Vastu Remedies: ನಿಮ್ಮ ಮನೆಯಲ್ಲಿಯೂ ಕೂಡ ಇಂತಹ ಅಲಂಕಾರದ ವಸ್ತುಗಳಿದ್ದರೆ, ತಕ್ಷಣವೇ ಅವುಗಳನ್ನು ಹೊರಹಾಕಿ

Vastu Remedies For Showpiece: ಮನೆಯನ್ನು ಸುಂದರವಾಗಿಸಲು, ಜನರು ಸುಂದರವಾದ ಶೋಪೀಸ್‌ಗಳಿಂದ ಮನೆಯನ್ನು ಅಲಂಕರಿಸುತ್ತಾರೆ. ಆದರೆ ವಾಸ್ತು ಪ್ರಕಾರ, ಶೋಪೀಸ್ ಅನ್ನು ಸರಿಯಾದ ದಿಕ್ಕಿನಲ್ಲಿ ಅಥವಾ ಸರಿಯಾದ ಸ್ಥಳದಲ್ಲಿ ಇರಿಸದಿದ್ದರೆ, ಅದು ವಾಸ್ತು ದೋಷಕ್ಕೆ ಕಾರಣವಾಗುತ್ತದೆ.   

Written by - Nitin Tabib | Last Updated : Apr 6, 2023, 09:58 PM IST
  • ವಾಸ್ತು ಪ್ರಕಾರ, ಶೋಪೀಸ್ ಅನ್ನು ಸರಿಯಾದ ದಿಕ್ಕಿನಲ್ಲಿ ಅಥವಾ
  • ಸರಿಯಾದ ಸ್ಥಳದಲ್ಲಿ ಇರಿಸದಿದ್ದರೆ, ಅದು ವಾಸ್ತು ದೋಷಕ್ಕೆ ಕಾರಣವಾಗುತ್ತದೆ.
  • ನೀವೂ ಕೂಡ ಅಂತಹ ಶೋಪೀಸ್‌ಗಳಿಂದ ನಿಮ್ಮ ಮನೆಯನ್ನು ಅಲಂಕರಿಸಿದ್ದರೆ, ತಕ್ಷಣ ಅವುಗಳನ್ನು ತೆಗೆದುಹಾಕಿ.
Vastu Remedies: ನಿಮ್ಮ ಮನೆಯಲ್ಲಿಯೂ ಕೂಡ ಇಂತಹ ಅಲಂಕಾರದ ವಸ್ತುಗಳಿದ್ದರೆ, ತಕ್ಷಣವೇ ಅವುಗಳನ್ನು ಹೊರಹಾಕಿ title=
ವಾಸ್ತು ಸಲಹೆಗಳು

Vastu Remedies For Showpiece: ಮನೆಯನ್ನು ಸುಂದರವಾಗಿಸಲು, ಜನರು ಸುಂದರವಾದ ಶೋಪೀಸ್‌ಗಳಿಂದ ಮನೆಯನ್ನು ಅಲಂಕರಿಸುತ್ತಾರೆ. ಆದರೆ ವಾಸ್ತು ಪ್ರಕಾರ, ಶೋಪೀಸ್ ಅನ್ನು ಸರಿಯಾದ ದಿಕ್ಕಿನಲ್ಲಿ ಅಥವಾ ಸರಿಯಾದ ಸ್ಥಳದಲ್ಲಿ ಇರಿಸದಿದ್ದರೆ, ಅದು ವಾಸ್ತು ದೋಷಕ್ಕೆ ಕಾರಣವಾಗುತ್ತದೆ.  ನೀವೂ ಕೂಡ ಅಂತಹ ಶೋಪೀಸ್‌ಗಳಿಂದ ನಿಮ್ಮ ಮನೆಯನ್ನು ಅಲಂಕರಿಸಿದ್ದರೆ, ತಕ್ಷಣ ಅವುಗಳನ್ನು ತೆಗೆದುಹಾಕಿ.

