ಮೊನ್ನೆ ಮೊನ್ನೆಯಷ್ಟೇ, ಬುಧವಾರ (ಜುಲೈ 10) ತಮ್ಮ 73ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ರಾಜನಾಥ್ ಸಿಂಗ್ (Rajnath Singh), ಮೋದಿ ಕ್ಯಾಬಿನೆಟ್ ನಲ್ಲಿ 2014ರಿಂದಲೂ ಕೇಂದ್ರ ಸಚಿವರಾಗಿದ್ದಾರೆ.
India-Russia AK-203 deal: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ರಷ್ಯಾದ ರಕ್ಷಣಾ ಸಚಿವ ಸರ್ಗೆ ಶೋಯಿಗು ನಡುವಿನ ದ್ವಿಪಕ್ಷೀಯ ಸಭೆಯಲ್ಲಿ, ಉತ್ತರ ಪ್ರದೇಶದ ಅಮೇಥಿ ಜಿಲ್ಲೆಯಲ್ಲಿ 5,00,000 ಕ್ಕೂ ಹೆಚ್ಚು AK-203 ಅಸಾಲ್ಟ್ ರೈಫಲ್ಗಳ ಜಂಟಿ ಉತ್ಪಾದನೆಗೆ ಬಹು ನಿರೀಕ್ಷಿತ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತವು ಯುದ್ಧವನ್ನು ಬಯಸುವುದಿಲ್ಲ ಆದರೆ ಯಾವುದೇ 'ಸೂಪರ್ ಪವರ್' ದೇಶದ ಗೌರವಕ್ಕೆ ಧಕ್ಕೆ ತಂದರೆ ಸೈನಿಕರು ಸೂಕ್ತ ಉತ್ತರ ನೀಡುವ ಸಾಮರ್ಥ್ಯ ಹೊಂದಿದ್ದಾರೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುರುವಾರ ಚೀನಾದೊಂದಿಗಿನ ಎಂಟು ತಿಂಗಳ ಗಡಿ ವಿವಾದದ ಮಧ್ಯೆ ಹೇಳಿದ್ದಾರೆ.
ಕೃಷಿ ಮಸೂದೆಗಳ ಚರ್ಚೆಯ ಸಂದರ್ಭದಲ್ಲಿ ರಾಜ್ಯಸಭೆಯಲ್ಲಿ ನಡೆದ ಘಟನೆ ಇಡೀ ರಾಷ್ಟ್ರದ ಮುಂದೆ ಸಂಸತ್ತಿನ ಚಿತ್ರಣವನ್ನು ಕಳಂಕಿತಗೊಳಿಸಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾನುವಾರ ಹೇಳಿದ್ದಾರೆ.ಅವರು ನಡವಳಿಕೆಯನ್ನು ದುಃಖಕರ, ದುರದೃಷ್ಟಕರ ಮತ್ತು ನಾಚಿಕೆಗೇಡು ಎಂದು ಕರೆದಿದ್ದಾರೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ತಮ್ಮ ಇರಾನಿನ ಬ್ರಿಗೇಡಿಯರ್ ಜನರಲ್ ಅಮೀರ್ ಹತಾಮಿ ಅವರೊಂದಿಗೆ ಮಾತುಕತೆ ಬಹಳ ಫಲಪ್ರದವಾಗಿದೆ ಮತ್ತು ಅಫ್ಘಾನಿಸ್ತಾನ ಸೇರಿದಂತೆ ದ್ವಿಪಕ್ಷೀಯ ಸಹಕಾರ ಮತ್ತು ಪ್ರಾದೇಶಿಕ ಭದ್ರತಾ ಸಮಸ್ಯೆಗಳನ್ನು ಹೆಚ್ಚಿಸುವ ಮಾರ್ಗಗಳ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ.
ಕಾರ್ಗಿಲ್ ವಿಜಯ್ ದಿನಾಚರಣೆಗೆ ಇಂದು 21 ವರ್ಷ ಪೂರ್ಣಗೊಂಡಿವೆ. 1999 ರಲ್ಲಿ ಇದೆ ದಿನ ಭಾರತೀಯ ಸೇನೆ ಪಾಕ್ ಸೇನೆಯ ಮೇಲೆ ತನ್ನ ವಿಜಯ ಪತಾಕೆಯನ್ನು ಹಾರಿಸಿತ್ತು. ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸಿಡಿಎಸ್ ಬಿಪಿನ್ ರಾವತ್ ಹಾಗೂ ಮೂರು ಸೇನಾ ಮುಖ್ಯಸ್ಥರು ದೆಹಲಿಯ ನ್ಯಾಷನಲ್ ವಾರ್ ಮೆಮೋರಿಯಲ್ ನಲ್ಲಿ ಹುತಾತ್ಮ ಯೋಧರಿಗೆ ಶೃದ್ಧಾಂಜಲಿ ಆರ್ಪಿಸಿದ್ದಾರೆ.
ಪ್ರಸ್ತುತ, 10 ವರ್ಷ ಮತ್ತು ಅದಕ್ಕಿಂತ ಹೆಚ್ಚು ಅವಧಿಗೆ ಸೇವೆ ಸಲ್ಲಿಸಿರುವ ಹಾಗೂ ಕಾರಣಾಂತರದಿಂದ ಸೇವೆ ಸಲ್ಲಿಸಲು ಅಮಾನ್ಯಗೊಂಡ ಭಾರತೀಯ ಸಶಸ್ತ್ರಪಡೆಯ ಸೈನಿಕರಿಗೆ ಇನ್ವ್ಯಾಲಿಡ್ ಪೆನ್ಶನ್ ನೀಡಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.