Valentine's Day 2023 : ''ಕನಸಲು ನೀನೇ ಮನಸಲು ನೀನೇ ನಿನ್ನಾಣೆ" ಇದು ಪ್ರೇಮ ಲೋಕದ ಪ್ರಣಯ ಕತೆ.!

Valentine's Day 2023 : ಫೆಬ್ರವರಿ 14 ಈ ದಿನ ಬಂದ್ರೆ ಸಾಕು ಯುವಕ ಯುವತಿಯರ ಮನದಾಳದ ಕಡಲಿಂದ ತುಟಿಯ ಮೇಲೆ ನಾಚಿಕೆಯ ಬೀರು ನಗೆ ಮೂಡುತ್ತೆ. ಹಸಿ ನಗೆಯ ಹೊಸ ಕನಸು ಕಟ್ಟಿ ಹೊಸ ಸಂಗಾತಿಯ ಮನದಲ್ಲಿ ಮನ ಮಾಡುವ ಸಮಯವಾಗಿರುತ್ತದೆ. 

Written by - Zee Kannada News Desk | Last Updated : Feb 14, 2023, 07:20 PM IST
  • ಫೆಬ್ರವರಿ 14 ಪ್ರೇಮಿಗಳ ದಿನ
  • ಇದು ಯುವಕರಿಗೆ ತುಂಬಾ ವಿಶೇಷ
  • ಪ್ರೇಮಿಗಳಿಗಂತೂ ಸ್ಪೆಷಲ್‌ ಡೇ
Valentine's Day 2023 : ''ಕನಸಲು ನೀನೇ ಮನಸಲು ನೀನೇ ನಿನ್ನಾಣೆ" ಇದು ಪ್ರೇಮ ಲೋಕದ ಪ್ರಣಯ ಕತೆ.! title=

Valentine's Day 2023 : ಫೆಬ್ರವರಿ 14 ಈ ದಿನ ಬಂದ್ರೆ ಸಾಕು ಯುವಕ ಯುವತಿಯರ ಮನದಾಳದ ಕಡಲಿಂದ ತುಟಿಯ ಮೇಲೆ ನಾಚಿಕೆಯ ಬೀರು ನಗೆ ಮೂಡುತ್ತೆ. ಹಸಿ ನಗೆಯ ಹೊಸ ಕನಸು ಕಟ್ಟಿ ಹೊಸ ಸಂಗಾತಿಯ ಮನದಲ್ಲಿ ಮನ ಮಾಡುವ ಸಮಯವಾಗಿರುತ್ತದೆ. ಬಾಳಿನ ಬೆಳಕು ನಿನನಾಗುವೆಯ, ಹಸಿರಿನ ಬಿಸಿ ಉಸಿರಿನ ಉನ್ಮಾದದ ಹಗೆಯಲ್ಲಿ ಹೋಗೆಯಂತೆ ಆಕಾಶದಲ್ಲಿ ತೇಲಾಡುತ್ತ ಮೈ ಮರೆಯುತ್ತಾರೆ, ''ಕನಸಲು ನೀನೇ ಮನಸಲು ನೀನೇ ನಿನ್ನಾಣೆ"ಯನ್ನುತ್ತ. ಪ್ರೀತಿಯನ್ನು ತೋರುತ್ತಾರೆ. 

ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಫೆಬ್ರವರಿ 14 ಪ್ರೇಮಿಗಳ ದಿನಾಚಣೆಯನ್ನಾಗಿ ಆವರಣೆ ಮಾಡಲಾಗುತ್ತೆ, ಅಂದು ಪ್ರಿಯಕರ/ಪ್ರಿಯತಮೆ ತಮಗೆ ಇಷ್ಟವಾದ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ, ಅಥವಾ ತನ್ನ ಪ್ರೀತಿಯನ್ನು ಪ್ರಿಯಕರ/ಪ್ರಿಯತಮೆಯ ಮುಂದೆ ಅಭಿವ್ಯಕ್ತ ಪಡಿಸುವ ಒಂದೊಳ್ಳೆ ದಿನವೆಂದು ನಂಬುತ್ತಾರೆ ಹಾಗೆ ಆಚರಣೆಯನ್ನು ಮಾಡುತ್ತಾ ಬಂದಿದ್ದಾರೆ.

