ರಾಜ್ಯದಲ್ಲಿ ಮತ್ತೊಂದು ಪ್ರಸಾದ ದುರಂತ: 1 ಸಾವು, 20ಕ್ಕೂ ಅಧಿಕ ಜನರು ಅಸ್ವಸ್ಥ

ಚಾಮರಾಜನಗರ ಜಿಲ್ಲೆಯಲ್ಲಿ ನಡೆದ ಪ್ರಸಾದ ದುರಂತ ಮಾಸುವ ಮುನ್ನವೇ ಇದೀಗ ತುಮಕೂರು ಜಿಲ್ಲೆಯಲ್ಲಿ ಮತ್ತೊಂದು ದುರಂತ ಸಂಭವಿಸಿದೆ.

Last Updated : May 22, 2019, 03:12 PM IST
ರಾಜ್ಯದಲ್ಲಿ ಮತ್ತೊಂದು ಪ್ರಸಾದ ದುರಂತ: 1 ಸಾವು, 20ಕ್ಕೂ ಅಧಿಕ ಜನರು ಅಸ್ವಸ್ಥ title=
Representational Image(Pic: Youtube)

ತುಮಕೂರು: ಕೆಲ ತಿಂಗಳ ಹಿಂದೆ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಚಾಮರಾಜನಗರ ಜಿಲ್ಲೆಯ ಪ್ರಸಾದ ದುರಂತ ಮಾಸುವ ಮುನ್ನವೇ ಇದೀಗ ತುಮಕೂರು ಜಿಲ್ಲೆಯಲ್ಲಿ ಮತ್ತೊಂದು ಪ್ರಸಾದದ ದುರಂತ ಸಂಭವಿಸಿದೆ. 

ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ನಿಡಗಲ್ಲು ಗ್ರಾಮದ ವೀರಭಧ್ರ ಸ್ವಾಮಿ ದೇವಾಲಯದಲ್ಲಿ ನೀಡಿದ ಪ್ರಸಾದ ಸೇವಿಸಿ ಓರ್ವ ಬಾಲಕ ಸಾವನ್ನಪ್ಪಿದ್ದು, 20ಕ್ಕೂ ಅಧಿಕ ಮಂದಿ ಅಸ್ವಸ್ಥರಾಗಿರುವ ಘಟನೆ ನಡೆದಿದೆ.

ಶಿರಾದಿಂದ ನಿಡಗಲ್ಲು ಗ್ರಾಮದ ವೀರಭಧ್ರ ಸ್ವಾಮಿ ದೇವಾಲಯಕ್ಕೆ ತೆರಳಿದ್ದ ಭಕ್ತರು ನೀರಿಲ್ಲದ ಕಾರಣ ಅಲ್ಲಿಯೇ ಇದ್ದ ತೊಟ್ಟಿ ನೀರನ್ನೇ ಬಳಸಿ, ಪ್ರಸಾದದ ರೂಪದಲ್ಲಿ ಅಡುಗೆ ತಯಾರಿಸಿ ಸೇವಿಸಿದ್ದರು. ಕೆಲ ಸಮಯದಲ್ಲೇ ಅವರಿಗೆ ವಾಂತಿ, ಬೇಧಿ ಆರಂಭವಾಗಿತ್ತು. ತಕ್ಷಣ ಅವರನ್ನು ಶಿರಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ 12 ವರ್ಷದ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ.
 

Trending News