ಹಣದ ಸಮಸ್ಯೆ, ಬಡತನಕ್ಕೆ ನಿಮ್ಮ ಮನೆಯಲ್ಲಿರುವ ಈ ವಸ್ತುಗಳೇ ಕಾರಣ..! ಇಂದೇ ಅವುಗಳನ್ನು ಹೊರಹಾಕಿ..

Vastu: ವಾಸ್ತು ಶಾಸ್ತ್ರದ ಪ್ರಕಾರ ಕೆಲವು ವಸ್ತುಗಳನ್ನು ಮನೆಯಲ್ಲಿ ಇಡಬಾರದು. ಈ 3 ವಸ್ತುಗಳು ಮನೆಯಲ್ಲಿದ್ದರೆ ದುರಾದೃಷ್ಟ ಖಚಿತ ಎಂದು ವಾಸ್ತು ತಜ್ಞರು ಎಚ್ಚರಿಸುತ್ತಾರೆ. ಅಷ್ಟಕ್ಕೂ ಆ ವಸ್ತುಗಳು ಯಾವುದು? ತಿಳಿಯಲು ಮುಂದೆ ಓದಿ..
 

1 /8

Vastu: ವಾಸ್ತು ಶಾಸ್ತ್ರದ ಪ್ರಕಾರ ಕೆಲವು ವಸ್ತುಗಳನ್ನು ಮನೆಯಲ್ಲಿ ಇಡಬಾರದು. ಈ 3 ವಸ್ತುಗಳು ಮನೆಯಲ್ಲಿದ್ದರೆ ದುರಾದೃಷ್ಟ ಖಚಿತ ಎಂದು ವಾಸ್ತು ತಜ್ಞರು ಎಚ್ಚರಿಸುತ್ತಾರೆ. ಅಷ್ಟಕ್ಕೂ ಆ ವಸ್ತುಗಳು ಯಾವುದು? ತಿಳಿಯಲು ಮುಂದೆ ಓದಿ..  

2 /8

ಮನೆಯಲ್ಲಿ ಅದೃಷ್ಟ ಮತ್ತು ಸಮೃದ್ಧಿಯನ್ನು ತರಲು ವಾಸ್ತು ನಿಯಮಗಳನ್ನು ಅನುಸರಿಸಬೇಕು. ಧನಾತ್ಮಕ ಶಕ್ತಿಯನ್ನು ಹೆಚ್ಚಿಸುವ ವಸ್ತುಗಳನ್ನು ಮಾತ್ರ ಮನೆಯಲ್ಲಿ ಇಡುವುದು ಕುಟುಂಬಕ್ಕೆ ಶಾಂತಿ ಮತ್ತು ಸಂಪತ್ತನ್ನು ತರುತ್ತದೆ.  

3 /8

ವಾಸ್ತು ದೋಷಗಳು ನಮ್ಮ ಮನೆಯಲ್ಲಿನ ಅನೇಕ ಸಮಸ್ಯೆಗಳು, ಆರ್ಥಿಕ ಸಮಸ್ಯೆಗಳು ಮತ್ತು ಕೌಟುಂಬಿಕ ಕಲಹಗಳಿಗೆ ಸಹ ಕಾರಣವಾಗಬಹುದು. ವಾಸ್ತು ನಿಯಮಗಳನ್ನು ಪಾಲಿಸದೆ ಮನೆಯಲ್ಲಿ ಕೆಲವು ವಸ್ತುಗಳನ್ನು ಇಡುವುದು ನಮ್ಮ ಜೀವನದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಕೆಲವರು ತಿಳಿದೋ ತಿಳಿಯದೆಯೂ ಈ ತಪ್ಪುಗಳನ್ನು ಮಾಡುತ್ತಾರೆ. ಆದರೆ ಅದರ ಪ್ರಭಾವ ಅವರ ಮೇಲೆ ತೀವ್ರವಾಗಿ ಬೀರುತ್ತದೆ.   

4 /8

ವಿಗ್ರಹ ವಾಸ್ತು ಪ್ರಕಾರ 6 ಇಂಚು ಎತ್ತರದ ದೇವರ ವಿಗ್ರಹಗಳನ್ನು ಮನೆಯಲ್ಲಿ ಇಡಬಾರದು. ಅಂತಹ ವಿಗ್ರಹಗಳನ್ನು ಮನೆಯಲ್ಲಿಟ್ಟುಕೊಂಡರೆ, ಅದಕ್ಕೆ ಸರಿಯಾಗಿ ಪೂಜೆ ಮಾಡಬೇಕು. ನಿಯಮಾನುಸಾರ ಪೂಜೆ ಪುನಸ್ಕಾರ ಮಾಡದಿದ್ದರೆ, ಕುಟುಂಬಕ್ಕೆ ಅನಾಹುತ ತಪ್ಪಿದ್ದಲ್ಲ ಎನ್ನುತ್ತಾರೆ ವಾಸ್ತು ತಜ್ಞರು.  

