ಮಾಜಿ ಸಚಿವ ರಮೇಶ್ ಜಾರಕಿಹೋಳಿ ದೆಹಲಿಗೆ ಭೇಟಿ ನೀಡಿದ್ದು ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಭೇಟಿ ಮಾಡಲಿದ್ದಾರೆ. ಸಿಡಿ ಪ್ರಕರಣ ಸಿಬಿಐಗೆ ನೀಡುವಂತೆ ಒತ್ತಾಯ ಮಾಡಲಿದ್ದಾರೆ..
ಚುನಾವಣೆ ಹೊಸ್ತಿಲಲ್ಲಿ ಜಾರಕಿಹೊಳಿ ಸಿಡಿ ಷಡ್ಯಂತ್ರದ ಗಲಾಟೆ ಈಗ ದೆಹಲಿ ಅಂಗಳಕ್ಕೆ ಶಿಫ್ಟ್ ಆಗಿದೆ. ಸಿಡಿ ಫ್ಯಾಕ್ಟರಿ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಪಟ್ಟು ಹಿಡಿದಿರುವ ರಮೇಶ್ ಜಾರಕಿಹೊಳಿ, ವಿಡಿಯೋ, ಆಡಿಯೋ ಇರುವ ದಾಖಲೆ ಸಮೇತ ದೆಹಲಿಗೆ ಹಾರಿದ್ದಾರೆ. ಶತಾಯಗತಾಯ ಡಿಕೆಶಿಯನ್ನ ಜೈಲಿಗೆ ಕಳಿಸುತ್ತೇನೆ ಅಂತಿರುವ ಸಾಹುಕಾರ್, ಶಾ ಭೇಟಿಯಾಗಿ ಚರ್ಚೆ ನಡೆಸಲಿದ್ದಾರೆ. ಈ ಕುರಿತು ಒಂದು ಕಂಪ್ಲೀಟ್ ಸ್ಟೋರಿ ಇಲ್ಲಿದೆ ನೋಡಿ.
ಮೂರು ವಿಶ್ವವಿದ್ಯಾಲಯ ಹೊಂದಿರುವ ಧಾರವಾಡದಲ್ಲಿ ಮತ್ತೊಂದು ವಿವಿ ನಿರ್ಮಾಣಕ್ಕೆ ನಿನ್ನೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಶಂಕು ಸ್ಥಾಪನೆ ನೆರವೇರಿಸಿದರು. ರಾಜ್ಯದ ಟಾಪ್ ಮೋಸ್ಟ್ ವಿವಿ ಹೊಂದಿರುವ ವಿದ್ಯಾಕಾಶಿ ಧಾರವಾಡಕ್ಕೆ ಈಗ ಇನ್ನೊಂದು ಗರಿ ಮೂಡಿದೆ. ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯ ಕ್ಯಾಂಪಸ್ ನಿರ್ಮಾಣಕ್ಕೆ ಭೂಮಿಪೂಜೆ ಮಾಡಲಾಯಿತು.
2023ರ ಚುನಾವಣೆಗೆ ಬೆಳಗಾವಿ ಜಿಲ್ಲೆ ಸಜ್ಜಾಗಿದೆ. ಬೆಳಗಾವಿಯ 18 ಮತ ಕ್ಷೇತ್ರದಲ್ಲಿ ಗೆಲುವು ಸಾಧಿಸಲು ಹೊರಟಿರುವ ಬಿಜೆಪಿ, ಚುನಾವಣೆ ಘೋಷಣೆ ಮುಂಚೆಯೆ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ಆರಂಭಿಸಿದೆ. ನಿನ್ನೆ ಕಿತ್ತೂರ ಮತ ಕ್ಷೇತ್ರದ MK ಹುಬ್ಬಳ್ಳಿ ಪಟ್ಟಣದಲ್ಲಿ ಜನ ಸಂಕಲ್ಪ ಸಮಾವೇಶದಲ್ಲಿ ಅಮಿತ ಶಾ ಭರ್ಜರಿ ಪ್ರಚಾರ ನಡೆಸಿದ್ರು. ಅಲ್ಲದೇ ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು
2023ರ ಚುನಾವಣೆಗೆ ಬೆಳಗಾವಿ ಜಿಲ್ಲೆ ಸಜ್ಜಾಗಿದೆ. ಬೆಳಗಾವಿಯ 18 ಮತ ಕ್ಷೇತ್ರದಲ್ಲಿ ಗೆಲುವು ಸಾಧಿಸಲು ಹೊರಟಿರುವ ಬಿಜೆಪಿ, ಚುನಾವಣೆ ಘೋಷಣೆ ಮುಂಚೆಯೆ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ಆರಂಭಿಸಿದೆ. ನಿನ್ನೆ ಕಿತ್ತೂರ ಮತ ಕ್ಷೇತ್ರದ MK ಹುಬ್ಬಳ್ಳಿ ಪಟ್ಟಣದಲ್ಲಿ ಜನ ಸಂಕಲ್ಪ ಸಮಾವೇಶದಲ್ಲಿ ಅಮಿತ ಶಾ ಭರ್ಜರಿ ಪ್ರಚಾರ ನಡೆಸಿದ್ರು. ಅಲ್ಲದೇ ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು
ಬಿ.ಎಸ್.ಯಡಿಯೂರಪ್ಪ ಹೇಳಿದ ಪ್ರತಿ ಶಬ್ದವೇ ನಮ್ಮ ಮಾತು ಎಂದು ಬೆಳಗಾವಿಯಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ರು. ಅಮಿತ್ ಶಾ ಅವರು 15 ಕ್ಷೇತ್ರ ಗೆಲ್ಲಲು ಸಲಹೆ ಕೊಟ್ಟಿದ್ದಾರೆ. ಅಮಿತ್ ಶಾ ಸಲಹೆಯಂತೆ ನಾವು ಕೆಲಸ ಮಾಡ್ತೇವೆ ಎಂದ್ರು.
