ನವದೆಹಲಿ : ಡ್ರೈವಿಂಗ್ ಲೈಸನ್ಸ್ ಬೇಕು. ಆದ್ರೆ, RTO ದಲ್ಲಿ ಚಾಲನಾ ಪರೀಕ್ಷೆಯನ್ನ ನೀಡಲು ಇಷ್ಟವಿಲ್ಲ ಅನ್ನೋರಿಗೆ ಗುಡ್ ನ್ಯೂಸ್ ಇಲ್ಲಿದೆ. ಹೌದು, ಶೀಘ್ರದಲ್ಲೇ ಜನರು RTOದಲ್ಲಿ ಚಾಲನಾ ಪರೀಕ್ಷೆಯಿಲ್ಲದೆ ಚಾಲನಾ ಪರವಾನಗಿ ಪಡೆಯಬಹುದು. ಆದ್ರೆ, ಇದಕ್ಕಾಗಿ ನೀವು ರಸ್ತೆ ಸಾರಿಗೆ ಸಚಿವಾಲಯದಿಂದ ಮಾನ್ಯತೆ ಪಡೆದ ಚಾಲನಾ ಪರೀಕ್ಷಾ ಕೇಂದ್ರದಿಂದ ತರಬೇತಿ ಪಡೆಯಬೇಕಾಗುತ್ತೆ. ನಂತ್ರ ಕೇಂದ್ರದಿಂದ ಪ್ರಮಾಣಪತ್ರ ನೀಡಲಾಗುತ್ತೆ. ಇನ್ನು ಚಾಲನಾ ಪರವಾನಗಿ ಪಡೆಯುವಾಗ ನೀವಿದನ್ನ ತೋರಿಸಿದ್ರೆ ಸಾಕು, ಪರೀಕ್ಷೆ ಇಲ್ಲದೆಯೇ ಲೈಸನ್ಸ್ ನೀಡಲಾಗುತ್ತೆ.
ಈ ಮಾನ್ಯತೆ ಪಡೆದ ಟ್ರೈನಿಂಗ್ ಕೇಂದ್ರಗಳು(Training Center) 1 ಜುಲೈ 2021 ರಿಂದ ಪ್ರಾರಂಭವಾಗುತ್ತವೆ. ಈ ಸಂಬಂಧ ರಸ್ತೆ ಸಾರಿಗೆ ಸಚಿವಾಲಯ ಆದೇಶ ಹೊರಡಿಸಿದೆ.
ಇದನ್ನೂ ಓದಿ : 7th Pay Commission : ಕೇಂದ್ರ ಸರ್ಕಾರಿ ನೌಕರರಿಗೆ DA, DR ಕುರಿತು ಮಹತ್ವದ ಮಾಹಿತಿ
ರಸ್ತೆ ಸಾರಿಗೆ ಸಚಿವಾಲಯ(Ministry of Road Transport)ದ ಪ್ರಕಾರ, ಪ್ರತಿ ವರ್ಷ ದೇಶದಲ್ಲಿ ಅಪಘಾತಗಳಿಗೆ ಒಂದು ಸಾಮಾನ್ಯ ಕಾರಣವೆಂದ್ರೆ, ಟ್ರೆಂಡ್ ಚಾಲಕರ ಕೊರತೆ. ಸಚಿವಾಲಯದ ಪ್ರಕಾರ, ಪ್ರಸ್ತುತ ದೇಶದಲ್ಲಿ ಸುಮಾರು 22 ಲಕ್ಷ ಚಾಲಕರ ಕೊರತೆ ಇದೆ. ಈ ಕೊರತೆಯನ್ನ ಪೂರೈಸಲು ಮತ್ತು ರಸ್ತೆ ಅಪಘಾತಗಳನ್ನ ಕಡಿಮೆ ಮಾಡಲು, ರಸ್ತೆ ಮತ್ತು ಸಾರಿಗೆ ಸಚಿವಾಲಯವು ನಿಗದಿಪಡಿಸಿದ ಮಾರ್ಗಸೂಚಿಗಳ ಪ್ರಕಾರ ದೇಶಾದ್ಯಂತ ಚಾಲಕ ಟ್ಯಾನಿಂಗ್ ಕೇಂದ್ರಗಳನ್ನ ತೆರೆಯಲು ಅನುಮತಿ ನೀಡಿದೆ.
ಇದನ್ನೂ ಓದಿ : ಮತ್ತೆ ಟಿಎಂಸಿಗೆ ಹಿಂದಿರುಗುವರೇ ಮುಕುಲ್ ರಾಯ್?
