ಬೆಂಗಳೂರು: ಬಿಜೆಪಿ ಕಾರ್ಯಕರ್ತ ಸಂತೋಷ್ ಹತ್ಯೆ ಖಂಡಿಸಿ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಕಾಂಗ್ರೇಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕತಪಡಿಸಿ ಟ್ವೀಟರ್ ನಲ್ಲಿ ಕಾಂಗ್ರೆಸಿನ ಪಂಚ ಮುಗ್ಧರಿಗೆ ಪಂಚ ಪ್ರಶ್ನೆಗಳು ಎಂದು ಪ್ರಶ್ನೆಗಳ ಸುರಿಮಳೆ ಗೈದಿದ್ದರು. ಇದಕ್ಕೆ ತಿರುಗೇಟು ನೀಡಿದ ರಾಮಲಿಂಗಾ ರೆಡ್ಡಿ ಸತ್ತವರನ್ನು ಬಿಜೆಪಿಯವರು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ ಎಂದು ವ್ಯಂಗ್ಯವಾಡಿದ್ದರು. ಇದೀಗ ಇವರ ಸಮರ ಟ್ವಿಟ್ಟರಿನಲ್ಲಿ ಮತ್ತೆ ಮುಂದುವರೆದಿದೆ.
ಕಾಂಗ್ರೆಸಿನ ಪಂಚ ಮುಗ್ಧರಿಗೆ ಪಂಚ ಪ್ರಶ್ನೆಗಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ರಾಮಲಿಂಗ ರೆಡ್ಡಿ, ಸಚಿವ ಕೆ.ಜೆ.ಜಾರ್ಜ್ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಮತ್ತು ಕೆಪಿಸಿಸಿ ಕಾರ್ಯದರ್ಶಿ ದಿನೇಶ್ ಗುಂಡೂರಾವ್ ಅವರನ್ನು ಟ್ಯಾಗ್ ಮಾಡಿ ಪ್ರಶ್ನೆಗಳ ಸುರಿಮಳೆ ಗೈದಿದ್ದರು.
ಡಿವಿಎಸ್ ಪ್ರಶ್ನೆಗೆ ತಿರುಗೇಟು ನೀಡಿರುವ ಗೃಹಸಚಿವ ರಾಮಲಿಂಗಾರೆಡ್ಡಿ ನಾನು ಈ ಮೊದಲು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುವಿರಾ ಎಂದು ಪ್ರಶ್ನಿಸಿದ್ದಾರೆ.
ಕೇಂದ್ರ ಸಚಿವ ಸದಾನಂದ ಗೌಡರ ಟ್ವೀಟ್
ಪ್ರಶ್ನೆ 1
ಪ್ರಶ್ನೆ ೧ - ಪಂಚ ಮುಗ್ದರೇ ದಲಿತ ಯುವಕ ಸಂತೋಷನ ಕೊಲೆ ನಿಮ್ಮ ಮುಗ್ದ ಸುತ್ತೋಲೆಯ ಪರಿಣಾಮ ಎಂದು ಒಪ್ಪಿಕೊಳ್ಳುತೀರಾ ? @siddaramaiah @thekjgeorge @DrParameshwara @RLR_BTM @dineshgrao
— Sadananda Gowda (@DVSBJP) February 1, 2018
ಪ್ರಶ್ನೆ 2
