Wrestlers Protest: ಎಫ್ಐಆರ್ ಪ್ರಕಾರ, 'ನಾನು ಎತ್ತರದ ಕುಸ್ತಿಪಟುಗಳಲ್ಲಿ ಒಬ್ಬಳಾಗಿದ್ದೆ. ಹೀಗಾಗಿ ನಾನು ಕೊನೆಯ ಸಾಲಿನಲ್ಲಿ ನಿಲ್ಲಬೇಕಾಯಿತು. ನಾನು ಕೊನೆಯ ಸಾಲಿನಲ್ಲಿ ನಿಂತಿದ್ದೆ ಮತ್ತು ಇತರ ಕುಸ್ತಿಪಟುಗಳು ತಮ್ಮ ಸ್ಥಾನಗಳನ್ನು ತೆಗೆದುಕೊಳ್ಳಲು ಕಾಯುತ್ತಿದ್ದರು. ಅಷ್ಟರಲ್ಲಿಯೇ ಆರೋಪಿ ನನ್ನ ಪಕ್ಕಕ್ಕೆ ಬಂದು ನಿಂತ ಮತ್ತು ಇದ್ದಕ್ಕಿದ್ದಂತೆ ನನ್ನ ಸೊಂಟದ ಕೆಳಗೆ ಒಂದು ಕೈ ಬಂದ ಅನುಭವ ನನಗಾಯಿತು ಮತ್ತು ನಾನು ಬೆಚ್ಚಿಬಿದ್ದೆ' ಎನ್ನಲಾಗಿದೆ.
Wrestlers Protest: ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ದೆಹಲಿಯ ಜಂತರ್ ಮಂತರ್ ಬಳಿ ಧರಣಿ ನಡೆಸಿದ ದೇಶದ ಖ್ಯಾತ ಕುಸ್ತಿಪಟುಗಳು ಇಂದು ಹರಿದ್ವಾರಕ್ಕೆ ತೆರಳಿ ಗಂಗಾ ನದಿಯಲ್ಲಿ ಪದಕಗಳನ್ನು ಅರ್ಪಿಸಲು ನಿರ್ಧರಿಸಿದ್ದರು. ಕುಸ್ತಿಪಟುಗಳ ಈ ಘೋಷಣೆಯ ನಂತರ, ಕ್ರೀಡಾ ಸಚಿವಾಲಯವು ಹೇಳಿಕೆಯನ್ನು ಬಿಡುಗಡೆ ಮಾಡಿ, ಕುಸ್ತಿಪಟುಗಳನ್ನು ಹಾಗೆ ಮಾಡಬಾರದು ಎಂದು ಕೋರಿತ್ತು. ಪ್ರಸ್ತುತ ನರೇಶ್ ಟಿಕಾಯಿತ್ ಅವರು ಕುಸ್ತಿಪಟುಗಳಿಂದ 5 ದಿನಗಳ ಕಾಲಾವಕಾಶವನ್ನು ಕೋರಿದ್ದಾರೆ ಮತ್ತು ಅವರ ಪದಕಗಳನ್ನು ಅವರಿಂದ ವಾಪಸ್ ಪಡೆದಿದ್ದಾರೆ
Wrestlers Protest: ಇಂಡಿಯನ್ ಎಕ್ಸ್ಪ್ರೆಸ್ ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ, ವಾರ್ಮ್ ಅಪ್, ಟೂರ್ನಿಯ ವೇಳೆ ಹಾಗೂ WFI ಕಚೇರಿಯಲ್ಲಿ ಲೈಂಗಿಕ ಕಿರುಕುಳ ಎದುರಿಸಬೇಕಾದ ಹಲವು ಸಂದರ್ಭಗಳು ಎದುರಾಗಿವೆ ಎಂದು ಮಹಿಳಾ ಕುಸ್ತಿಪಟುಗಳು ತಮ್ಮ ದೂರಿನಲ್ಲಿ ಹೇಳಿಕೊಂಡಿದ್ದಾರೆ. ಪೊಲೀಸರ ಬಳಿ ದಾಖಲಾಗಿರುವ ದೂರಿನಲ್ಲಿ 7 ಜನರಲ್ಲಿ ಇಬ್ಬರು ಮಹಿಳಾ ಕುಸ್ತಿಪಟುಗಳು ಹಲವು ಬಾರಿ ಲೈಂಗಿಕ ಕಿರುಕುಳಕ್ಕೆ ಒಳಗಾಗಿರುವ ಕುರಿತು ತಮ್ಮ ಅಳಲು ತೋಡಿಕೊಂಡಿದ್ದಾರೆ.
Wrestling Federation Elections: ಕುಸ್ತಿ ಸಂಘದ ಚುನಾವಣೆ ಮೇಲೆ ಕ್ರೀಡಾ ಸಚಿವಾಲಯ ನಿಷೇಧ ವಿಧಿಸಿದೆ. ಕುಸ್ತಿ ಮಹಾಸಂಘದ ಅಧ್ಯಕ್ಷರ ವಿರುದ್ಧ ಕುಸ್ತಿ ಪಟುಗಳು ನಡೆಸುತ್ತಿರುವ ಧರಣೀಯ ಹಿನ್ನೆಲೆ ಸಚಿವಾಲಯದ ಈ ನಿಷೇಧ ಇದೀಗ ಭಾರಿ ಕುತೂಹಲಕ್ಕೆ ಕಾರಣವಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.