Budha-Shukra-Rahu Yuti In Mesha Effect: ವೈದಿಕ ಜ್ಯೋತಿಷ್ಯದ ಪ್ರಕಾರ, ನವಗ್ರಹಗಳಲ್ಲಿ ಪ್ರತಿ ಗ್ರಹವೂ ಕೂಡ ನಿರ್ದಿಷ್ಟ ಸಮಯದಲ್ಲಿ ತಮ್ಮ ರಾಶಿಚಕ್ರವನ್ನು ಬದಲಾಯಿಸುತ್ತವೆ. ಇಂತಹ ಸಂದರ್ಭದಲ್ಲಿ ಒಂದಕ್ಕಿಂತ ಹೆಚ್ಚು ಗ್ರಹಗಳು ಒಂದೇ ರಾಶಿಯಲ್ಲಿ ಒಟ್ಟಿಗೆ ಸೇರಿದಾಗ ಶುಭ-ಅಶುಭಕರ ಯೋಗಗಳು ನಿರ್ಮಾಣಗೊಳ್ಳುತ್ತವೆ. ಈ ತಿಂಗಳಾಂತ್ಯದಲ್ಲಿ ಅಂದರೆ ಮಾರ್ಚ್ 31ರಂದು ಗ್ರಹಗಳ ರಾಜಕುಮಾರನಾದ ಬುಧನು ಮೇಷ ರಾಶಿಯಲ್ಲಿ ಸಾಗಲಿದ್ದಾನೆ. ಈಗಾಗಲೇ ರಾಹು ಮತ್ತು ಶುಕ್ರರು ಇದೇ ರಾಶಿಯಲ್ಲಿರುವುದರಿಂದ ಬುದ್ಧನ ಸಂಕ್ರಮಣದಿಂದ ಮೇಷ ರಾಶಿಯಲ್ಲಿ ತ್ರಿಗ್ರಾಹಿ ಯೋಗ ನಿರ್ಮಾಣಗೊಳ್ಳಲಿದೆ.
ಮೇಷ ರಾಶಿಯಲ್ಲಿ ರೂಪುಗೊಳ್ಳಲಿರುವ ತ್ರಿಗ್ರಾಹಿ ಯೋಗವು ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಆದರೂ, ಕೂಡ ಈ ಸಮಯದಲ್ಲಿ ಕೆಲವು ರಾಶಿಯವರು ಅಪಾರ ಸಂಪತ್ತಿನ ಒಡೆಯರಾಗುತ್ತಾರೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ...
ಮೇಷ ರಾಶಿ:
ಮೇಷ ರಾಶಿಯಲ್ಲಿಯೇ ಬುಧ, ಶುಕ್ರ ಮತ್ತು ರಾಹುಗಳ ಮೈತ್ರಿಯಿಂದ ತ್ರಿಗ್ರಾಹಿ ಯೋಗ ನಿರ್ಮಾಣಗೊಳ್ಳುತ್ತಿರುವುದರಿಂದ ಇದರ ಗರಿಷ್ಠ ಪರಿಣಾಮ ಈ ರಾಶಿಯವರ ಮೇಲೆಯೇ ಕಂಡು ಬರಲಿದೆ. ಈ ಸಮಯದಲ್ಲಿ ನಿಮ್ಮ ವ್ಯಕ್ತಿತ್ವದಲ್ಲಿ ಸಾಕಷ್ಟು ಸುಧಾರಣೆ ಕಂಡು ಬರಲಿದ್ದು, ಆರ್ಥಿಕ ಸ್ಥಿತಿ ಸುಧಾರಿಸಲಿದೆ. ನಿಮ್ಮ ಪ್ರತಿ ಕೆಲಸದಲ್ಲೂ ನಿಮ್ಮ ಸಂಗಾತಿಯ ಸಂಪೂರ್ಣ ಬೆಂಬಲ ದೊರೆತು ಪ್ರಗತಿ ಸಾಧಿಸಬಹುದು.
ಇದನ್ನೂ ಓದಿ- Ugadi 2023 Horoscope: ಈ ವರ್ಷ ಯುಗಾದಿ ಯಾರಿಗೆ ಸಿಹಿ? ಯಾರಿಗೆ ಕಹಿ? ತಿಳಿಯಿರಿ
ಕರ್ಕಾಟಕ ರಾಶಿ:
ತಿಂಗಳಾಂತ್ಯದಲ್ಲಿ ರೂಪುಗೊಳ್ಳುತ್ತಿರುವ ತ್ರಿಗ್ರಾಹಿ ಯೋಗವು ಕರ್ಕಾಟಕ ರಾಶಿಯವರ ಉದ್ಯೋಗ ರಂಗಕ್ಕೆ ಸಂಬಂಧಿಸಿದಂತೆ ಪ್ರಗತಿಯ ಹಾದಿಯನ್ನು ತೆರೆಯಲಿದೆ. ಈ ಸಮಯದಲ್ಲಿ, ನಿಮ್ಮ ವ್ಯಾಪಾರ-ವ್ಯವಹಾರಕ್ಕೆ ಸಂಬಂಧಿಸಿದ ಅಡೆತಡೆಗಳು ನಿವಾರಣೆಯಾಗಲಿದ್ದು ಬಂಪರ್ ಲಾಭ ಗಳಿಸುವಿರಿ. ಆದಾಗ್ಯೂ, ನಿಮ್ಮ ಆರೋಗ್ಯದ ಬಗ್ಗೆ ಸ್ವಲ್ಪ ಕಾಳಜಿವಹಿಸಿ.
ಇದನ್ನೂ ಓದಿ- ಮನೆಯಲ್ಲಿ ಹಣದ ಕೊರತೆಯನ್ನು ಶಾಶ್ವತವಾಗಿ ದೂರ ಮಾಡಲು ಯುಗಾದಿಯಂದು ಈ ವಸ್ತುಗಳನ್ನು ಖರೀದಿಸಿ
ಸಿಂಹ ರಾಶಿ:
ಮೇಷ ರಾಶಿಯಲ್ಲಿ ನಿರ್ಮಾಣಗೊಳ್ಳಲಿರುವ ತ್ರಿಗ್ರಾಹಿ ಯೋಗವು ಸಿಂಹ ರಾಶಿಯವರ ಭಾಗ್ಯ ಬೆಳಗಲಿದೆ. ಈ ಸಮಯದಲ್ಲಿ ನೀವು ಕೈ ಹಾಕಿದ ಕೆಲಸಗಳಲ್ಲೆಲ್ಲಾ ಯಶಸ್ಸು ನಿಮ್ಮದಾಗಲಿದೆ. ಹೊಸ ವ್ಯಾಪಾರ-ವ್ಯವಹಾರವನ್ನು ಆರಂಭಿಸಲು ಯೋಚಿಸುತ್ತಿರುವವರಿಗೆ ಉತ್ತಮ ಸಮಯ ಇದಾಗಿದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.