ಪ್ರಶ್ನೆ -೨ ನಿಮ್ಮ ಮುಗ್ದಸುತ್ತೋಲೆ ಹೊರಡಿಸುವ ಮುನ್ನ ಸಮಾಜ ದ್ರೋಹಿ ಶಕ್ತಿಗಳಿಗೆ ನೀವು ರಕ್ಷಾ ಕವಚ ಹಾಕುತ್ತಿದೀರೆಂಬ ಕನಿಷ್ಠ ಜ್ಞಾನವು ನಿಮಗೆ ಇರಲಿಲ್ಲವಾ ? @siddaramaiah @thekjgeorge @dineshgrao @DrParameshwara @RLR_BTM
— Sadananda Gowda (@DVSBJP) February 1, 2018
ಪ್ರಶ್ನೆ 3
ಪ್ರಶ್ನೆ -೩ ದಲಿತ ಯುವಕ ಸಂತೋಷನ ಹೆತ್ತವರಿಗೆ ಏನೆಂದು ಹೇಳುತ್ತೀರಿ ಅವರನ್ನು ಮುಗ್ದರು ಕೊಂದದೆಂದು ಹೇಳುತ್ತೀರಾ ? @siddaramaiah @thekjgeorge @DrParameshwara @dineshgrao @RLR_BTM
— Sadananda Gowda (@DVSBJP) February 1, 2018
ಪ್ರಶ್ನೆ 4
ಪ್ರಶ್ನೆ -೪ ೨೩ ಹಿಂದೂ ಕಾರ್ಯಕರ್ತರ ಕೊಲೆಯಾಗಿದೆ . ಕಾನೂನು ವ್ಯವಸ್ಥೆ ಅನ್ನುವುದು ಮರೀಚಿಕೆಯಾಗಿದೆ ನೀವು ಇದೆಲ್ಲವನ್ನು ನೋಡಿಯೂ ನೋಡದಂತೆ ಮುಗ್ದರಾಗಿ ಉಳಿದಿರುವುದರ ಹಿಂದಿನ ಜಾಣ ಮುಗ್ದತೆ ಏನು ? @siddaramaiah @thekjgeorge @DrParameshwara @dineshgrao @RLR_BTM
— Sadananda Gowda (@DVSBJP) February 1, 2018
ಪ್ರಶ್ನೆ 5
ಪ್ರಶ್ನೆ - ೫ ನಿಮ್ಮಮುಗ್ದ ತುಷ್ಟಿಕರಣಕ್ಕೆ ಕೊನೆ ಯಾವಾಗ ? ನಿಮ್ಮಗಳ ಆಡಳಿತದಲ್ಲಿ ಹಿಂದೂ ಬಾಂಧವರ ರಕ್ತ ಬಸಿಯುವ ದಾಹಕ್ಕೆ ಕೊನೆ ಯಾವಾಗ? ಒಂದಂತೂ ನೆನಪಿಟ್ಟುಕ್ಕೊಳ್ಳಿ ನೀವೀಗ ಉತ್ತರ ಕೊಡದಿದ್ದರೆ . ಚುನಾವಣೆಯಲ್ಲಿ ರಾಜ್ಯದ ಜನತೆ ಕೊಟ್ಟೇ ಕೊಡುತ್ತಾರೆ @siddaramaiah @thekjgeorge @DrParameshwara @dineshgrao @RLR_BTM
— Sadananda Gowda (@DVSBJP) February 1, 2018
ಕೇಳಿದ ಪ್ರಶ್ನೆಗೆ ಉತ್ತರಿಸಲಾಗದ ಗೃಹ ಸಚಿವರು ಮುಗ್ದ ಜನರ ಮುಖವಾಣಿಯಾದದ್ದು ನಮ್ಮ ರಾಜ್ಯದ ದುರಂತ . ಹಿಂದೂಗಳು ಸತ್ತದ್ದು ಯಾಕೆ ಅಂದರೆ ಅದು ನಮ್ಮಚುನಾವಣಾ ಮಾತಿನ ಖಯಾಲಿ ಅನ್ನುವ ಜವಾಬ್ದಾರಿ ಇಲ್ಲದ ಇವರಿಗೆ ಏನ್ನನ್ನೋಣ , ಓರ್ವ ಕೇಂದ್ರ ಸಚಿವರಾಗಿ ರಾಜ್ಯದ ಗೃಹ ಸಚಿವರನ್ನು ಕೇಳಬಾರದೇ . @siddaramaiah @thekjgeorge @RLR_BTM
