ಮುಂಬೈ, ಚೆನ್ನೈ ಅಲ್ಲ… IPLನಲ್ಲಿ ಅತಿ ಹೆಚ್ಚು ಬಾರಿ ನಾಯಕನನ್ನು ಬದಲಾಯಿಸಿದ್ದು ಇದೇ ತಂಡ- ಬರೋಬ್ಬರಿ 15 ಬಾರಿ!

IPL 2024: ಸನ್ ರೈಸರ್ಸ್ ಹೈದರಾಬಾದ್ ತಂಡ ಮತ್ತೊಮ್ಮೆ ಹೊಸ ನಾಯಕನೊಂದಿಗೆ ಕಣಕ್ಕಿಳಿಯಲಿದೆ. ಕಳೆದ ಋತುವಿನಲ್ಲಿ ಜವಾಬ್ದಾರಿ ವಹಿಸಿಕೊಂಡಿದ್ದ ದಕ್ಷಿಣ ಆಫ್ರಿಕಾದ ಏಡೆನ್ ಮಾರ್ಕ್ರಾಮ್ ಅವರನ್ನು ತೆಗೆದುಹಾಕಿದ್ದು, ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ ಅವರಿಗೆ ಈ ಜವಾಬ್ದಾರಿಯನ್ನು ನೀಡಿದ್ದಾರೆ. ಫ್ರಾಂಚೈಸಿ ಕಮ್ಮಿನ್ಸ್ ಅವರನ್ನು 20.5 ಕೋಟಿಗೆ ಖರೀದಿಸಿತ್ತು.

Written by - Bhavishya Shetty | Last Updated : Mar 5, 2024, 05:29 PM IST
    • ಪ್ರತಿ ಋತುವಿನಲ್ಲಿ ಒಂದಲ್ಲ ಒಂದು ತಂಡದಲ್ಲಿ ನಾಯಕತ್ವ ಬದಲಾವಣೆ ಆಗುತ್ತದೆ
    • ಸನ್ ರೈಸರ್ಸ್ ಹೈದರಾಬಾದ್ ತಂಡ ಮತ್ತೊಮ್ಮೆ ಹೊಸ ನಾಯಕನೊಂದಿಗೆ ಕಣಕ್ಕಿಳಿಯಲಿದೆ
    • ಟೈಟಾನ್ಸ್‌’ನಿಂದ ಟ್ರೇಡ್ ಆಗಿದ್ದ ಹಾರ್ದಿಕ್ ಪಾಂಡ್ಯ ಅವರಿಗೆ ನಾಯಕತ್ವ ನೀಡಲಾಗಿದೆ
ಮುಂಬೈ, ಚೆನ್ನೈ ಅಲ್ಲ… IPLನಲ್ಲಿ ಅತಿ ಹೆಚ್ಚು ಬಾರಿ ನಾಯಕನನ್ನು ಬದಲಾಯಿಸಿದ್ದು ಇದೇ ತಂಡ- ಬರೋಬ್ಬರಿ 15 ಬಾರಿ! title=
IPL Team

IPL 2024: ಮಾರ್ಚ್ 22ರಿಂದ ಐಪಿಎಲ್ ಸೀಸನ್ 17 ಪ್ರಾರಂಭವಾಗುತ್ತಿದೆ. ಈ ಬಾರಿಯ ಟೂರ್ನಿಯಲ್ಲಿ ಮೂರು ತಂಡಗಳ ನಾಯಕರು ಬದಲಾಗಿದ್ದಾರೆ. ಮುಂಬೈ ಇಂಡಿಯನ್ಸ್ ಅತ್ಯಂತ ಯಶಸ್ವಿ ನಾಯಕ ರೋಹಿತ್ ಶರ್ಮಾ ಅವರನ್ನು ತೆಗೆದುಹಾಕಿ, ಅವರ ಸ್ಥಾನದಲ್ಲಿ ಗುಜರಾತ್ ಟೈಟಾನ್ಸ್‌’ನಿಂದ ಟ್ರೇಡ್ ಆಗಿದ್ದ ಹಾರ್ದಿಕ್ ಪಾಂಡ್ಯ ಅವರಿಗೆ ನಾಯಕತ್ವ ನೀಡಲಾಗಿದೆ. ಹಾರ್ದಿಕ್ ನಿರ್ಗಮನದ ನಂತರ, ಗುಜರಾತ್ ಕಮಾಂಡ್ ಅನ್ನು ಶುಭಮನ್ ಗಿಲ್‌’ಗೆ ಹಸ್ತಾಂತರಿಸಿದೆ.

