ಕೋಲ್ಕತ್ತಾ: ಇಲ್ಲಿನ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಟ್ರೋಪಿ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡವು ಕೇವಲ 122 ರನ್ ಗಳಿಗೆ ಸರ್ವ ಪತನ ಕಂಡಿದೆ.
ಮೊದಲು ಟಾಸ್ ಗೆದ್ದು ಕ್ಷೇತ್ರ ರಕ್ಷಣೆ ಆಯ್ದುಕೊಂಡ ಕರ್ನಾಟಕ ತಂಡವು ಬಂಗಾಳ ತಂಡವನ್ನು 312 ರನ್ ಗಳಿಗೆ ಕಟ್ಟಿ ಹಾಕಿತು, ಅನುಸ್ತಪ್ ಅವರ ಅಜೇಯ 149 ರನ್ ಗಳಿಸುವ ಮೂಲಕ ಕರ್ನಾಟಕದ ಬೌಲರ್ ಗಳಿಗೆ ತಲೆ ನೋವಾಗಿ ಪರಿಣಮಿಸಿದರು. ಒಂದು ಹಂತದಲ್ಲಿ ಕೇವಲ 139 ರನ್ ಗಳಿಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಬಂಗಾಳ ತಂಡಕ್ಕೆ ಅನುಸ್ತುಪ್ ನೆರವಾದರು.
ICYMI: 13-2-39-5! 👏👏
Watch Bengal speedster Ishan Porel's 5⃣-wicket haul against Karnataka. 👌👌
Video 👇👇https://t.co/xb7dxboMEb#BENvKAR @paytm #RanjiTrophy @CabCricket pic.twitter.com/eCEGCsLy2e
— BCCI Domestic (@BCCIdomestic) March 1, 2020
ಈ ಗುರಿಯನ್ನು ಬೆನ್ನಟ್ಟಿ ತನ್ನ ಮೊದಲ ಇನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಕರ್ನಾಟಕ ತಂಡವು ಕೇವಲ 5 ರನ್ ಗಳಾಗಿದ್ದಾಗ ರವಿಕುಮಾರ್ ಸಮರ್ಥ್,ಮತ್ತು ಕರುಣ್ ನಾಯರ್ ಅವರ ವಿಕೆಟ್ ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಕರ್ನಾಟಕದ ಪರವಾಗಿ ಕೆ.ಗೌತಮ್ 31 ರನ್ ಗಳಿಸಿದ್ದು ಬಿಟ್ಟರೆ ಉಳಿದವರ್ಯಾರು ಕೂಡ 30 ರ ಗಡಿ ದಾಟಲಿಲ್ಲ.
ಎರಡನೇ ದಿನದಾಂತ್ಯಕ್ಕೆ ಬಂಗಾಳ ತಂಡವು 262 ರನ್ ಗಳ ಮುನ್ನಡೆಯನ್ನು ಕಾಯ್ದುಕೊಂಡಿದೆ.ಇನ್ನೊಂದೆಡೆಗೆ ಎರಡನೇ ಇನಿಂಗ್ಸ್ ಆರಂಭಿಸಿದ ಬಂಗಾಳ ಈಗ ನಾಲ್ಕು ವಿಕೆಟ್ ನಷ್ಟಕ್ಕೆ 72 ರನ್ ಗಳಿಸಿದೆ. ಕರ್ನಾಟಕದ ಪರವಾಗಿ ಅಭಿಮನ್ಯು ಮಿಥುನ್ 3 ವಿಕೆಟ್ ಗಳನ್ನು ಕಬಳಿಸಿದ್ದಾರೆ.