— Sadananda Gowda (@DVSBJP) February 1, 2018
ಸುಮ್ನೆ ಸಾಯಿಸಬೇಕು ಅಂತ ಸಾಯಿಸಿಲ್ಲ ಕಾಲಿಗೆ ಸ್ಕ್ರೂಡ್ರೈವರ್ ನಿಂದ ಚುಚ್ಚಿದ್ದಾನೆ ಇದು ಕೊಲೆಗಾರನ ಬಗ್ಗೆ ಗೃಹ ಮಂತ್ರಿಗಳ ವಕೀಲಿಕೆ .ರೀ ಮಾನ್ಯ ಗೃಹ ಸಚಿವರೇ ನೀವೇನು ಹೇಳುತ್ತಿದ್ದೀರೆಂಬ ಗಮನ ನಿಮಗಿದೆಯಾ ?ಅಥವಾರಾಜ್ಯದ ಕಾನೂನು ಪಾಲನಾ ಇಲಾಖೆಗೆ ಇದು ಸೂಚನೆನಾ ? ದುರ್ದೈವ !! ಇದನ್ನು ಕೂಡಾ ನನ್ನಚುನಾವಣಾ ಖಯಾಲಿ ಅಂದು ಬಿಡಿ @RLR_BTM
— Sadananda Gowda (@DVSBJP) February 1, 2018
ಮಾನ್ಯ ಗೃಹ ಸಚಿವರೇ ನಿಮ್ಮಹುದ್ದೆ ನಿಬಾಯಿಸಿರಿ , 24 ಹಿಂದೂ ಕಾರ್ಯಕರ್ತರ ಮತ್ತು ನೀವು ಪಟ್ಟಿ ಮಾಡಿದಹತ್ಯೆ ಗಳು ನಡೆದದ್ದು ನಿಮ್ಮ ಆಡಳಿತದಲ್ಲಿ . ಇದಕ್ಕೇನಂತೀರಿ? ಹತ್ಯೆ ಮಾಡಿದ ವ್ಯಕ್ತಿ ಯಾವುದೇ ಪಕ್ಷದವರಿರಲಿ ಕ್ರಮ ತೆಗೆದುಕ್ಕೊಳ್ಳಿ ನಾವೇನು ನಿಮ್ಮ ರೀತಿ ಸ್ಕ್ರೂಡ್ರೈವರ್ ವಕಾಲತ್ತು ವಹಿಸಿಲ್ಲ ,ತಪ್ಪು ತಪ್ಪೇ .@RLR_BTM @BSYBJP https://t.co/mxtKT8vKD7
— Sadananda Gowda (@DVSBJP) February 2, 2018
ಗೃಹ ಸಚಿವ ರಾಮಲಿಂಗ ರೆಡ್ಡಿ ಟ್ವೀಟ್
ಕೇಂದ್ರ ಸಚಿವರಾದ @DVSBJP ಚುನಾವಣೆಗಾಗಿ ರಾಜಕೀಯ ಹೇಳಿಕೆಗಳನ್ನು ನೀಡುವುದನ್ನು ಖಯಾಲಿ ಮಾಡಿಕೊಂಡಿದ್ದಾರೆ. ಹಿಂದುಕಾರ್ಯಕರ್ತರ ಕೊಲೆ ಎಂದು ಚುನಾವಣೆಗಾಗಿ ಸರ್ಕಾರದ ವಿರುದ್ದ ಸುಳ್ಳು ಆರೋಪ ಮಾಡಿರುವುದು ಹಾಸ್ಯಾಸ್ಪದ ಎನಿಸಿದೆ. pic.twitter.com/Uj0SpWc3Fv
— Ramalinga Reddy (@RLR_BTM) February 1, 2018
ಮಾನ್ಯ @BSYBJP ಹಾಗೂ @DVSBJP ನಾನು ಈ ಮುಂಚೆ ಕೇಳಿದ ಪ್ರಶ್ನೆಗಳಿಗೆ ಉತ್ತರಿಸುವಿರಾ ??@INCKarnataka pic.twitter.com/FIcDVqBq9T
— Ramalinga Reddy (@RLR_BTM) February 2, 2018