ಬೆಂಗಳೂರು : ವಿಪಕ್ಷ ನಾಯಕ, ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಅವರನ್ನ ರಾಜ್ಯದ ಜನರು ಗೌರವದಿಂದ ನೋಡ್ತಾರೆ. ಆದ್ರೆ, ಇತ್ತೀಚೆಗೆ ಅವರಿಗೆ ತಲೆ ಕೆಟ್ಟಿದೆ. ಅವರಿಗೆ ಚಿಕಿತ್ಸೆ ಅವಶ್ಯತೆ ಇದೆ ಎನಿಸುತ್ತಿದೆ ಎಂದು ಅವರು ಸಿದ್ದರಾಮಯ್ಯ ಆಗಿಲ್ಲ, ಉಡಾಫೆ ರಾಮಯ್ಯ ಆಗಿದ್ದಾರೆ ಎಂದು ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಅಧ್ಯಕ್ಷರು ಹಾಗೂ ರಾಜ್ಯ ವಕ್ತಾರರಾದ ಛಲವಾದಿ ನಾರಾಯಣಸ್ವಾಮಿ ಅವರು ನಿನ್ನೆ ಮೈಸೂರಿನಲ್ಲಿ ಸಿದ್ದರಾಮಯ್ಯ ಆಕ್ಷೇಪಾರ್ಹ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ.
ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ಹಿಂದೆ ದಲಿತರು ಹೊಟ್ಟೆಪಾಡಿಗೆ ಬಿಜೆಪಿಗೆ ಹೋಗಿದ್ದಾರೆ ಅಂತ ಹೇಳಿದ್ರು. ಜನತೆಗೆ ವೀಡಿಯೋ ತೋರಿಸಿದ ಮೇಲೆ, ಅದು ಸುಳ್ಳು ಅಂತ ಹೇಳಿದ್ರು. ನಿನ್ನೆ ಬಿಜೆಪಿ ನಿಂದಿಸುವ ಬರದಲ್ಲಿ, ಹಜಾಮತ್ ಮಾಡ್ತಿದ್ರಾ ಅಂತಾ ಕೇಳಿದ್ದಾರೆ. ಸವಿತಾ ಸಮಾಜದವರನ್ನ ಗೌರವಯುತವಾಗಿ ನೋಡ್ತಿದ್ದೇವೆ. ಸವಿತಾ ಸಮಾಜದವರನ್ನ ಹಜಾಮತ್ ಅಂತ ಹೇಳಿ ಅಪಮಾನ ಮಾಡಿದ್ದಾರೆ ಎಂದು ಗುಡುಗಿದರು.
ಇದನ್ನೂ ಓದಿ : "ಭ್ರಷ್ಟ ತಿಮಿಂಗಿಲಗಳನ್ನು ರಕ್ಷಿಸಲೆಂದೇ ಸಿಐಡಿ ಗಾಳ"
ಇವರು ದಲಿತ ವಿರೋಧಿಗಳಾಗಿದ್ದಾರೆ. ಇಂದು ರಾಜ್ಯದ ಜನರಲ್ಲಿ ಮನವಿ ಮಾಡ್ತೀನಿ. ಇಂತಹ ನಾಯಕರನ್ನ ಮೊದಲು ತಿರಸ್ಕಾರ ಮಾಡಿ. ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇವರು ಯಾವ ದೊಡ್ಡ ನಾಯಕರು. ಇವರು ಕಾಂಗ್ರೆಸ್‌ಗೆ ದೊಡ್ಡ ಕಂಟಕ. ಇವರು ಆರು ತಿಂಗಳೂ ಕಾಂಗ್ರೆಸ್‌ನಲ್ಲಿ ಇರೋದಿಲ್ಲ. ಇವರ ಬಗ್ಗೆ ಜನಾರ್ಧನ ಪೂಜಾರಿ ಹೇಳಿದ್ದಾರೆ. ಕಾಂಗ್ರೆಸ್‌ಗೆ ಸಿದ್ದರಾಮಯ್ಯ ಶನಿ ಇದ್ದಂಗೆ ಅಂತ ಹೆಳಿದ್ದಾರೆ. ಮಾಡಬಾರದ್ದನ್ನ ಮಾಡಿ ಕ್ಷಮೆ ಕೇಳಬಹುದಾ? ಸಿದ್ದರಾಮಯ್ಯ ಅವರು ಮಾತ್ರ ಕ್ಷಮೆ ಕೇಳಬಹುದಾ? ನೀವು ಎಲ್ಲರ ರೀತಿ ಸಾಮಾನ್ಯ ಪ್ರಜೆಯಾ? ಇಷ್ಟ ಬಂದಂತೆ ಏಕವಚನದಲ್ಲಿ ಮಾತಾಡ್ತಿದ್ದೀರಿ. ಅವರಿಗೆ ನಾಲಿಗೆ ಸ್ಥಿಮಿತದಲ್ಲಿ ಇದೆಯಾ? ನಿಮಗೆ ಚಿಕಿತ್ಸೆ ಅವಶ್ಯಕತೆ ಇದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಇದನ್ನೂ ಓದಿ : ಡಿಕೆಶಿ ಭ್ರಷ್ಟಾಚಾರದ ಹಣದಿಂದಲೇ ರಾಜ್ಯ ಕಾಂಗ್ರೆಸ್ ಉಸಿರಾಡುತ್ತಿದೆ: ಬಿಜೆಪಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.