Zodiac Sign: ಪ್ರತಿಯೊಬ್ಬ ವ್ಯಕ್ತಿಗೂ ಹಣದ ಅವಶ್ಯಕತೆ ಇದ್ದೇ ಇರುತ್ತದೆ. ಆದರೆ ಕೈತುಂಬಾ ದುಡ್ಡು ಸಂಪಾದಿಸಿದರೂ ತಿಂಗಳಾಂತ್ಯದಲ್ಲಿ ಪೈಸೆ ಪೈಸೆಗೂ ಪರದಾಡುವವರೇ ಹೆಚ್ಚು. ಹಣದ ನಿರ್ವಹಣೆ ಸರಿಯಾಗಿ ಆಗದೇ ಇರುವುದೇ ಇದಕ್ಕೆ ಕಾರಣ. ಅತಿರಂಜಿತವಾಗಿ ಖರ್ಚು ಮಾಡುವ ಅಥವಾ ಆದ್ಯತೆಗೆ ಅನುಗುಣವಾಗಿ ಖರ್ಚು ಮಾಡದಿರುವ ಅಭ್ಯಾಸವು ಅವರಿಗೆ ಉಳಿಸಲು ಅವಕಾಶ ನೀಡುವುದಿಲ್ಲ ಅಥವಾ ಆರಾಮವಾಗಿ ಬದುಕಲು ಅವಕಾಶ ನೀಡುವುದಿಲ್ಲ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಕೆಲವು ರಾಶಿಚಕ್ರ ಚಿಹ್ನೆಗಳನ್ನು ಹೊಂದಿರುವ ಜನರು ಬಜೆಟ್ ಮಾಡಲು ಮತ್ತು ಅದರ ಪ್ರಕಾರ ನಡೆಯಲು ಪ್ರವೀಣರಾಗಿರುತ್ತಾರೆ. ಅವರು ತಮ್ಮ ಕಷ್ಟದ ಸಮಯದಲ್ಲೂ ಹಣವನ್ನು ಉಳಿಸುತ್ತಾರೆ ಮತ್ತು ಅವರ ಆದಾಯವು ಇತರರಿಗಿಂತ ಕಡಿಮೆಯಿದ್ದರೂ ಸಹ ತಮ್ಮ ಇಡೀ ಜೀವನವನ್ನು ಆರ್ಥಿಕ ವಿಷಯಗಳಲ್ಲಿ ಆರಾಮವಾಗಿ ಕಳೆಯುತ್ತಾರೆ.
ಈ ರಾಶಿಯ ಜನರು ಉಳಿತಾಯದಲ್ಲಿ ಪರಿಣಿತರು :
ವೃಷಭ ರಾಶಿ (Taurus) : ವೃಷಭ ರಾಶಿಯ ಜನರು ಯಾವಾಗಲೂ ಉತ್ತಮ ವಸ್ತುಗಳನ್ನು ಇಷ್ಟಪಡುತ್ತಾರೆ ಮತ್ತು ಅವುಗಳನ್ನು ಖರೀದಿಸಲು ಪ್ರಯತ್ನಿಸುತ್ತಾರೆ. ತಮ್ಮ ದುಬಾರಿ ಹವ್ಯಾಸಗಳನ್ನು ಪೂರೈಸಿದ ನಂತರವೂ ಅವರು ಸಾಕಷ್ಟು ಉಳಿತಾಯ ಮಾಡುತ್ತಾರೆ ಮತ್ತು ಹಣದ ವಿಷಯದಲ್ಲಿ ಯಾವಾಗಲೂ ನಿರಾಳರಾಗಿರುತ್ತಾರೆ. ಈ ಜನರು ಹಣಕಾಸಿನ ಯೋಜನೆ ಮತ್ತು ಅದನ್ನು ಅಳವಡಿಸಿಕೊಳ್ಳುವಲ್ಲಿ ಬಹಳ ಪ್ರಬಲರಾಗಿದ್ದಾರೆ. ಆದ್ದರಿಂದ, ಪ್ರತಿ ತಿಂಗಳು ಸಣ್ಣ ಉಳಿತಾಯವನ್ನು ಮಾಡುವ ಮೂಲಕ, ಅವರು ಬಲವಾದ ಬ್ಯಾಂಕ್ ಬ್ಯಾಲೆನ್ಸ್ ಮಾಡುತ್ತಾರೆ.
