IST
  • ತೃಣಮೂಲ ಕಾಂಗ್ರೆಸ್ ಸಂಸದೆ ಮಿಮಿ ಚಕ್ರವರ್ತಿ ನಾಲ್ಕು ದಿನಗಳ ಹಿಂದೆ ನಕಲಿ ಕೋವಿಡ್ ಲಸಿಕೆ ತೆಗೆದುಕೊಂಡಿದ್ದರಿಂದಾಗಿ ಶನಿವಾರದಂದು ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಎಂದು ಪಿಟಿಐ ವರದಿ ತಿಳಿಸಿದೆ.
  • ಬಂಗಾಳದ ಜಾದವ್‌ಪುರದ ಲೋಕಸಭಾ ಪ್ರತಿನಿಧಿಸುವ ಮಿಮಿ ಚಕ್ರವರ್ತಿ ಆರೋಗ್ಯವನ್ನು ನೋಡಿಕೊಳ್ಳುತ್ತಿರುವ ವೈದ್ಯರು ಅವರ ಅನಾರೋಗ್ಯವನ್ನು ನಕಲಿ ಲಸಿಕೆಯೊಂದಿಗೆ ಜೋಡಿಸುವುದನ್ನು ಪರಿಶೀಲಿಸಬೇಕಾಗಿದೆ ಎಂದು ಹೇಳಿದ್ದಾರೆ.
 ನಕಲಿ ಕೊರೊನಾ ಲಸಿಕೆ ಪಡೆದ ನಂತರ ಟಿಎಂಸಿ ಸಂಸದೆ ಮಿಮಿ ಚಕ್ರವರ್ತಿ ಆರೋಗ್ಯದಲ್ಲಿ ಅಸ್ತವ್ಯಸ್ಥ  title=
ಸಂಗ್ರಹ ಚಿತ್ರ

ನವದೆಹಲಿ: ತೃಣಮೂಲ ಕಾಂಗ್ರೆಸ್ ಸಂಸದೆ ಮಿಮಿ ಚಕ್ರವರ್ತಿ ನಾಲ್ಕು ದಿನಗಳ ಹಿಂದೆ ನಕಲಿ ಕೋವಿಡ್ ಲಸಿಕೆ ತೆಗೆದುಕೊಂಡಿದ್ದರಿಂದಾಗಿ ಶನಿವಾರದಂದು ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಎಂದು ಪಿಟಿಐ ವರದಿ ತಿಳಿಸಿದೆ.

ಬಂಗಾಳದ ಜಾದವ್‌ಪುರದ ಲೋಕಸಭಾ ಪ್ರತಿನಿಧಿಸುವ ಮಿಮಿ ಚಕ್ರವರ್ತಿ ಆರೋಗ್ಯವನ್ನು ನೋಡಿಕೊಳ್ಳುತ್ತಿರುವ ವೈದ್ಯರು ಅವರ ಅನಾರೋಗ್ಯವನ್ನು ನಕಲಿ ಲಸಿಕೆಯೊಂದಿಗೆ ಜೋಡಿಸುವುದನ್ನು ಪರಿಶೀಲಿಸಬೇಕಾಗಿದೆ ಎಂದು ಹೇಳಿದ್ದಾರೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ: Covid-19 Vaccine Certificate ನಲ್ಲಿನ ತಪ್ಪಾಗಿರುವ ಮಾಹಿತಿ ಮನೆಯಿಂದಲೇ ಸರಿಪಡಿಸುವುದು ಹೇಗೆ?

ಪಿಟಿಐ ವರದಿ ಪ್ರಕಾರ ಮಿಮಿ ಚಕ್ರವರ್ತಿ (Mimi Chakraborty) ನಿರ್ಜಲೀಕರಣ ಮತ್ತು ಹೊಟ್ಟೆ ನೋವಿನಿಂದ ಬಳಲುತ್ತಿದ್ದರು ಮತ್ತು ಆಕೆಯ ರಕ್ತದೊತ್ತಡ ಕಡಿಮೆಯಾಗಿದೆ ಎಂದು ಅವರ ಕುಟುಂಬದ ಆಪ್ತ ಮೂಲಗಳು ತಿಳಿಸಿವೆ. ಆದಾಗ್ಯೂ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಿದ್ದಾರೆ. ಅವರಿಗೆ ಈ ಹಿಂದೆ ಪಿತ್ತಕೋಶ ಮತ್ತು ಪಿತ್ತಜನಕಾಂಗಕ್ಕೆ ಸಂಬಂಧಿಸಿದ ಕಾಯಿಲೆಗಳಿಂದ ಬಳಲುತ್ತಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ಎರಡು ಡೋಸ್ ಗಳ ಕೋವಿಶೀಲ್ಡ್ ಕಾಲಮೀತಿ ಕುರಿತು ಆರೋಗ್ಯ ಸಚಿವರು ಹೇಳಿದ್ದೇನು?