ಹುಬ್ಬಳ್ಳಿಗೆ ಬಂದಿಳಿದ ಕೇಂದ್ರ ಗೃಹ ಸಚಿವ ಅಮಿತ್ ಶಾ. ತಡರಾತ್ರಿ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಶಾ ಆಗಮನ. ದೆಹಲಿಯಿಂದ ವಿಶೇಷ ವಿಮಾನದಲ್ಲಿ ಶಾ ಆಗಮನ. ಅಮಿತ್ ಶಾಗೆ ಸ್ವಾಗತ ಕೋರಿದ ರಾಜ್ಯ ನಾಯಕರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಜನವರಿ 27ರಂದು ರಾತ್ರಿ ಹುಬ್ಬಳ್ಳಿಗೆ ಆಗಮಿಸಲಿದ್ದಾರೆ. 28ರಂದು ಬೆಳಿಗ್ಗೆ 10.30ಕ್ಕೆ ಕೆಎಲ್ಇ ಸಂಸ್ಥೆಯ ಬಿವ್ಹಿಬಿ ಇಂಜಿನಿಯರಿಂಗ್ ಕಾಲೇಜಿನ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅಲ್ಲಿಂದ ಧಾರವಾಡಕ್ಕೆ ತೆರಳಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಭೂಮಿ ಪೂಜೆ ನೆರವೇರಿಸಲಿದ್ದಾರೆ.
ರಾಜ್ಯದಲ್ಲಿ ಚುನಾವಣೆ ಕಾವು ದಿನದಿಂದ ದಿನಕ್ಕೆ ಜಾಸ್ತಿಯಾಗ್ತಿದೆ.ಒಂದೆಡೆ ರಾಜ್ಯ ನಾಯಕರು ವಾಗ್ಯುದ್ಧಲ್ಲಿ ತೊಡಗಿದ್ರೆ, ಇತ್ತ ದೆಹಲಿ ನಾಯಕರೂ ಕೂಡಾ ಚುನಾವಣೆ ಕಹಳೆ ಉದಿದ್ದಾರೆ.ಇದೇ ತಿಂಗಳು ರಾಜ್ಯಕ್ಕೆ ಮೋದಿ ಎರಡು ಸಾರಿ ಬಂದು ಹೋಗಿದ್ದಾರೆ. ಅದರಲ್ಲೂ ಹುಬ್ಬಳ್ಳಿಯಲ್ಲಿ ಬೃಹತ್ ಶೋ ಮಾಡಿದ್ದ ಮೋದಿ ಚುನಾಚಣೆ ಕಹಳೆ ಮೊಳಗಿಸಿದ್ರು, ಇದೀಗ ಮೋದಿ ಬೆನ್ನಲ್ಲೆ ಬಿಜೆಪಿ ಚುನಾವಣಾ ಚಾಣಕ್ಯ ಹುಬ್ಬಳ್ಳಿ ಎಂಟ್ರಿ ಆಗ್ತೀದಾರೆ. ಅಮಿತ್ ಶಾ ಕೂಡಾ ಭರ್ಜರಿ ರೋಡ್ ಶೋ ಮಾಡಲಿದ್ದಾರೆ. ಒಂದೇ ತಿಂಗಳಲ್ಲಿ ಬಿಜೆಪಿಯ ಇಬ್ಬರು ಮಾಸ್ ಲೀಡರ್ ಗಳು ಹುಬ್ಬಳ್ಳಿಗೆ ಬರುತ್ತಿರೋದು ಬಿಜೆಪಿಯಲ್ಲಿ ರಣೋತ್ಸಾಹ ಹೆಚ್ಚಿಸಿದೆ...