1. ಈ ಪಕ್ಷಿಗಳ ಚಿತ್ರವೂ ಕೂಡ ಬೇಡ: ಕಾಡು ಪ್ರಾಣಿಗಳಂತೆಯೇ, ಹಿಂಸಾತ್ಮಕ ಪಕ್ಷಿಗಳ ಚಿತ್ರವೂ ಕೂಡ ಬೇಡ. ಮನೆಯಲ್ಲಿ ಒಂದು ವೇಳೆ ಗಿಡುಗ, ಬಾವಲಿ, ಕಾಗೆ, ಗೂಬೆಗಳಂತಹ ಪಕ್ಷಿಗಳ ಚಿತ್ರಗಳನ್ನು ಮರೆತೂ ಕೂಡ ಇಡಬೇಡಿ. ಕ್ರೂರ ಪ್ರಾಣಿ-ಪಕ್ಷಿಗಳ ಚಿತ್ರಗಳನ್ನು ನೋಡುವುದರಿಂದ ಮನೆಯ ಸದಸ್ಯರೂ ಕೂಡ ಕ್ರೂರ ಪ್ರವೃತ್ತಿಯವರಾಗುತ್ತಾರೆ ಎನ್ನಲಾಗುತ್ತದೆ. ಕುಟುಂಬ ಸದಸ್ಯರ ನಡುವೆ ಕ್ಲೇಶಗಳು ನಿರ್ಮಾಣಗೊಳ್ಳುತ್ತವೆ ಮತ್ತು ಮನೆಯ ವಾತಾವರಣ ಇದರಿಂದ ಅಶಾಂತಿಯಿಂದ ಕೂಡಿರುತ್ತದೆ ಎನ್ನಲಾಗುತ್ತದೆ.

2. ಕಾಡು ಪ್ರಾಣಿಗಳ ಚಿತ್ರ: ಮನೆಯಲ್ಲಿ ಕ್ರೂರ ಮೃಗಗಳು ಅಥವಾ ಮೃಗಗಳು ಬೇಟೆಯಾಡುತ್ತಿರುವ ಚಿತ್ರಗಳಿದ್ದರೆ ಅವುಗಳನ್ನು ತಕ್ಷಣ ತೆಗೆದು ಹಾಕಿ.ವಾಸ್ತು ಪ್ರಕಾರ, ಮನೆಯಲ್ಲಿ ಕಾಡು ಪ್ರಾಣಿಗಳ ಶೋಪೀಸ್ ಮತ್ತು ಹಿಂಸಾತ್ಮಕ ಪ್ರಾಣಿಗಳ ಚಿತ್ರಗಳನ್ನು ಬಳಸಬಾರದು. ಅಂತಹ ಪ್ರದರ್ಶನಗಳು ನಕಾರಾತ್ಮಕತೆಯನ್ನು ಹೆಚ್ಚಿಸುತ್ತವೆ ಎಂದು ನಂಬಲಾಗಿದೆ. ಅಷ್ಟೇ ಅಲ್ಲ, ಇದು ಮನೆಯ ಸಮೃದ್ಧಿ ಮತ್ತು ಪ್ರಗತಿಗೆ ಮಾರಕವಾಗಿದೆ.

ಇದನ್ನೂ ಓದಿ- Chatrurgrah Yog In Aries: 12 ವರ್ಷಗಳ ಬಳಿಕ ಮೇಷ ರಾಶಿಯಲ್ಲಿ ಚತುರ್ಗ್ರಹಿ ಯೋಗ, ಈ ರಾಶಿಗಳಿಗೆ ಧನಹಾನಿಯ ಸಾಧ್ಯತೆ!