ಇದನ್ನೂ ಓದಿ : ನಿಮ್ಮ ಮನದಲ್ಲೇನಿದೆ ? ನೀವು ಪ್ರೀತಿಸುವ ಜೀವಕ್ಕೆ ಕಳುಹಿಸಿ ಮನದ ಮಾತಿನ ಸಂದೇಶ

ಈ ಪಾಶ್ಚಿಮಾತ್ಯ ಸಂಸ್ಕೃತಿ ಈಗ ಜಗತ್ತಿನಾದ್ಯಂತ ತನ್ನ ಬೀಡು ಬಿಟ್ಟು ನಿಂತಿದೆ, ನಮ್ಮ ಭಾರತ ದೇಶದಲ್ಲಿ ಈ ಪದ್ಧತಿಯು ಯುವಕ ಯುವತಿಯರು ದೊಡ್ಡ ಹಬ್ಬವಾಗಿ ಆಚರಿಸಲಾಗುತ್ತದೆ. ಸರ್ವೆ ಸಾಮಾನ್ಯ ಇಂತಹ ಆಚರಣೆಗಳು ನಗರಗಳಲ್ಲಿ ಅತಿ ಹೆಚ್ಚಾಗಿ ಹಾಗೂ ದೊಡ್ಡ ಮಟ್ಟದಲ್ಲಿ ಆಚರಣೆ ಮಾಡಲಾಗುತ್ತದೆ.  

ಈ ಪ್ರೇಮಿಗಳ ದಿನ ಬಂದಾಗ, ಕೆಲವು ಮಹಾನ್ ಪ್ರೇಮಿಗಳನ್ನು ನೆನಪು ಮಾಡಿಕೊಳ್ಳಬೇಕಾಗುತ್ತದೆ. ಪುರಾಣಗಳಲ್ಲಿ ನೋಡಿದ್ರೆ. ಶಿವ - ಪಾರ್ವತಿ, ರಾಧಾ - ಕೃಷ್ಣ, ಸೀತಾ - ರಾಮರು ಪ್ರೀತಿಯ ಮೌಲ್ಯವನ್ನು ಸಾರಿದರು. ಭಾರತದ ಇತಿಹಾಸ ಪುಟಗಳನ್ನು ಒಮ್ಮೆ ತಿರುಚಿ ನೋಡಿದಾಗ ಅಲ್ಲೂ ಹಲವಾರು ಪ್ರೇಮಿಗಳು ದೊರೆಯುತ್ತಾರೆ, ಶಹಜಾನ್ ತನ್ನ ಪ್ರೀತಿಯ ನೆನಪಿಗಾಗಿ ಮಮ್ತಾಜ್ಗೆ ' ತಾಜ್ಮಹಲ್ ' ಸ್ಮಾರಕವನ್ನು ಕಟ್ಟಿಸಿದ. ಭಾಜಿರವ್ ಹಾಗೂ ಮಸ್ತಾನಿಯ ಪ್ರೀತಿ ಹಲವು ಪ್ರೇಮಿಗಳಿಗೆ ಈಗಲೂ ಪಾಠ ನೀಡುತ್ತೆ. ತನ್ನ ಬಾಳಿನ ಸಂಗಾತಿಯ ಜೀವವನ್ನು ತಗೆದ ಪರ್ವತವನ್ನು ಕೊರೆದ ದಶರಥ ಮಾಂಜೆಯು ಪ್ರೇಮಿಗಳಿಗೆ ಮಾದರಿಯಾದ ಮಹಾನ್ ವ್ಯಕ್ತಿ. 

ಪ್ರೀತಿ ಅಮರ ಯಾಕಂದ್ರೆ ಅದು ಪವಿತ್ರತೆಯನ್ನು ಹೊಂದಿದೆ. ನೀವು ನಿಮ್ಮ ಬಾಳಿನ ಸಂಗಾತಿಯನ್ನು ಒಮ್ಮೆ ಗಟ್ಟಿಯಾಗಿ ನಿಮ್ಮ ಭಾವನೆ ವ್ಯಕ್ತಪಡಿಸಿ? ಎಲ್ಲರಿಗೂ ಪ್ರೇಮಿಗಳ ದಿನಾಚಣೆಯ ಶುಭಾಶಯಗಳು.

ಇದನ್ನೂ ಓದಿ : ಪ್ರೀತಿ ಎಂದರೇನು ಎಂದು ಈಗ ಅರಿತೆನು...

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News