ಕೋಲ್ಕತಾ ಮುನ್ಸಿಪಲ್ ಕಾರ್ಪೋರೇಶನ್ ಆಯೋಜಿಸುತ್ತಿದೆ ಎಂದು ಅವರು ಹೇಳಿರುವ ದೇಬ್ ಅವರ 'ಕ್ಯಾಂಪ್'ಗೆ ಹಾಜರಾಗಲು ಒಪ್ಪಿಕೊಂಡರು ಮತ್ತು ಶಾಟ್ ಪಡೆಯಲು ಜನರನ್ನು ಉತ್ತೇಜಿಸಲು ಕೊರೊನಾ ಲಸಿಕೆ (Corona Vaccine) ಪಡೆಯಿರಿ ಎಂದು ಅವರು ಮಿಮಿ ಹೇಳಿದ್ದರು.ಕೋವಿನ್‌ನಿಂದ ಧೃಡಿಕರಣ ಸಂದೇಶವನ್ನು ಸ್ವೀಕರಿಸಲು ವಿಫಲವಾದ ನಂತರ ತಾನು ಅನುಮಾನಾಸ್ಪದಳಾಗಿದ್ದೇನೆ ಎಂದು ಅವರು ಹೇಳಿದರು.

ಇದನ್ನೂ ಓದಿ: Corona Vaccine For Children: ಸಿದ್ಧಗೊಂಡಿದೆ ಮಕ್ಕಳ 'ಸುರಕ್ಷಾ ಕವಚ'! ಕೋತಿಗಳ ಮೇಲಿನ ಆರಂಭಿಕ ಪರೀಕ್ಷೆ ಯಶಸ್ವಿ !

ಬುಧವಾರ, ಐಎಎಸ್ ಅಧಿಕಾರಿಯಂತೆ ನಟಿಸಿದ ಮತ್ತು ಕೋಲ್ಕತ್ತಾದಲ್ಲಿ ಸಾವಿರಾರು ಲಸಿಕೆಗಳನ್ನು ಮೇಲ್ವಿಚಾರಣೆ ಮಾಡಿದ ಡೆಬಂಜನ್ ದೇಬ್ ಅವರನ್ನು ಬಂಧಿಸಲಾಯಿತು.

ದೇಬಂಜನ್ ದೇಬ್ ಮೇಲೆ ಈಗ ಕೊಲೆ ಯತ್ನದ ಪ್ರಕರಣ ದಾಖಲಿಸಬಹುದು, ಈ ಕೃತ್ಯದಲ್ಲಿ ಭಾಗಿಯಾದವರಿಗೆ ಶಿಕ್ಷೆ ವಿಧಿಸಲು ಮಮತಾ ಬ್ಯಾನರ್ಜೀ ಅವರು ಕೊಲ್ಕತ್ತಾ ಪೊಲೀಸರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.ಇತರ ಮೂವರನ್ನು ಸಹ ಬಂಧಿಸಲಾಗಿದೆ.ಇಬ್ಬರು ಬ್ಯಾಂಕ್ ಖಾತೆಗಳನ್ನು ತೆರೆಯಲು ಸಹಿ ಹಾಕಿದ್ದಕ್ಕಾಗಿ ಮತ್ತು ಮೂರನೆಯವರು ವ್ಯಾಕ್ಸಿನೇಷನ್ ಶಿಬಿರಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಕ್ಕಾಗಿ. ಮೂವರನ್ನೂ ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.

ಇನ್ನೊಂದೆಡೆಗೆ ತೃಣಮೂಲ ನಾಯಕರೊಂದಿಗೆ ಇರುವ ದೇಬ್ ಅವರ ಫೋಟೋಗಳನ್ನು ತೋರಿಸಿ, ಪ್ರತಿಪಕ್ಷ ಬಿಜೆಪಿ ಸಿಬಿಐ ತನಿಖೆಗೆ ಆಗ್ರಹಿಸಿದೆ.

ಇದನ್ನೂ ಓದಿ : Nicotine Selling License: 'ಇನ್ಮುಂದೆ ತಂಬಾಕು, ಸಿಗರೇಟ್ ಮಾರಾಟ ಮಾಡಲೂ ಕೂಡ ಲೈಸನ್ಸ್ ಪಡೆಯಬೇಕು'

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News