Ganesh Chaturthi 2022: ಈ 3 ರಾಶಿಯವರಿಗೆ ಸದಾ ಇರುತ್ತೆ ಗಣಪತಿ ಆಶೀರ್ವಾದ

Ganesh Chaturthi 2022: ಯಾವುದೇ ಶುಭ ಕಾರ್ಯದಲ್ಲಿ ಮೊದಲ ಪೂಜೆ ವಿಘ್ನ ವಿನಾಶಕ ಗಣೇಶನಿಗೆ ಆಗಿರುತ್ತದೆ. ಈ ವರ್ಷ 31 ಆಗಸ್ಟ್ 2022ರ ಬುಧವಾರದಂದು ಗಣೇಶ ಚತುರ್ಥಿ ಹಬ್ಬವನ್ನು ಆಚರಿಸಲಾಗುತ್ತದೆ. ಗಣೇಶ ಚತುರ್ಥಿ ದಿನದಂದು ಪ್ರತಿ ಮನೆಯಲ್ಲೂ ಗಣೇಶನನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಲವು ರಾಶಿಗಳು ಗಣೇಶನಿಗೆ ತುಂಬಾ ಪ್ರಿಯವಾಗಿದ್ದು, ಆ ರಾಶಿಯವರ ಮೇಲೆ ಗಣಪತಿಯ ಕೃಪಾಕಟಾಕ್ಷ ಸದಾ ಇರುತ್ತದೆ ಎಂದು ಹೇಳಲಾಗುತ್ತದೆ. ಅಂತಹ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ...

Written by - Yashaswini V | Last Updated : Aug 25, 2022, 08:50 AM IST
  • ವಿಘ್ನ ವಿನಾಶಕ ಗಣೇಶ ಕೆಲವು ರಾಶಿಯವರ ಮೇಲೆ ಸದಾ ಕೃಪೆ ತೋರುತ್ತಾನೆ
  • ಜ್ಯೋತಿಷ್ಯ ಶಾಸ್ತ್ರದಲ್ಲಿ, ಗಣೇಶನು ಮೂರು ರಾಶಿಯವರ ಮೇಲೆ ವಿಶೇಷ ಅನುಗ್ರಹವನ್ನು ಹೊಂದಿದ್ದಾನೆ ಎಂದು ಹೇಳಲಾಗುತ್ತದೆ.
  • ಅಂತಹ ಅದೃಷ್ಟದ ರಾಶಿಗಳು ಯಾವುವು ತಿಳಿಯೋಣ...
Ganesh Chaturthi 2022: ಈ 3 ರಾಶಿಯವರಿಗೆ ಸದಾ ಇರುತ್ತೆ ಗಣಪತಿ ಆಶೀರ್ವಾದ title=
Lord Ganesha Blessing

ಗಣೇಶನಿಗೆ ಪ್ರಿಯವಾದ ರಾಶಿಗಳು: ಇಡೀ ದೇಶವೇ ಗಣೇಶ ಚತುರ್ಥಿಯ ಆಚರಣೆಗಾಗಿ ಕಾಯುತ್ತಿದೆ. ಈ ವರ್ಷ 31 ಆಗಸ್ಟ್ 2022ರ ಬುಧವಾರದಂದು ಗಣೇಶ ಚತುರ್ಥಿ ಹಬ್ಬವನ್ನು ಆಚರಿಸಲಾಗುತ್ತದೆ. ಗಣೇಶ ಚತುರ್ಥಿ ದಿನದಂದು ಪ್ರತಿ ಮನೆಯಲ್ಲೂ ಗಣೇಶನನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ. ಗಣೇಶೋತ್ಸವದ 10 ದಿನಗಳಲ್ಲಿ, ಗಣಪತಿ ಬಪ್ಪನು ತನ್ನ ಭಕ್ತರ ನಡುವೆ ವಾಸಿಸುತ್ತಾನೆ ಮತ್ತು ಅವರ ಎಲ್ಲಾ ದುಃಖಗಳನ್ನು ಹೋಗಲಾಡಿಸಿ ಸಂತೋಷದಿಂದ ತುಂಬುತ್ತಾನೆ ಎಂಬ ನಂಬಿಕೆ ಇದೆ. ಅದೇ ಸಮಯದಲ್ಲಿ, ವಿಘ್ನ ವಿನಾಶಕ ಗಣೇಶ ಕೆಲವು ರಾಶಿಯವರ ಮೇಲೆ ಸದಾ ಕೃಪೆ ತೋರುತ್ತಾನೆ ಎಂದು ಹೇಳಲಾಗುತ್ತದೆ. ಗಣಪತಿ ಬಪ್ಪ ಯಾವಾಗಲೂ ದಯೆ ತೋರುವ ರಾಶಿಗಳು ಯಾವುವು ಎಂದು ತಿಳಿಯೋಣ...

