ಸಿಎಂ ಸ್ಥಾನದ ಕನಸು ಕಾಣುವುದಕ್ಕೂ ಜಿ.ಪರಮೇಶ್ವರ್ ಅಂಜುತ್ತಿದ್ದಾರೆ: ಬಿಜೆಪಿ

ದಲಿತ ಮುಖ್ಯಮಂತ್ರಿ ವಿಚಾರವಾಗಿ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ನೀಡಿರುವ ಹೇಳಿಕೆಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಬಿಜೆಪಿ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.

Written by - Zee Kannada News Desk | Last Updated : Jan 24, 2022, 05:00 PM IST
  • ಡಾ.ಜಿ.ಪಮರೇಶ್ವರ್ ಸಿಎಂ ಸ್ಥಾನದ ಕನಸು ಕಾಣುವುದಕ್ಕೂ ಅಂಜುತ್ತಿದ್ದಾರೆ
  • ಕಾಂಗ್ರೆಸ್ ಪಕ್ಷದ ದಲಿತ ವಿರೋಧಿ ನೀತಿಯೇ ಇದಕ್ಕೆ ಕಾರಣವಲ್ಲವೇ? ಎಂದು ಬಿಜೆಪಿ ಟ್ವೀಟ್
  • ಡಾ.ಜಿ.ಪರಮೇಶ್ವರ್ ಅವರಿಗೆ ಹೊಡೆತ ಕೊಡುವುದು ಯಾರು? ಎಂದು ಪ್ರಶ್ನಿಸಿದ ಬಿಜೆಪಿ
ಸಿಎಂ ಸ್ಥಾನದ ಕನಸು ಕಾಣುವುದಕ್ಕೂ ಜಿ.ಪರಮೇಶ್ವರ್ ಅಂಜುತ್ತಿದ್ದಾರೆ: ಬಿಜೆಪಿ title=
ಸಿದ್ದರಾಮಯ್ಯ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ

ಬೆಂಗಳೂರು: ಸಿಎಂ ಸ್ಥಾನದ ಕನಸು ಕಾಣುವುದಕ್ಕೂ ಜಿ.ಪರಮೇಶ್ವರ್(G Parameshwar) ಅಂಜುತ್ತಿದ್ದಾರೆ ಎಂದು ಬಿಜೆಪಿ ಟ್ವೀಟ್ ಮಾಡುವ ಮೂಲಕ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದೆ. ದಲಿತ ಮುಖ್ಯಮಂತ್ರಿ(Dalit CM) ವಿಚಾರವಾಗಿ ಕೊರಟಗೆರೆ ತಾಲೂಕಿನ ಚಿಕ್ಕಗುಂಡಕಲ್ಲು ಗ್ರಾಮದಲ್ಲಿ ಮಾತನಾಡಿದ್ದ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್, ‘ದಯವಿಟ್ಟು ನನ್ನನ್ನು ಮುಖ್ಯಮಂತ್ರಿ ಎಂದು ಕೂಗಬೇಡಿ, ಕೂಗಿದರೆ ಒಳಸಂಚು ಶುರುವಾಗುತ್ತದೆ’ ಎಂದು ಹೇಳಿದ್ದರು.

ಪರಮೇಶ್ವರ್ ಹೇಳಿಕೆಯನ್ನು ಪ್ರಸ್ತಾಪಿಸಿ ಟ್ವೀಟ್ ಮಾಡಿರುವ ಬಿಜೆಪಿ ಸಿದ್ದರಾಮಯ್ಯ(Siddaramaiah)ರ ವಿರುದ್ಧ ಕಿಡಿಕಾರಿದೆ. ‘ನೀವು ನನ್ನನ್ನು ಮುಂದಿನ ಸಿಎಂ ಎಂದು ಕರೆಯಬೇಡಿ ಎಂದು ಒಬ್ಬ ದಲಿತ ನಾಯಕ ತನ್ನ ಕಾರ್ಯಕರ್ತರ ಬಳಿ ವಿನಮ್ರವಾಗಿ ವಿನಂತಿ ಮಾಡುವುದನ್ನು ನೋಡಿದರೆ ಕಾಂಗ್ರೆಸ್ ಪಕ್ಷದಲ್ಲಿ ಹೆಪ್ಪುಗಟ್ಟಿರುವ ದಲಿತ ಧೋರಣೆಯ ಅನಾವರಣವಾಗುತ್ತದೆ. ಇದಕ್ಕೆ ಕಾರಣರು ಯಾರು, ಸಿದ್ದರಾಮಯ್ಯನವರಿಂದ ಉತ್ತರ ಲಭಿಸಬಹುದೇ!?’ ಅಂತಾ ಪ್ರಶ್ನಿಸಿದೆ.

ಇದನ್ನೂ ಓದಿ: ಕಾರ್ಕಳದಲ್ಲಿ ಹೆಚ್ಚುತ್ತಿರುವ ಕಾಲುಬಾಯಿ ರೋಗ: 50ಕ್ಕೂ ಹೆಚ್ಚು ರಾಸುಗಳು ಬಲಿ..!

‘ಜಿ.ಪರಮೇಶ್ವರ್‌ ಅವರು ಈ ಹಿಂದೆ ಮುಖ್ಯಮಂತ್ರಿ ಸ್ಥಾನದ ಕನಸು ಕಂಡವರು. ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಿದವರು. ಆದರೆ ಅವರನ್ನು ಚುನಾವಣೆಯಲ್ಲಿ ಸೋಲಿಸಲಾಯ್ತು. ಈಗ ಸಿಎಂ ಸ್ಥಾನ(Dalit Chief Minister)ದ ಕನಸು ಕಾಣುವುದಕ್ಕೂ ಅವರು ಅಂಜುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ದಲಿತ ವಿರೋಧಿ ನೀತಿಯೇ ಇದಕ್ಕೆ ಕಾರಣವಲ್ಲವೇ?’ ಅಂತಾ ಬಿಜೆಪಿ ಟ್ವೀಟ್ ಮಾಡಿದೆ.

‘ಕಾಂಗ್ರೆಸ್ ಪಕ್ಷ(Congress Party) ದಲಿತ ಮುಖಂಡರೊಬ್ಬರು ಆತಂಕದಿಂದ ಯಾರನ್ನು ಉದ್ದೇಶಿಸಿ ಈ ಮಾತನ್ನು ಹೇಳಿದ್ದಾರೆ? ಕಾಂಗ್ರೆಸ್‌ ಪಕ್ಷದಲ್ಲಿ ದಲಿತರು ಮುಖ್ಯಮಂತ್ರಿ ಸ್ಥಾನದ ಕನಸು ಕಾಣುವುದೇ ತಪ್ಪೇ? ಹಾಗಾದರೆ ಡಾ.ಜಿ.ಪರಮೇಶ್ವರ್(G Parameshwar) ಅವರಿಗೆ ಹೊಡೆತ ಕೊಡುವುದು ಯಾರು? ಸಿದ್ದರಾಮಯ್ಯನವರೇ ನಿಮಗೇನಾದರೂ ಗೊತ್ತಾ?’ ಅಂತಾ ಪ್ರಶ್ನಿಸಿದೆ.

ಇದನ್ನೂ ಓದಿ: Be Careful.! ಕ್ರೆಡಿಟ್ ಕಾರ್ಡ್ ಪ್ರಾಬ್ಲಂ ಅನ್ನೋರೇ ಈ ನಯವಂಚಕರ ಟಾರ್ಗೆಟ್!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News