ಸನ್ ರೈಸರ್ಸ್ ಹೈದರಾಬಾದ್ ತಂಡ ಮತ್ತೊಮ್ಮೆ ಹೊಸ ನಾಯಕನೊಂದಿಗೆ ಕಣಕ್ಕಿಳಿಯಲಿದೆ. ಕಳೆದ ಋತುವಿನಲ್ಲಿ ಜವಾಬ್ದಾರಿ ವಹಿಸಿಕೊಂಡಿದ್ದ ದಕ್ಷಿಣ ಆಫ್ರಿಕಾದ ಏಡೆನ್ ಮಾರ್ಕ್ರಾಮ್ ಅವರನ್ನು ತೆಗೆದುಹಾಕಿದ್ದು, ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ ಅವರಿಗೆ ಈ ಜವಾಬ್ದಾರಿಯನ್ನು ನೀಡಿದ್ದಾರೆ. ಫ್ರಾಂಚೈಸಿ ಕಮ್ಮಿನ್ಸ್ ಅವರನ್ನು 20.5 ಕೋಟಿಗೆ ಖರೀದಿಸಿತ್ತು.

ಇದನ್ನೂ ಓದಿ: CM Siddaramaiah : ಬರಪರಿಹಾರಕ್ಕೆ ಅನುದಾನದ ಕೊರತೆ ಇಲ್ಲ: ಕುಡಿಯುವ ನೀರಿಗೆ ತೊಂದರೆ ಯಾಗದಂತೆಯೂ ಕ್ರಮ :  ಮುಖ್ಯಮಂತ್ರಿ ಸಿದ್ದರಾಮಯ್ಯ

ಅಂದಹಾಗೆ ಪ್ರತಿ ಋತುವಿನಲ್ಲಿ ಒಂದಲ್ಲ ಒಂದು ತಂಡದಲ್ಲಿ ನಾಯಕತ್ವ ಬದಲಾವಣೆ ಆಗುತ್ತದೆ. ಅಂತೆಯೇ ಈ ಬಾರಿಯೂ ಸಂಭವಿಸಿದೆ. ನಾವಿಂದು ಈ ವರದಿಯಲ್ಲಿ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಯಾವ ತಂಡ ನಾಯಕರನ್ನು ಬದಲಾಯಿಸಿದೆ ಎಂಬುದನ್ನು ತಿಳಿಸಿಕೊಡಲಿದ್ದೇವೆ.

ಚೆನ್ನೈ ಸೂಪರ್ ಕಿಂಗ್ಸ್ ಇದುವರೆಗೆ ಮೂವರು ನಾಯಕರನ್ನು ಬದಲಾಯಿಸಿದೆ. ಮೊದಲ ಸೀಸನ್‌’ನಿಂದಲೂ ಮಹೇಂದ್ರ ಸಿಂಗ್ ಧೋನಿ ತಂಡದ ಕಮಾಂಡರ್ ಆಗಿದ್ದಾರೆ. ಇವರಲ್ಲದೆ ಸುರೇಶ್ ರೈನಾ ಮತ್ತು ರವೀಂದ್ರ ಜಡೇಜಾ ತಂಡದ ನಾಯಕತ್ವದ ಅವಕಾಶ ಪಡೆದಿದ್ದರು.

