ನೀನಾಸಂ ಸತೀಶ್ ಹಾಗೂ ರಚಿತಾರಾಮ್ "ಅಯೋಗ್ಯ" ಚಿತ್ರದ ನಂತರ ನಟಿಸಿರುವ ಚಿತ್ರ "ಮ್ಯಾಟ್ನಿ". ಬಹು ನಿರೀಕ್ಷಿತ ಈ ಚಿತ್ರದ " ಬಾರೋ ಬಾರೋ ಬಾಟಲ್ ತಾರೋ" ಎಂಬ ಹಾಡು ನ್ಯೂ ಇಯರ್ ಸಂದರ್ಭದಲ್ಲಿ ಬಿಡುಗಡೆಯಾಗಿದೆ. ನಟ ಡಾಲಿ ಧನಂಜಯ ಈ ಹಾಡನ್ನು ಬಿಡುಗಡೆ ಮಾಡಿದ್ದಾರೆ.
ಪೂರ್ಣಚಂದ್ರ ತೇಜಸ್ವಿ ಬರೆದು ಸಂಗೀತ ನೀಡಿರುವ ಈ ಹಾಡನ್ನು ಪೂರ್ಣಚಂದ್ರ ತೇಜಸ್ವಿ, ನೀನಾಸಂ ಸತೀಶ್ ಹಾಗೂ ರೀಲ್ ರೀನಾ ಹಾಡಿದ್ದಾರೆ. ಯುವಪೀಳಿಗೆಗೆ ಹೇಳಿಮಾಡಿಸಿದಂತಿರುವ ಈ ಹಾಡಿಗೆ ನೀನಾಸಂ ಸತೀಶ್, ನಾಗಾಭೂಷಣ್ ಹಾಗೂ ಶಿವರಾಜ್ ಕೆ.ಆರ್ ಪೇಟೆ ಹೆಜ್ಜೆ ಹಾಕಿದ್ದಾರೆ. ಹೊಸವರ್ಷದ ಹರುಷವನ್ನು ಹೆಚ್ಚಿಸುವ ಈ ಹಾಡಿಗೆ ಮೆಚ್ಚುಗೆ ಮಹಾಪೂರವೇ ಹರಿದು ಬರುತ್ತಿದೆ.
ಹೊಸ ವರ್ಷ ಹತ್ತಿರ ಬರ್ತಿದ್ದಂತೆ ರಾಜಧಾನಿಯಲ್ಲಿ ಡ್ರಗ್ಸ್ ವಾಸನೆ ಹೆಚ್ಚಾಗ್ತಿದೆ. ಇತ್ತಿಚೆಗಷ್ಟೇ ವಿದೇಶಿ ಮೂಲದ ಪೆಡ್ಲರ್ ಅರೆಸ್ಟ್ ಮಾಡಿದ್ದ ಖಾಕಿ ಪಡೆ ಕೋಟ್ಯಾಂತರ ರೂ. ಡ್ರಗ್ಸ್ ವಶಕ್ಕೆ ಪಡೆದಿತ್ತು. ಅದೇ ರೀತಿ ಮತ್ತೆ ಮೂವರು ಪೆಡ್ಲರ್ಗಳನ್ನ ಹೆಡೆಮುರಿ ಕಟ್ಟಿರೋ ಸಿಸಿಬಿ ಟೀಂ, ಅರ್ಧಕೋಟಿಯಷ್ಟು ಡ್ರಗ್ಸ್ ಸೀಜ್ ಮಾಡಿದೆ.
New Year Resolutions: ಪ್ರತಿವರ್ಷವೂ ಅನೇಕರು ವಿವಿಧ ರೀತಿಯ ದೃಢಸಂಕಲ್ಪಗಳನ್ನು ಮಾಡುತ್ತಾರೆ. ಕೆಲವು ದಿನಗಳ ಕಾಲ ಅವುಗಳನ್ನು ಪಾಲಿಸಿ ಮತ್ತೆ ತಮ್ಮ ಹಳೆಯ ಜೀವನಶೈಲಿಯನ್ನೇ ಮುಂದುವರೆಸುತ್ತಾರೆ. ನಿರ್ಣಯಿಸುವುದು ಅಂದುಕೊಂಡಷ್ಟು ಸುಲಭವಲ್ಲ. ಅದೇ ರೀತಿ ಸಂಕಲ್ಪ ಮಾಡಿ ಪಾಲಿಸುವುದು ಸಹ ಸುಲಭವಲ್ಲ.
ನೀವು ಹೊಸ ವರ್ಷಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಇದು ಎಲ್ಲರೂ ಆಶಾವಾದ ಮತ್ತು ಭರವಸೆಯೊಂದಿಗೆ ಎದುರುನೋಡುವ ಸಮಯ. ಹೊಸ ವರ್ಷದ ಶುಭಾಶಯಗಳನ್ನು ನಿಮ್ಮ ಸ್ನೇಹಿತರು, ಕುಟುಂಬ ಮತ್ತು ಸಹೋದ್ಯೋಗಿಗಳೊಂದಿಗೆ ಹಂಚಿಕೊಳ್ಳಲು ಇದು ಉತ್ತಮ ಸಮಯ. ಹೊಸ ವರ್ಷದಲ್ಲಿ ನಿಮ್ಮ ಪ್ರೀತಿಪಾತ್ರರೊಂದಿಗೆ ಮನಪೂರ್ವಕವಾಗಿ ಶುಭ ಕೋರಲು ಶುಭ ಸಂದೇಶಗಳು ಮತ್ತು ಕವನಗಳು ಇಲ್ಲಿವೆ ನೋಡಿ.
ನೂತನ ವರ್ಷಕ್ಕೆ ಕ್ಷಣಗಣನೆ ಆರಂಭವಾಗಿದ್ದು, ನಗರದ ಎಂಜಿ ರಸ್ತೆ,ಬ್ರಿಗೇಡ್ ರಸ್ತೆ ಹೊಸವರ್ಷದ ಸ್ವಾಗತಕ್ಕೆ ಸಜ್ಜಾಗಿದೆ. ನಗರದಲ್ಲಿ ಈ ರಸ್ತೆಗಳಲ್ಲಿ ಅತೀ ಹೆಚ್ಚು ಜನ ಸೇರುವ ಹಿನ್ನೆಲೆ ಪೊಲೀಸರು ಸಹ ಸೂಕ್ತ ಬಂದೋಬಸ್ತ್ ಮಾಡಿಕೊಂಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.