ಬೆಂಗಳೂರು: ರಾಜ್ಯದ ರಾಜಕೀಯದಲ್ಲಿ ಈಗ ಫೋನ್ ಕದ್ದಾಲಿಕೆ ವಿಚಾರ ಈಗ ಗಂಭೀರ ಸ್ವರೂಪವನ್ನು ಪಡೆದುಕೊಂಡಿದೆ.ಬಿಜೆಪಿ ನಾಯಕರು ತಮ್ಮ ಫೋನ್ ಕದ್ದಾಲಿಕೆ ವಿಚಾರವಾಗಿ ಈಗ ಮೀಡಿಯಾ ಮುಂದೆ ಹಂಚಿಕೊಂಡಿದ್ದಾರೆ.ಫೋನ್ ಕದ್ದಾಲಿಕೆ ವಿಚಾರವಾಗಿ ಆರೋಪ ಮಾಡಿರುವ ಮಾಜಿ ಸಚಿವ ಮತ್ತು ಬಿಜೆಪಿ ನಾಯಕ ಆರ್.ಅಶೋಕ ಈ ಸರ್ಕಾರವು ಫೋನ್ ಕದ್ದಾಲಿಕೆ ಮಾಡುತ್ತಿರುವುದು ನೂರಕ್ಕೆ ನೂರು ಸತ್ಯ ಎಂದು ತಿಳಿಸಿದ್ದಾರೆ.
ಪ್ರಮುಖವಾಗಿ ಸಮ್ಮಿಶ್ರ ಸರ್ಕಾರ ಭಾಗವಾಗಿರುವ ಜೆಡಿಎಸ್ ನಿಂದ ಈ ಕೃತ್ಯ ನಡೆಯುತ್ತಿದೆ ಎಂದು ಆರೋಪ ಮಾಡಲಾಗುತ್ತಿದೆ. ಫೋನ್ ಕದ್ದಾಲಿಕೆಯಾಗುತ್ತಿರುವ ನಾಯಕರಲ್ಲಿ ಸಿದ್ದರಾಮಯ್ಯ,ಯಡಿಯೂರಪ್ಪ ರಂತಹ ನಾಯಕರ ಫೋನ್ ಗಳನ್ನೂ ಸಹಿತ ಕದ್ದಾಲಿಸಲಾಗುತ್ತಿದೆ ಎಂದು ಆರೋಪ ಮಾಡಲಾಗುತ್ತಿದೆ.ದೂರವಾಣಿ ಕದ್ದಾಲಿಕೆಯು ಪ್ರಮುಖವಾಗಿ ಬಿಜೆಪಿಯ ಆಪರೇಶನ್ ಕಮಲದಂತಹ ಕೆಲಸದಿಂದ ತಪ್ಪಿಸಿಕೊಳ್ಳಲು ಈ ಫೋನ್ ಟ್ಯಾಪಿಂಗ್ ಮಾಡಲಾಗುತ್ತಿದೆ ಎಂದು ಆರೋಪ ಕೇಳಿ ಬರುತ್ತಿದೆ.
ಕೆಲ ದಿನಗಳ ಹಿಂದೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರೂ ಕೂಡ ಕುಮಾರಸ್ವಾಮಿ ವಿರುದ್ದ ವಿರುದ್ಧ ಫೋನ್ ಕದ್ದಾಲಿಕೆಯ ಆರೋಪವನ್ನು ಮಾಡಿದ್ದರು.ಆದರೆ ಫೋನ್ ಕದ್ದಾಲಿಕೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಸಮ್ಮಿಶ್ರ ಸರ್ಕಾರದ ನಾಯಕರು ಈ ವಿಷಯವನ್ನು ಅಲ್ಲಗಳೆದಿದ್ದಾರೆ .ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಸಚಿವ ಸಾರಾ ಮಹೇಶ್ ಫೋನ್ ಕದ್ದಾಲಿಕೆ ವಿಚಾರವಾಗಿ ಬೇಕಿದ್ದರೆ ಕೇಂದ್ರ ಸರ್ಕಾರದಿಂದ ತನಿಖೆ ನಡೆಸಲಿ ಎಂದು ಅವರು ಸವಾಲು ಹಾಕಿದ್ದಾರೆ.