T20 World Cup 2021: ಮೊದಲ ಎರಡು ಪಂದ್ಯಗಳಲ್ಲಿ ಭಾರತ ಕಳಪೆಯಾಗಿ ಆಡಲು ಕಾರಣವೇನು?

ಭಾರತ ತಂಡವು ಮೊದಲೆರಡು ಪಂದ್ಯಗಳಲ್ಲಿ ಸೋಲಲು ಪ್ರಮುಖ ಕಾರಣ ಟಾಸ್ ಎಂದು ಭಾರತ ತಂಡದ ಬೌಲಿಂಗ್ ಕೋಚ್ ಭರತ್ ಅರುಣ್ ಅಭಿಪ್ರಾಯಪಟ್ಟಿದ್ದಾರೆ.ದುಬೈ ನಂತಹ ಪ್ರದೇಶಗಳಲ್ಲಿ ಮೊದಲ ಟಾಸ್ ಗೆದ್ದಿರುವ ತಂಡಕ್ಕೆ ಹೆಚ್ಚಿನ ಆನುಕೂಲವಾಗುತ್ತದೆ ಎಂದು ಅವರು ಹೇಳಿದ್ದಾರೆ.

Written by - Zee Kannada News Desk | Last Updated : Nov 7, 2021, 04:43 PM IST
  • ಭಾರತ ತಂಡವು ಮೊದಲೆರಡು ಪಂದ್ಯಗಳಲ್ಲಿ ಸೋಲಲು ಪ್ರಮುಖ ಕಾರಣ ಟಾಸ್ ಎಂದು ಭಾರತ ತಂಡದ ಬೌಲಿಂಗ್ ಕೋಚ್ ಭರತ್ ಅರುಣ್ ಅಭಿಪ್ರಾಯಪಟ್ಟಿದ್ದಾರೆ.
  • ದುಬೈ ನಂತಹ ಪ್ರದೇಶಗಳಲ್ಲಿ ಮೊದಲ ಟಾಸ್ ಗೆದ್ದಿರುವ ತಂಡಕ್ಕೆ ಹೆಚ್ಚಿನ ಆನುಕೂಲವಾಗುತ್ತದೆ ಎಂದು ಅವರು ಹೇಳಿದ್ದಾರೆ.
 T20 World Cup 2021: ಮೊದಲ ಎರಡು ಪಂದ್ಯಗಳಲ್ಲಿ ಭಾರತ ಕಳಪೆಯಾಗಿ ಆಡಲು ಕಾರಣವೇನು? title=
file photo

ನವದೆಹಲಿ: ಭಾರತ ತಂಡವು ಮೊದಲೆರಡು ಪಂದ್ಯಗಳಲ್ಲಿ ಸೋಲಲು ಪ್ರಮುಖ ಕಾರಣ ಟಾಸ್ ಎಂದು ಭಾರತ ತಂಡದ ಬೌಲಿಂಗ್ ಕೋಚ್ ಭರತ್ ಅರುಣ್ ಅಭಿಪ್ರಾಯಪಟ್ಟಿದ್ದಾರೆ.ದುಬೈ ನಂತಹ ಪ್ರದೇಶಗಳಲ್ಲಿ ಮೊದಲ ಟಾಸ್ ಗೆದ್ದಿರುವ ತಂಡಕ್ಕೆ ಹೆಚ್ಚಿನ ಆನುಕೂಲವಾಗುತ್ತದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: T20 World Cup 2021: ಅಫ್ಘಾನಿಸ್ತಾನ್ ಮೇಲಿದೆ ಟೀಂ ಇಂಡಿಯಾದ ವಿಶ್ವಕಪ್ ಭವಿಷ್ಯ..!

ಭಾರತ ಮತ್ತು ನಮೀಬಿಯಾ ಪಂದ್ಯದ ಮುನ್ನಾ ಪಂದ್ಯದ ಪೂರ್ವಭಾವಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಭರತ್,'ನಾನು ಯಾವುದೇ ಕ್ಷಣಿಕ ಕಾರಣ ನೀಡಲು ಪ್ರಯತ್ನಿಸುತ್ತಿಲ್ಲ, ಆದರೆ ಈ ವಿಶ್ವಕಪ್‌ನಲ್ಲಿ ಟಾಸ್ ಗೆದ್ದ ತಂಡವು ಹೆಚ್ಚಿನ ಪ್ರಯೋಜನವನ್ನು ಹೊಂದಿದೆ ಎಂದು ನಾನು ಭಾವಿಸುತ್ತೇನೆ.ನಾವು ಉತ್ತಮವಾಗಿ ಬ್ಯಾಟಿಂಗ್ ಮಾಡಬೇಕಾಗಿತ್ತು. ಮೊದಲ ಪಂದ್ಯದಲ್ಲಿ, ನಮಗೆ ಅವಕಾಶವಿತ್ತು,ಆದರೆ ನಾವು ಗಳಿಸಿದ ಮೊತ್ತ ಸ್ವಲ್ಪ ಕಡಿಮೆಯಾಯಿತು ಎಂದು ಅವರು ಹೇಳಿದರು.

ಇದನ್ನೂ ಓದಿ: ರಿವರ್ಸ್ ಚಾರ್ಜಿಂಗ್ ಸೌಲಭ್ಯದೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಆ್ಯಪಲ್ ಐಫೋನ್ 13..!

ಟಿ20ಯಂತಹ ಮಾದರಿಯಲ್ಲಿ ಟಾಸ್ ಈ ದೊಡ್ಡ ಪಾತ್ರವನ್ನು ವಹಿಸಬಾರದು ಎಂದು ಅವರು ಹೇಳಿದರು.ಟಾಸ್ ಯಾವುದೇ ಪರಿಣಾಮ ಬೀರಬಾರದು.ಆದರೆ ಇಲ್ಲಿ, ಟಾಸ್ ತುಂಬಾ ಅನಪೇಕ್ಷಿತ ಪ್ರಯೋಜನವನ್ನು ನೀಡುತ್ತದೆ. ಮತ್ತು ಮೊದಲ ಇನ್ನಿಂಗ್ಸ್ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುವಾಗ ಭಾರಿ ಬದಲಾವಣೆಗೆ ಕಾರಣವಾಗಿದೆ. ಅದು ಇಂತ ಸೀಮಿತ ಮಾದರಿಯ ಕ್ರಿಕೆಟ್ ನಲ್ಲಿ ಆಗಬಾರದು ಎಂದು ಅವರು ಹೇಳಿದರು.

ಕಳೆದ ಆರು ತಿಂಗಳಲ್ಲಿ ಭಾರತ ತಂಡ ಸ್ಥಿರವಾಗಿ ಆಡುತ್ತಿದೆ, ಅದು ಕಡಿಮೆ ಸಾಧನೆಯಲ್ಲ ಎಂದು ಭರತ್ ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News