ದನಕಾಯುವ ಹುಡುಗಿ ರೆಹಮಾನವ್ವ ನಟಿಯಾದ ಕಥೆ ಅದೊಂದು ಚರಿತ್ರೆ ಎಂದೇ ಬಾಸವಾಗುವ ವಿದ್ಯಮಾನ. ಅದೊಮ್ಮೆ ಕಿತ್ತೂರ ಚೆನ್ನಮ್ಮ ಪಾತ್ರ ನಿರ್ವಹಿಸುವ ನಟಿ ಕೈಕೊಟ್ಟು ಪ್ರದರ್ಶನದ ದಿನ ಬಾರದಿದ್ದಾಗ, ರೆಹಮಾನವ್ವ ಕಲ್ಮನಿ ಆ ಪಾತ್ರ ಅಭಿನಯಿಸಿ ಸೈ ಎನಿಸಿಕೊಂಡಿದ್ದು ಇತಿಹಾಸ.
ಬಡತನ, ಹಸಿವು ಒಡಲಲ್ಲಿ ಕಟ್ಟಿಕೊಂಡು ರಂಗಭೂಮಿಯಲ್ಲಿ ಹೆಜ್ಜೆಯೂರಿದ ರೆಹಮಾನವ್ವ ರಂಗಭೂಮಿ ತಂದೊಡ್ಡಿದ ಸಂಕಟಗಳನ್ನು ದಿನ ದಿನಾ ಮೀರುತ್ತ ನಡೆದರು.
ಇದನ್ನೂ ಓದಿ: ಬಂಡವಾಳ ಹೂಡಿಕೆ ವಿಚಾರವಾಗಿ ಅಪಪ್ರಚಾರ ಮಾಡುತ್ತಿರುವ ಬಿಜೆಪಿ ನಾಯಕರಿಗೆ ನಾಚಿಕಯಾಗಬೇಕು: ಡಿಸಿಎಂ ಡಿ.ಕೆ. ಶಿವಕುಮಾರ್
ಹೈದರಾಬಾದ ಕರ್ನಾಟಕ ವಿಮೋಚನೆ ಹೋರಾಟ ಮಾಡುತ್ತಿದ್ದ ಹೋರಾಟಗಾರರಿಗೆ ಮಹಾಮ್ಮಾಯಾ ನಾಟ್ಯ ಸಂಘ ಕುಕನೂರು ಹೆಸರಿನಲ್ಲಿ ಕಟ್ಟಿ ಅವರಿಗೆ ಆಶ್ರಯ ನೀಡಿದ್ದು ಕಡಿಮೆ ಸಾಹಸದ ಕೆಲಸವೇನು? ಅವರಿಗಿದ್ದ ನೆಲದ ಪ್ರೇಮ ಅಗಾಧವಾಗಿತ್ತು. ಮಹಾಮ್ಮಾಯಾ ನಾಟ್ಯ ಸಂಘ ಮುಂದೆ ಅವರ ಮಗಳ ಹೆಸರಿನೊಂದಿಗೆ ಲಲಿತಾ ಕಲಾ ನಾಟ್ಯ ಸಂಘ ಕುಕನೂರು ಅಂತಾಗಿ ಒಳ್ಳೆಯ ಹೆಸರು ಪಡೆಯಿತು.
ಚಿಕ್ಕೇನಕೊಪ್ಪದ ಹವ್ಯಾಸಿ ಕಲಾತಂಡದಿಂದ ಶಿವಯೋಗಿ ಸಿದ್ಧರಾಮ ನಾಟಕ ಸೊಲ್ಲಾಪುರದಲ್ಲಿ ಪ್ರಯೋಗ ಮಾಡಿದ್ದು ಇದೇ ರೆಹಮಾನವ್ವ.