5 /8

ಸಾಲಿಗ್ರಾಮ ಸಾಲಿಗ್ರಾಮ, ನೇಪಾಳದ ಗಂಡಕಿ ನದಿಯಲ್ಲಿ ಕಂಡುಬರುವ ಪವಿತ್ರ ಶಿಲೆ. ಇದನ್ನು ವಿಷ್ಣುವಿನ ಪ್ರತಿರೂಪವೆಂದು ಪರಿಗಣಿಸಲಾಗುತ್ತದೆ. ಸಾಲಿಗ್ರಾಮವನ್ನು ಮನೆಯಲ್ಲಿ ಇಡುವಾಗ ಕಠಿಣ ನಿಯಮಗಳನ್ನು ಪಾಲಿಸಬೇಕು. ಪ್ರತಿದಿನ ವಿಶೇಷ ಪೂಜೆಯನ್ನು ಮಾಡಬೇಕು. ಒಂದು ವೇಳೆ ಸಾಲಿಗ್ರಾಮವನ್ನು ಸರಿಯಾಗಿ ಪೂಜೆ ಮಾಡದೆ ಇದ್ದರೆ. ಕುಟುಂಬಕ್ಕೆ ದುರದೃಷ್ಟವನ್ನು ತರಬಹುದು. ಈ ಕಲ್ಲಿಗೆ ಸಂಬಂಧಿಸಿದ ಎಲ್ಲಾ ವಿಧಿವಿಧಾನಗಳನ್ನು ಪಾಲಿಸದಿದ್ದರೆ ಜೀವನದಲ್ಲಿ ತೀವ್ರ ಸಂಕಷ್ಟ ಎದುರಿಸಬೇಕಾಗುತ್ತದೆ.  

6 /8

ಮುಳ್ಳಿನ ಗಿಡ ಮನೆಯಲ್ಲಿ ಮುಳ್ಳಿನ ಗಿಡಗಳನ್ನು ಬೆಳೆಸುವುದರಿಂದ ಕುಟುಂಬದ ಸದಸ್ಯರಿಗೆ ಅಡೆತಡೆಗಳು ಉಂಟಾಗುತ್ತವೆ. ಜೀವನದಲ್ಲಿ ಆಗಾಗ್ಗೆ ಅಡಚಣೆಗಳು ಉಂಟಾಗುತ್ತವೆ. ಮುಳ್ಳುಗಳು ನಮ್ಮ ಜೀವನದ ಸಂಕೇತವಾಗುತ್ತವೆ ಮತ್ತು ಶಾಂತಿಯನ್ನು ಕಸಿದುಕೊಳ್ಳುತ್ತವೆ. ಮನೆಯಲ್ಲಿ ಮುಳ್ಳು ಮರಗಳಿದ್ದರೆ ಕುಟುಂಬ ಸದಸ್ಯರಿಗೆ ಆರೋಗ್ಯ ಸಮಸ್ಯೆ ಹಾಗೂ ಆರ್ಥಿಕ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.   

7 /8

ವಾಸ್ತು ಶಾಸ್ತ್ರ ಮನೆಯಲ್ಲಿ ಅದೃಷ್ಟ ಮತ್ತು ಸಮೃದ್ಧಿಯನ್ನು ತರಲು ವಾಸ್ತು ಶಾಸ್ತ್ರದ ಮಾರ್ಗಸೂಚಿಗಳನ್ನು ಅನುಸರಿಸುವುದು ಬಹಳ ಮುಖ್ಯ. ಗೊತ್ತಿಲ್ಲದೆ ಈ ವಸ್ತುಗಳನ್ನು ಮನೆಯಲ್ಲಿಟ್ಟರೆ ಹಲವು ಸಮಸ್ಯೆಗಳು ಎದುರಾಗುತ್ತವೆ. ಕೌಟುಂಬಿಕ ಕಲಹಗಳು, ಆರ್ಥಿಕ ನಷ್ಟ ಮತ್ತು ಆರೋಗ್ಯ ಸಮಸ್ಯೆಗಳನ್ನು ತಪ್ಪಿಸಲು, ವಾಸ್ತು ತಜ್ಞರ ಸೂಚನೆಗಳನ್ನು ಅನುಸರಿಸಿ ಮತ್ತು ಮನೆಯಲ್ಲಿ ಉತ್ತಮ ಧನಾತ್ಮಕ ಶಕ್ತಿಯನ್ನು ಹೆಚ್ಚಿಸುವ ವಸ್ತುಗಳನ್ನು ಮಾತ್ರ ಇಡಬೇಕು.

8 /8

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯೂ ಸಾಮಾನ್ಯ ಜ್ನಾನ ಹಾಗೂ ಮೂಲಗಳ ಮಾಹಿತಿಯನ್ನು ಆಧರಿಸಿದೆ, ZEE KANNADA NEWS ಇದನ್ನು ಖಚಿತ ಪಡಿಸುವುದಿಲ್ಲ.