ವಾಸ್ತವವಾಗಿ, ಬುಧ ಗ್ರಹವು ಬುದ್ಧಿವಂತಿಕೆ, ಸಮೃದ್ಧಿಯ ಅಂಶವಾಗಿದೆ ಮತ್ತು ಇದು ಗಣೇಶನಿಗೆ ಸಂಬಂಧಿಸಿದ ಗ್ರಹವಾಗಿದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ,  ಗಣೇಶನು ಮೂರು ರಾಶಿಯವರ ಮೇಲೆ ವಿಶೇಷ ಅನುಗ್ರಹವನ್ನು ಹೊಂದಿದ್ದಾನೆ ಎಂದು ಹೇಳಲಾಗುತ್ತದೆ. ಅಂತಹ ಅದೃಷ್ಟದ ರಾಶಿಗಳು ಯಾವುವು ತಿಳಿಯೋಣ...

ಇದನ್ನೂ ಓದಿ- Numerology: ಈ ದಿನಾಂಕಗಳಲ್ಲಿ ಜನಿಸಿದ ಜನರು ಅತೀ ಬುದ್ದಿವಂತರು ಮತ್ತು ಅತ್ಯಂತ ಅದೃಷ್ಟಶಾಲಿಗಳು

ಈ ರಾಶಿಯವರ ಮೇಲೆ ಸದಾ ಇರುತ್ತೆ ಗಣಪತಿಯ ಕೃಪಾಕಟಾಕ್ಷ:
ಮೇಷ ರಾಶಿ: 

ಮೇಷ ರಾಶಿಯ ಜನರ ಮೇಲೆ ಗಣಪತಿಯು ಸದಾ ದಯೆ ತೋರುತ್ತಾನೆ. ಹಾಗಾಗಿಯೇ, ಈ ರಾಶಿಯವರು ಯಾವುದೇ ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತಾರೆ ಎಂದು ಹೇಳಲಾಗುತ್ತದೆ. ಅಲ್ಲದೆ, ಜೀವನದಲ್ಲಿ ಎಷ್ಟೇ ವಿಘ್ನಗಳು ಎದುರಾದರೂ  ಧೈರ್ಯ ಮತ್ತು ಶೌರ್ಯದಿಂದ ಎಲ್ಲವನ್ನೂ ಜಯಿಸುತ್ತಾರೆ ಎಂದು ಹೇಳಲಾಗುತ್ತದೆ.

ಮಿಥುನ ರಾಶಿ: 
ಮಿಥುನ ರಾಶಿಯವರ ಆಡಳಿತ ಗ್ರಹ ಬುಧ ಗ್ರಹ. ಈ ಕಾರಣದಿಂದಾಗಿಯೇ ಈ ರಾಶಿಯ ಜನರು ತುಂಬಾ ಬುದ್ದಿವಂತರು ಮತ್ತು ಉತ್ತಮ ಸಂವಹನಕಾರರೂ ಆಗಿರುತ್ತಾರೆ. ಇವರು ವ್ಯಾಪಾರ-ವ್ಯವಹಾರದಲ್ಲಿ ತುಂಬಾ ನಿಪುಣರಾಗಿರುತ್ತಾರೆ. ಗಣೇಶನ ಆಶೀರ್ವಾದದಿಂದ ಇವರು ತುಂಬಾ ಚಿಕ್ಕ ವಯಸ್ಸಿನಲ್ಲಿಯೇ ವೃತ್ತಿ ರಂಗದಲ್ಲಿ ಉತ್ತುಂಗಕ್ಕೆ ಏರುತ್ತಾರೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ- Haldi Totka: ಅದೃಷ್ಟವನ್ನೇ ಬದಲಾಯಿಸುತ್ತೆ ಒಂದು ಅರಿಶಿನದ ಕೊನೆ

ಮಕರ ರಾಶಿ: 
ಮಕರ ರಾಶಿಯವರ ಮೇಲೆ ಕರ್ಮಫಲದಾತ ಶನಿ ದೇವನ ಜೊತೆಗೆ ವಿಘ್ನೇಶ್ವರನ ವಿಶೇಷ ಆಶೀರ್ವಾದವೂ ಇರುತ್ತದೆ. ಈ ಜನರು ತಮ್ಮ ಬುದ್ಧಿವಂತಿಕೆ ಮತ್ತು ಕೌಶಲ್ಯದಿಂದ ದೊಡ್ಡ ಸವಾಲುಗಳನ್ನೂ ಸಹ ತುಂಬಾ ಸುಲಭವಾಗಿ ಜಯಿಸುತ್ತಾರೆ ಎಂದು ಹೇಳಲಾಗುತ್ತದೆ. ಈ ರಾಶಿಯವರಿಗೆ ಜೀವನದಲ್ಲಿ ಸಕಲ ಸುಖ-ಸಂಪತ್ತು ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News