ಜನರು ಸಚಿವಾಲಯದ ಮಾನದಂಡಕ್ಕೆ ಅನುಗುಣವಾಗಿ ಕೇಂದ್ರವನ್ನ ತೆರೆಯಬಹುದು, ಇದರಲ್ಲಿ ಜನರಿಗೆ ತರಬೇತಿ ನೀಡಬಹುದು. ತರಬೇತಿ(Training)ಯ ನಂತ್ರ ಪರೀಕ್ಷೆ ತೆಗೆದುಕೊಳ್ಳಲಾಗುವುದು. ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಕೇಂದ್ರವು ಪ್ರಮಾಣಪತ್ರವನ್ನ ನೀಡಲಾಗುತ್ತೆ. ಅದರ ಆಧಾರದ ಮೇಲೆ ಪರೀಕ್ಷೆಯನ್ನ ನೀಡದೇ ಚಾಲನಾ ಪರವಾನಗಿಯನ್ನ ಕೊಡಲಾಗುತ್ತೆ ಎಂದು ಸಚಿವಾಲಯ ತಿಳಿಸಿದೆ.
ಇದನ್ನೂ ಓದಿ : PPF ಖಾತೆಯ ಮುಕ್ತಾಯದ ನಂತರ ಲಭ್ಯವಿರುವ ಈ 3 ಆಯ್ಕೆಗಳ ಬಗ್ಗೆ ನಿಮಗೆ ತಿಳಿದಿದೆಯೇ?
ಚಾಲಕ ತರಬೇತಿ ಕೇಂದ್ರ(Driving Training Center)ಕ್ಕೆ ಷರತ್ತುಗಳನ್ನ ವಿಧಿಸಲಾಗಿದೆ. ಅದರನ್ವಯ, ತರಬೇತಿ ಕೇಂದ್ರಕ್ಕೆ ಬಯಲು ಪ್ರದೇಶಗಳಲ್ಲಿ ಎರಡು ಎಕರೆ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ಒಂದು ಎಕರೆ ಭೂಮಿ ಬೇಕಾಗುತ್ತದೆ. ಎಲ್ ಎಂವಿ ಮತ್ತು ಎಚ್ ಎಂವಿ ವಾಹನಗಳಿಗೆ ಸಿಮ್ಯುಲೇಟರ್ ಕಡ್ಡಾಯವಾಗಿರುತ್ತದೆ. ಇದರ ಮೂಲಕ ತರಬೇತಿ ನೀಡಲಾಗುವುದು. ಇಲ್ಲಿ ಬಯೋಮೆಟ್ರಿಕ್ ಹಾಜರಾತಿ ಮತ್ತು ಇಂಟರ್ನೆಟ್ʼಗೆ ಬ್ರಾಡ್ ಬ್ಯಾಂಡ್ ಸಂಪರ್ಕ ಅಗತ್ಯವಾಗಿರುತ್ತದೆ. ಪಾರ್ಕಿಂಗ್, ರಿವರ್ಸ್ ಡ್ರೈವಿಂಗ್, ಇಳಿಜಾರಿನ ಚಾಲನೆ ಇತ್ಯಾದಿಗಳಲ್ಲಿ ತರಬೇತಿ ನೀಡಲು ಡ್ರೈವಿಂಗ್ ಟ್ರ್ಯಾಕ್ ಕಡ್ಡಾಯವಾಗಿರುತ್ತದೆ. ಇದರಲ್ಲಿ ಸಿದ್ಧಾಂತ ಮತ್ತು ವಿಭಾಗೀಕರಣ ಕೋರ್ಸ್ʼಗಳು ಇರುತ್ತವೆ. ಕೇಂದ್ರದಲ್ಲಿ ಸಿಮ್ಯುಲೇಟರ್ʼಗಳ ಸಹಾಯದಿಂದ, ಹೆದ್ದಾರಿ, ಗ್ರಾಮೀಣ ಪ್ರದೇಶಗಳು, ಕಿಕ್ಕಿರಿದ ಮತ್ತು ಲೇನ್ ಚಲಿಸುವ ಸ್ಥಳಗಳಲ್ಲಿ ಮಳೆ, ಮಂಜು ಮತ್ತು ರಾತ್ರಿಯಲ್ಲಿ ವಾಹನಗಳನ್ನ ಓಡಿಸಲು ತರಬೇತಿ ನೀಡಲಾಗುವುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.