ಇದನ್ನೂ ಓದಿ- Personality By Zodiac Sign: ಈ ರಾಶಿಯ ಜನ ಅತ್ಯಂತ ಪ್ರಾಮಾಣಿಕ ಸ್ನೇಹಿತರು
ಮಿಥುನ ರಾಶಿ (Gemini): ಮಿಥುನ ರಾಶಿಯವರಿಗೆ ಹೂಡಿಕೆಯ (Investment) ಬಗ್ಗೆ ಉತ್ತಮ ತಿಳುವಳಿಕೆ ಇರುತ್ತದೆ. ಅವರು ಉತ್ತಮವಾಗಿ ಯೋಜಿಸುತ್ತಾರೆ ಮತ್ತು ನಿರಂತರವಾಗಿ ತಮ್ಮ ಹಣವನ್ನು ಹೆಚ್ಚಿಸುತ್ತಲೇ ಇರುತ್ತಾರೆ. ಈ ಜನರಿಗೆ ಎಂದಿಗೂ ಹಣದ ಕೊರತೆಯಿರುವುದಿಲ್ಲ. ಈ ಜನರು ವ್ಯಾಪಾರದಲ್ಲಿದ್ದರೆ ಅವರು ಸಾಕಷ್ಟು ಹಣವನ್ನು ಗಳಿಸುತ್ತಾರೆ.
ಸಿಂಹ ರಾಶಿ (Leo): ಸಿಂಹ ರಾಶಿಯ ಜನರು ಹಣದ (Money) ವಿಷಯದಲ್ಲಿ ಅದೃಷ್ಟವಂತರು ಮತ್ತು ಅವರು ಯಾವಾಗಲೂ ಅದನ್ನು ಸರಿಯಾಗಿ ಬಳಸಿಕೊಂಡು ಅದನ್ನು ಹೆಚ್ಚಿಸುತ್ತಲೇ ಇರುತ್ತಾರೆ. ಈ ಜನರು ಹೂಡಿಕೆಯ ಬಗ್ಗೆ ಉತ್ತಮ ತಿಳುವಳಿಕೆಯನ್ನು ಹೊಂದಿದ್ದಾರೆ, ಆದ್ದರಿಂದ ಅವರು ಕಡಿಮೆ ಹೂಡಿಕೆ ಮಾಡುವ ಮೂಲಕ ದೊಡ್ಡ ಹಣವನ್ನು ಗಳಿಸುತ್ತಾರೆ. ಈ ಕಾರಣಕ್ಕಾಗಿ, ಅವರು ಯಾವಾಗಲೂ ಉಳಿತಾಯದತ್ತ ಗಮನ ಹರಿಸುತ್ತಾರೆ ಇದರಿಂದ ಅವರು ಹೆಚ್ಚು ಹೆಚ್ಚು ಹಣವನ್ನು ಹೂಡಿಕೆ ಮಾಡಬಹುದು.
ಇದನ್ನೂ ಓದಿ- ಗುರುವಾರ ಬಾಳೆಗಿಡಕ್ಕೆ ಈ ರೀತಿ ಪೂಜೆ ಮಾಡಿ: ಅಪಾರ ಧನಲಾಭ ನಿಮ್ಮದಾಗುತ್ತದೆ..!
ಮಕರ ರಾಶಿ (Capricorn) : ಮಕರ ರಾಶಿಯ ಜನರು ದುಬಾರಿ ವಸ್ತುಗಳಿಗೆ ಹಣವನ್ನು ವ್ಯಯಿಸುವುದಿಲ್ಲ. ಆದರೆ, ಅದು ತುಂಬಾ ಮುಖ್ಯ ಅಥವಾ ಉಪಯುಕ್ತ ಎನ್ನುವ ವಸ್ತುಗಳಿಗೆ ಹಣ ವ್ಯಯಿಸುತ್ತಾರೆ. ಅನಗತ್ಯವಾಗಿ ಖರ್ಚು ಮಾಡುವುದಕ್ಕಿಂತ ಹಣವನ್ನು ಉಳಿಸುವುದನ್ನು ಅವರು ನಂಬುತ್ತಾರೆ. ಇದರಿಂದಾಗಿ ಅನೇಕ ಬಾರಿ ಅವರು ತಮ್ಮ ಹಣದ ಆನಂದವನ್ನು ಪಡೆಯಲು ಸಾಧ್ಯವಾಗುವುದಿಲ್ಲ ಮತ್ತು ಅವರ ಕುಟುಂಬ ಅಥವಾ ಮಕ್ಕಳು ಅದನ್ನು ಆನಂದಿಸುತ್ತಾರೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.