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಜನವರಿ 27ರಂದು ರಾತ್ರಿ ಹುಬ್ಬಳ್ಳಿಗೆ ಆಗಮಿಸಲಿದ್ದಾರೆ. 28ರಂದು ಬೆಳಿಗ್ಗೆ 10.30ಕ್ಕೆ ಕೆಎಲ್ಇ ಸಂಸ್ಥೆಯ ಬಿವ್ಹಿಬಿ ಇಂಜಿನಿಯರಿಂಗ್ ಕಾಲೇಜಿನ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅಲ್ಲಿಂದ ಧಾರವಾಡಕ್ಕೆ ತೆರಳಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಭೂಮಿ ಪೂಜೆ ನೆರವೇರಿಸಲಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಜ.27, 28ರಂದು ಹುಬ್ಬಳ್ಳಿ ಹಾಗೂ ಬೆಳಗಾವಿಗೆ ಭೇಟಿ ನೀಡಲಿದ್ದಾರೆ.. ಧಾರವಾಡ ಜಿಲ್ಲೆ ಕುಂದಗೋಳ ಪಟ್ಟಣದಲ್ಲಿ ಕಾರ್ಯಕ್ರಮದಲ್ಲೂ ಅಮಿತ್ ಶಾ ಭಾಗಿಯಾಗಲಿದ್ದಾರೆ.
ವಿದ್ಯಾಕಾಶಿ ಧಾರವಾಡದಲ್ಲಿ ಮೂರು ವಿಶ್ವವಿದ್ಯಾಲಯಗಳಿವೆ. ಕವಿವಿ, ಕೃವಿವಿ ಕಾನೂನು ವಿವಿ ಇದರ ಜೊತೆಗೆ ಇದೀಗ ಮತ್ತೊಂದು ವಿವಿ ತಯಾರಿಗೆ ಸಿದ್ಧತೆಗಳು ನಡೆಯುತ್ತಿವೆ. ವಿದ್ಯಾಕಾಶಿ ಎಂದೇ ಹೆಸರು ಪಡೆದ ಧಾರವಾಡಕ್ಕೀಗ ಮತ್ತೊಂದು ವಿಶ್ವವಿದ್ಯಾಲಯ ಧಾರವಾಡಕ್ಕೆ ಬರಲು ಭರ್ಜರಿ ಸಿದ್ಧತೆ ನಡೆದಿದ್ದು ಆದಷ್ಟು ಬೇಗೆ ಭೂಮಿ ಪೂಜೆ ನೆರವೇರಲಿದೆ.
ಕೋಲಾರದಲ್ಲಿ ಯಾರೇ ಬಂದರೂ ಏನೇ ಮಾಡಿದ್ರೂ ನಾನೇ ಗೆಲ್ಲೋದು. ಬದಾಮಿಯಲ್ಲೂ ನನ್ನನ್ನು ಸೋಲಿಸಲು ಅಮಿತ್ ಶಾ ಬಂದಿದ್ದರು. ಅಶೋಕ್ ಪಟ್ಟಣಶೆಟ್ಟಿ ಬದಲು ಶ್ರೀ ರಾಮುಲು ನಿಲ್ಲಿಸಿದರು. ಆದರೂ ನನ್ನನ್ನು ಸೋಲಿಸಲು ಸಾಧ್ಯವಾಗಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ರು.
2024ರ ಜೂನ್ವರೆಗೂ ಜೆ.ಪಿ.ನಡ್ಡಾ ಅವರೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಘೋಷಿಸಿದ್ದಾರೆ. 2024ರಲ್ಲಿ ಲೋಕಸಭಾ ಚುನಾವಣೆ ನಡೆಯಲಿದ್ದು, ಅಲ್ಲಿವರೆಗೂ ನಡ್ಡಾ ಅವರನ್ನೇ ಮುಂದುವರಿಯಲಿದ್ದಾರೆ ಎಂದಿದ್ದಾರೆ.
ಸ್ಯಾಂಟ್ರೋ ರವಿ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯ ಕೇಳಿ ಬಂದಿದೆ. ಸ್ಯಾಂಟ್ರೋ ರವಿ ವಿರುದ್ಧ ಮೈಸೂರು ಒಡನಾಡಿ ಸಂಸ್ಥೆ ED, ITಗೆ ದೂರು ನೀಡಿದೆ. ಕೇಂದ್ರ ಗೃಹ ಸಚಿವ ʻಅಮಿತ್ ಶಾʼಗೂ ದೂರು ನೀಡಲಾಗಿದೆ. ಅನೈತಿಕ ಚಟುವಟಿಗಳಿಕೆಗಾಗಿ ಹೆಣ್ಣು ಮಕ್ಕಳ ಬಳಕೆ ಆರೋಪ ಹಿನ್ನೆಲೆಯಲ್ಲಿ ದೂರು ನೀಡಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.