3. ತಾಜ್ ಮಹಲ್- ಸಾಮಾನ್ಯವಾಗಿ, ಜನರು ತಾಜ್ ಮಹಲ್‌ನ ಶೋಪೀಸ್‌ಗಳನ್ನು ಮನೆಗಳಲ್ಲಿ ಇಡುವುದನ್ನು ನೀವು ನೋಡಿರಬಹುದು. ಹಲವು ಬಾರಿ ಜನರು ತಾಜ್ ಮಹಲ್ ಅನ್ನು ಪರಸ್ಪರ ಉಡುಗೊರೆ ರೂಪದಲ್ಲಿ  ನೀಡುತ್ತಾರೆ. ತಾಜ್ ಮಹಲ್ ಅನ್ನು ವಿಶ್ವದ ಏಳನೇ ಅದ್ಭುತ ಎಂದು ಕರೆಯಲಾಗಿದ್ದರೂ, ಅದನ್ನು ಮನೆಯಲ್ಲಿ ಇಡುವುದನ್ನು ವಾಸ್ತು ಶಾಸ್ತ್ರದ ಪ್ರಕಾರ ನಿಷೇಧಿಸಲಾಗಿದೆ. ತಾಜ್ ಮಹಲ್ ಮುಮ್ತಾಜ್ ಸಮಾಧಿ ಎಂದು ಹೇಳಲಾಗುತ್ತದೆ. ಹಿಂದೂ ಧರ್ಮದಲ್ಲಿ, ಸಮಾಧಿ ಅಥವಾ ಸಮಾಧಿಯಂತಹ ಶೋಪೀಸ್ ಅನ್ನು ಮನೆಯಲ್ಲಿ ಇಡುವುದು ಅಶುಭವೆಂದು ಪರಿಗಣಿಸಲಾಗಿದೆ. ಆದ್ದರಿಂದ, ಅಂತಹ ಶೋಪೀಸ್‌ಗಳನ್ನು ಮನೆಯಲ್ಲಿ ಇಡಬೇಡಿ.

ಇದನ್ನೂ ಓದಿ-Shukra Gochar: ಕೆಲವೇ ಗಂಟೆಗಳಲ್ಲಿ ಸ್ವರಾಶಿಗೆ ವೈಭವದಾತನ ಎಂಟ್ರಿ, ಮಾಲವ್ಯ ರಾಜಯೋಗದಿಂದ 3 ರಾಶಿಗಳ ಜನರಿಗೆ ಅಪಾರ ಧನಲಾಭ!

4. ನೀರಿನಲ್ಲಿ ಮುಳುಗುತ್ತಿರುವ ವಸ್ತು - ಅಧಃಪತನವನ್ನು ಸೂಚಿಸುವ ಕೆಲವು ವಸ್ತುಗಳನ್ನು ಮನೆಯಲ್ಲಿ ಪ್ರದರ್ಶಿಸುವುದು ವಾಸ್ತು ಶಾಸ್ತ್ರದಲ್ಲಿ ನಿಷೇಧಿಸಲಾಗಿದೆ. ಯಾವುದೇ ಮುಳುಗುವ ವಸ್ತುವನ್ನು ಅಧಃಪತನ ಮತ್ತು ಸೋಲಿನ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇಂತಹ ಪ್ರದರ್ಶನಗಳು ಮನೆಯಲ್ಲಿ ನಕಾರಾತ್ಮಕತೆಯನ್ನು ಹೆಚ್ಚಿಸುತ್ತವೆ. ಇದರೊಂದಿಗೆ, ಪ್ರಗತಿ ಮತ್ತು ಸಮೃದ್ಧಿಯಲ್ಲಿ ಅಡೆತಡೆಗಳನ್ನು ಉಂಟುಮಾಡುತ್ತವೆ. ಹೀಗಿರುವಾಗ, ಮುಳುಗುವ ದೋಣಿ ಅಥವಾ ಸೂರ್ಯ ಮುಳುಗುವ ಚಿತ್ರವನ್ನು ಮನೆಯಲ್ಲಿ ಇಡಬೇಡಿ.

ಇದನ್ನೂ ಓದಿ-Maha Yuti: 12 ವರ್ಷಗಳ ಬಳಿಕ ಹತ್ತಿರಕ್ಕೆ ಬರಲಿವೆ ಈ 3 ದೊಡ್ಡ ಗ್ರಹಗಳು, 3 ರಾಶಿಗಳ ಜನರಿಗೆ ಅಪಾರ ಧನಲಾಭ ಯೋಗ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News