ಯಾವ ರೈತರು ಸಹ ಕೃಷಿಭೂಮಿಯನ್ನು ಪಾಳು ಬಿಡುವ ಪ್ರಶ್ನೆಯೇ ಇಲ್ಲ. ಒಂದು ವೇಳೆ ಕೆಲವರು ತಾವೇ ನೇರವಾಗಿ ಕೃಷಿ ಮಾಡದಿದ್ದರೂ ಬೇರೆಯವರಿಗೆ ಕೃಷಿ ಮಾಡಲು ಕೊಟ್ಟಿರುತ್ತಾರೆ- ಕೃಷಿ ಸಚಿವ ಬಿ.ಸಿ. ಪಾಟೀಲ್
ರೈತರಿಗೆ ಉತ್ತಮ ಗುಣಮಟ್ಟದ ಬಿತ್ತನೆಬೀಜ, ಗೊಬ್ಬರಗಳು, ಕೀಟನಾಶಕಗಳು ಇನ್ನಿತರ ಪರಿಕರಗಳನ್ನು ಪೂರೈಸಲು ರಾಜ್ಯ ಸರ್ಕಾರ ಶ್ರಮಿಸುತ್ತಿದೆ. ಎಲ್ಲಿಯಾದರೂ ಇವುಗಳ ಕಳಪೆ ಮಾರಾಟ ಕಂಡು ಬಂದು ರೈತರಿಗೆ ತೊಂದರೆಯಾದರೆ ಆಯಾ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರು, ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುವುದು. ಅವರ ಮೇಲೆ ಕಠಿಣ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಕೃಷಿ ವಿಚಕ್ಷಣ ಸಮಿತಿ ಈ ಬಗ್ಗೆ ನಿಗಾ ವಹಿಸಿ ಪ್ರಕರಣ ದಾಖಲು ಮಾಡಿಕೊಳ್ಳುತ್ತಿದೆ. ಇದಕ್ಕೆ ಆಯಾ ಭಾಗದ ಕೃಷಿ ಜಂಟಿ ನಿರ್ದೇಶಕರು ಮತ್ತು ಉಪ ನಿರ್ದೇಶಕರನ್ನು ಹೊಣೆ ಮಾಡಲಾಗುವುದು. ಈತನಕ 375 ಕಡೆ ಸಮಿತಿ ದಾಳಿ ನಡೆಸಿದ್ದು, 170 ಪ್ರಕರಣಗಳನ್ನು ದಾಖಲು ಮಾಡಲಾಗಿದೆ.
ರಾಜ್ಯದ್ಯಂತ ಕಾಳಸಂತೆ ಮೇಲೆ ಕಣ್ಣಿಡಲು ಜಾಗ್ರತ ದಳವನ್ನು ಸಜ್ಜುಗೊಳಿಸಲಾಗಿದೆ. ಅವರು ಮುಲಾಜಿಲ್ಲದೆ ಕ್ರಮ ಜರುಗಿಸುತ್ತಾರೆ. ಹಣ್ಣು - ತರಕಾರಿ ಇನ್ನಿತರ ಬೆಳೆಗಳಿಗೆ ಸಿಂಪಡಿಸುವ ಅಗತ್ಯ ಔಷಧ - ಕೀಟನಾಶಕಗಳಲ್ಲಿ ಕಳಪೆದರ್ಜೆಯವುಗಳ ಬಗ್ಗೆ ದೂರುಗಳು ಬಂದಿವೆ - ಕೃಷಿ ಸಚಿವ ಬಿ.ಸಿ. ಪಾಟೀಲ್
ಕೃಷಿ ಯಂತ್ರೋಕರಣ ದುರಸ್ತಿ ಮಾಡುವ ಮೆಕ್ಯಾನಿಕ್ಗಳ ಓಡಾಟಕ್ಕೆ, ಅಂಗಡಿ ತೆರೆಯುವುದಕ್ಕೆ ನಿರ್ಬಂಧವಿದೆ ಎಂಬ ದೂರುಗಳು ಬಂದಿವೆ. ಅವುಗಳನ್ನು ಸರಿಪಡಿಸಲಾಗುವುದು. ನಗರಗಳಲ್ಲಿ ನೆಲೆಸಿ ಹಳ್ಳಿಗಳಲ್ಲಿರುವ ತಮ್ಮತಮ್ಮ ಹೊಲಗಳಿಗೆ ಹೋಗುವ ರೈತರಿಗೆ ಸಂಚಾರಕ್ಕೆ ನಿರ್ಬಂಧ ವಿಧಿಸದಂತೆ ನೋಡಿಕೊಳ್ಳಲಾಗುವುದು. ಅದಕ್ಕಾಗಿಯೇ ಗ್ರೀನ್ ಪಾಸ್ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ವಿವರಿಸಿದರು.
ಬೆಳೆ ನಷ್ಟದಿಂದ ಯಾವುದೇ ರೈತರು ಆತಂಕಕ್ಕೊಳಗಾಗುವುದು ಬೇಡ. ಪ್ರಕೃತಿ ವಿಕೋಪಗಳಾದಾಗ ಧೈರ್ಯದಿಂದ ಇರಬೇಕು. ಸರ್ಕಾರ ರೈತರ ಜೊತೆ ಇದೆ ಎಂದು ರೈತರಿಗೆ ಧೈರ್ಯ ತುಂಬಿದ ಸಚಿವ ಬಿ.ಸಿ. ಪಾಟೀಲ್
By accepting cookies, you agree to the storing of cookies on your device to enhance site navigation, analyze site usage, and assist in our marketing efforts.