ತಳಕಲ್ ವೆಂಕರೆಡ್ಡಿ ನಾಟಕ ಕಂಪನಿ, ಶಾರದಾ ಸಂಗೀತ ನಾಟಕ ಮಂಡಳಿ ಗೋಕಾಕ, ಕಲಾವೈಭವ ನಾಟ್ಯ ಸಂಘ ಏಣ್ಗಿ , ನಾಟ್ಯಸಂಘ ಹಂದಿಗನೂರ ಸಿದ್ಧರಾಮಪ್ಪನವರ ಕಂಪನಿ, ಧುತ್ತರಗಿ ನಾಟಕ ಸಂಘ, ಹೀಗೆ ಅಂದಿನ ರಂಗಭೂಮಿಯ ದಿಗ್ಗಜ್ಜರ ನಾಟಕ ಕಂಪನಿಗಳಲೆಲ್ಲಾ ಅಭಿನಯಿಸಿದ ಅಭಿನೇತ್ರಿ ಇವರು
ಇದನ್ನೂ ಓದಿ: Liquor Ban in Karnataka: ಜೂನ್ 1 ರಿಂದ ಐದು ದಿನ ಮದ್ಯ ಮಾರಾಟ ಬಂದ್ !
ಅವರ ರಂಗಭೂಮಿ ಸೇವೆಗೆ 1991 ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರ ಸಿಕ್ಕಿತು. ಸ್ವಾತಂತ್ರ್ಯ ಪೂರ್ವದಲ್ಲಿಯೇ ಉರ್ದು ಪ್ರಭಾವವಿರುವ ಅಂದಿನ ಹೈದರಾಬಾದ ಕರ್ನಾಟಕದಲ್ಲಿ ನಾಟಕ ಕಂಪನಿ ಆರಂಭಿಸಿ, ಆ ನಾಟಕ ಸಂಘ ಉಳಿಸಿಕೊಳ್ಳಲು ಹರಸಾಹಸ ಮಾಡುತ್ತ ಈ ನೆಲದ ಹೋರಾಟಗಾರರಿಗೆ ಆಶ್ರಯ ಕಲ್ಪಿಸಿದ್ದು ನಿಜಕ್ಕೂ ಚರಿತ್ರೆಯಲ್ಲಿ ಉಳಿಯಬೇಕಾದ ಮಹತ್ವದ ಸಂಗತಿ.
ಅಂತರ್ಧರ್ಮಿಯ ಮದುವೆಯಾಗಿದ್ದ ರೆಹಮಾನವ್ವ ಪತಿ ನಂದಪ್ಪ ಚಿಕ್ಕೇನಕೊಪ್ಪ ಹಿರಿಯ ಮಗ ಬಾಬಣ್ಣ ಕಲ್ಮನಿ, ಹಿರಿಯ ಮಗಳು ಲಲಿತಾ ಕಲ್ಮನಿ, ಎರಡನೇ ಮಗ ಉಮೇಶ ಕಲ್ಮನಿ, ಕಿರಿಯ ಮಗ ಮಂಜುಳಾ ಕಲ್ಮನಿ, ಕಿರಿಯ ಮಗ ಮಹ್ಮದ ರಫಿ ಮುನ್ನಾ ಕಲ್ಮನಿ, ಹೀಗೆ ಇಡೀ ಕುಟುಂಬವೇ ರಂಗಭೂಮಿಯಲ್ಲಿ ಕಲಾಸೇವೆ ಮಾಡಿದ್ದೊಂದು ವಿಶೇಷ ಸಂಗತಿ..
ಯಲಬುರ್ಗಾ ತಾಲೂಕ ಬೋರ್ಡ ಸದಸ್ಯರಾಗಿ, ಕರ್ನಾಟಕ ನಾಟಕ ಅಕಾಡಮಿಯಿಂದ ಗೌರವ ಪ್ರಶಸ್ತಿ ಪಡೆದಿದ್ದ ರೆಹಮಾನವ್ವ ಕಲ್ಮನಿ 1993 ರಲ್ಲಿ ಕೊನೆಯುಸಿರೆಳೆದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.