ಇನ್ನು ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿ ಇಲ್ಲಿಯವರೆಗೆ 2 ಬಾರಿ ನಾಯಕತ್ವ ಬದಲಾಯಿಸಲಾಗಿದೆ. ಕೆಎಲ್ ರಾಹುಲ್ ಹೊರತಾಗಿ ಕೃನಾಲ್ ಪಾಂಡ್ಯ ತಂಡದ ನಾಯಕತ್ವ ವಹಿಸಿಕೊಂಡಿದ್ದರು.

ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡಗಳ ಬಗ್ಗೆ ಮಾತನಾಡುವುದಾದರೆ ಈ ಎರಡೂ ತಂಡಗಳು ಬರೋಬ್ಬರಿ 7 ಬಾರಿ ನಾಯಕರನ್ನು ಬದಲಾಯಿಸಿವೆ. ರಾಜಸ್ಥಾನ್ ರಾಯಲ್ಸ್ ಐಪಿಎಲ್‌’ನಲ್ಲಿ ಇದುವರೆಗೆ 6 ನಾಯಕರನ್ನು ಕಣಕ್ಕಿಳಿಸಿದೆ.

ಮುಂಬೈ ಇಂಡಿಯನ್ಸ್ ತಂಡ ಒಂಬತ್ತು ಬಾರಿ ನಾಯಕತ್ವ ಬದಲಾವಣೆ ಮಾಡಿದೆ. ಕಳೆದ ಸೀಸನ್ ವರೆಗೆ ರೋಹಿತ್ ಶರ್ಮಾ ನಾಯಕನನ್ನಾಗಿದ್ದರು. ಇದೀಗ ಫ್ರಾಂಚೈಸಿಯ ಒಂಬತ್ತನೇ ನಾಯಕನಾಗಿ ಹಾರ್ದಿಕ್ ಪಾಂಡ್ಯ ಆಡಲಿದ್ದಾರೆ. .

ಡೆಲ್ಲಿ ಕ್ಯಾಪಿಟಲ್ಸ್ ತಂಡ ಹಲವು ಆಟಗಾರರಿಗೆ ನಾಯಕತ್ವದ ಅವಕಾಶವನ್ನೂ ನೀಡಿದೆ. 13 ಬಾರಿ ನಾಯಕತ್ವ ಬದಲಾವಣೆ ಮಾಡಿದೆ. ಇನ್ನೊಂದೆಡೆ ಪ್ಯಾಟ್ ಕಮಿನ್ಸ್ ಸನ್ ರೈಸರ್ಸ್ ಹೈದರಾಬಾದ್ ತಂಡದ 10ನೇ ನಾಯಕರಾಗಿ ಇನ್ಮುಂದೆ ಆಡಲಿದ್ದಾರೆ.

ಇದನ್ನೂ ಓದಿ:  ತಮಿಳುನಾಡು ಸರ್ಕಾರಕ್ಕೆ ಜಯಲಲಿತಾ ಒಡವೆ ಹಸ್ತಾಂತರ ವಿಚಾರ: ಪ್ರಕ್ರಿಯೆಗೆ ತಡೆ ನೀಡಿದ ಹೈಕೋರ್ಟ್

ಐಪಿಎಲ್ ಇತಿಹಾಸದಲ್ಲಿ ಗರಿಷ್ಠ ನಾಯಕರ ಬದಲಾವಣೆಯ ದಾಖಲೆ ಬಾಲಿವುಡ್ ನಟಿ ಪ್ರೀತಿ ಜಿಂಟಾ ಅವರ ತಂಡ ಪಂಜಾಬ್ ಕಿಂಗ್ಸ್ ಹೆಸರಿನಲ್ಲಿದೆ. ಪಂಜಾಬ್ ಇದುವರೆಗೆ 15 ಆಟಗಾರರಿಗೆ ನಾಯಕತ್ವ ನೀಡಿದ್ದು, ಈ ತಂಡದ ಹೆಸರು ಮೊದಲು ಕಿಂಗ್ಸ್ XI ಪಂಜಾಬ್ ಆಗಿತ್ತು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ 

Trending News