ಬೆಂಗಳೂರು: ಇಂದಿನಿಂದ ಪ್ರಾರಂಭಗೊಳ್ಳಲಿರುವ 75 ದಿನಗಳ ಬಿಜೆಪಿ ಪರಿವರ್ತನಾ ಯಾತ್ರೆಗೆ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದ ಬಳಿ ಇರುವ ಮಾದಾವರ ನೈಸ್ ಮೈದಾನದಲ್ಲಿ ಬೃಹತ್ ವೇದಿಕೆ ಸಜ್ಜಾಗಿದೆ.
ಬಿಜೆಪಿ ಪರಿವರ್ತನಾ ಯಾತ್ರೆಯ ಮೊದಲ ದಿನದ ಹೈಲೈಟ್ಸ್:
* ವೇದಿಕೆಯಲ್ಲಿ ಪ್ರಮುಖ ನಾಯಕರು ಕೂರಲು 150 ಆಸನಗಳ ವ್ಯವಸ್ಥೆ ಮಾಡಲಾಗಿದೆ.
* 27ಪ್ರಮುಖ ನಾಯಕರು ಕೂರಲು ಮೊದಲ ಸಾಲಿನಲ್ಲೇ ವ್ಯವಸ್ಥೆ.
* 60 ಸಾವಿರ ಕಾರ್ಯಕರ್ತರಿಗೂ ಆಸನದ ವ್ಯವಸ್ಥೆ ಮಾಡಲಾಗಿದೆ.
* ಬೆಳಗ್ಗೆ 11 ಗಂಟೆ ಪರಿವರ್ತನ ಯಾತ್ರೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಚಾಲನೆ ನೀಡಲಿದ್ದಾರೆ.
* ಮಾಜಿ ಡಿಸಿಎಂ ಆರ್ ಅಶೋಕ್ ನೇತೃತ್ವದಲ್ಲಿ ವೇದಿಕೆ ಸಜ್ಜಾಗಿದ್ದು, ಇಂದು ಬೆಳಗ್ಗೆ 11 ಗಂಟೆಗೆ ಬಿಜೆಪಿ ರಾಷ್ಟ್ರೀಯ ಅದ್ಯಕ್ಷ ಅಮಿತ್ ಷಾ ಹಾಗೂ ರಾಜ್ಯದ್ಯಕ್ಷ ಬಿಎಸ್ ವೈ ಪರಿವರ್ತನಾ ರ್ಯಾಲಿಗೆ ಚಾಲನೆ.
* ಬೃಹತ್ ಸಮಾವೇಶದಲ್ಲಿ ಮೂರು ದ್ರೋಣ್ ಕ್ಯಾಮೆರಾ ಬಳಕೆ. ಸಾಮಾಜಿಕ ಜಾಲ ತಾಣದಲ್ಲಿ ಯಾತ್ರೆ ಬಿತ್ತರಿಸಲು ಹೈಟೆಕ್ ತಂತ್ರಜ್ಞಾನ ಅಳವಡಿಕೆ.
* ಮೈದಾನದಲ್ಲಿ ಬೃಹತ್ 6ಎಲ್.ಸಿ.ಡಿಗಳನ್ನು ಅಳವಡಿಸಲಾಗಿದೆ.
* ಮೈದಾನದಲ್ಲಿ 30ಕ್ಕೂ ಹೆಚ್ಚು ಸಿಸಿ ಕ್ಯಾಮರಗಳ ಅಳಡವಳಿಕೆ.
* ರಾಜ್ಯ 17 ಜಿಲ್ಲೆಗಳ ಪ್ರತಿ ಬೂತ್ ನಿಂದಲೂ 3 ಬೈಕ್ ಗಳಲ್ಲಿ ಆರು ಕಾರ್ಯಕರ್ತರ ಆಗಮನ.
* ಮೈದಾನದಲ್ಲಿ ವ್ಯಾಪಕ ಪೊಲಿಸ್ ವ್ಯವಸ್ಥೆ:
ನೆಲಮಂಗಲ ಮಾದವಾರ ಬಿಐಇಸಿ ಮೈದಾನದಲ್ಲಿ ಪರಿವರ್ತನಾ ರ್ಯಾಲಿ.
SP- 4, ASP- 4, DYSP- 14, CPI- 31, PSI- 61, ASI- 135, POLICE- 717, HOME GUARD- 250, WPC- 50 ಪೋಲೀಸ್ ಪಡೆ ಅಲ್ಲದೆ 6 ಕೆಎಸ್ಆರ್,ಪಿ 8 ಡಿಎಆರ್ ತುಕಡಿ ನಿಯೋಜನೆಗೊಂಡಿದೆ. ಒಟ್ಟು 15,000ಕ್ಕೂ ಹೆಚ್ಚು ಜನ ಪೊಲೀಸರ ನಿಯೋಜನೆ ಮಾಡಲಾಗಿದೆ. ಕೇಂದ್ರ ವಲಯ ಐಜಿಪಿ ಅಮೃತ್ ಪಾಲ್ ನೇತೃತ್ವದಲ್ಲಿ ಬಿಗಿ ಭದ್ರತೆ.
* ಒಂದು ಲಕ್ಷ ಬೈಕ್ ಹಾಗೂ ನಾಲ್ಕು ಲಕ್ಷ ಕಾರ್ಯಕರ್ತರು ಸೇರುವ ನಿರೀಕ್ಷೆ.
* ಅಮಿತ್ ಷಾ ಸಮ್ಮುಖದಲ್ಲಿ ಇಂದು ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ ಹಲವು ಕಾಂಗ್ರೆಸ್ ನಾಯಕರು. ಅಮಿತ್ ಷಾ ಸಮ್ಮುಖದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಅಮಿತ್ ಷಾ ನಾಯಕರನ್ನು ಬಿಜೆಪಿಗೆ ಬರಮಾಡಿಕೊಳ್ಳಲಿದ್ದಾರೆ.
- ಚೆನ್ನಪಟ್ಟಣ ಶಾಸಕ ಸಿ.ಪಿ.ಯೋಗೀಶ್ವರ್.
- ಕುಡಚಿ ಶಾಸಕ ಪಿ. ರಾಜೀವ್.
- ರಾಯಚೂರಿನ ನಿವೃತ್ತ ನ್ಯಾಯಾಧೀಶ ಜಿ.ಆರ್. ಪಾಟೀಲ್.
- ರಾಮನಗರದ ಕಾಂಗ್ರೆಸ್ ನಾಯಕಿ ನಂದಿನಿ ಗೌಡ
- ಕೆ.ಆರ್.ನಗರದ ಹೊಸಳ್ಳಿ ವೆಂಕಟೇಶ್ ಬಿಜೆಪಿಗೆ ಸೇರ್ಪಡೆ.