New Year Resolutions: ಹೊಸ ವರ್ಷಕ್ಕೆ 5 ದೃಢಸಂಕಲ್ಪಗಳು, ಆದ್ರೆ ಯಾರೂ ಪಾಲಿಸಲ್ಲ!

New Year Resolutions: ಪ್ರತಿವರ್ಷವೂ ಅನೇಕರು ವಿವಿಧ ರೀತಿಯ ದೃಢಸಂಕಲ್ಪಗಳನ್ನು ಮಾಡುತ್ತಾರೆ. ಕೆಲವು ದಿನಗಳ ಕಾಲ ಅವುಗಳನ್ನು ಪಾಲಿಸಿ ಮತ್ತೆ ತಮ್ಮ ಹಳೆಯ ಜೀವನಶೈಲಿಯನ್ನೇ ಮುಂದುವರೆಸುತ್ತಾರೆ. ನಿರ್ಣಯಿಸುವುದು ಅಂದುಕೊಂಡಷ್ಟು ಸುಲಭವಲ್ಲ. ಅದೇ ರೀತಿ ಸಂಕಲ್ಪ ಮಾಡಿ ಪಾಲಿಸುವುದು ಸಹ ಸುಲಭವಲ್ಲ. 

Written by - Puttaraj K Alur | Last Updated : Jan 1, 2023, 12:22 PM IST
  • ಹೊಸ ವರ್ಷದಂದು ಮಾಡುದ ದೃಢಸಂಕಲ್ಪಗಳನ್ನು ಬಹುತೇಕರು ಪಾಲಿಸುವುದಿಲ್ಲ
  • ಕೆಲವು ದಿನ ಪಾಲಿಸಿ ಮತ್ತೆ ಅದೇ ಜೀವನಶೈಲಿ ಪಾಲಿಸುವ ಜನರೇ ಹೆಚ್ಚಾಗಿರುತ್ತಾರೆ
  • ನೀವೂ ಸಹ ಹೊಸ ವರ್ಷಕ್ಕೆ ಹೊಸ ಹೊಸ ದೃಢಸಂಕಲ್ಪಗಳನ್ನು ಮಾಡಿ ಪಾಲಿಸಿ
New Year Resolutions: ಹೊಸ ವರ್ಷಕ್ಕೆ 5 ದೃಢಸಂಕಲ್ಪಗಳು, ಆದ್ರೆ ಯಾರೂ ಪಾಲಿಸಲ್ಲ!   title=
ಹೊಸ ವರ್ಷದ ದೃಢಸಂಕಲ್ಪಗಳು

ನವದೆಹಲಿ: ಪ್ರತಿವರ್ಷವೂ ಜನರು ಹೊಸ ಹೊಸ ದೃಢಸಂಕಲ್ಪಗಳನ್ನು ಮಾಡುತ್ತಾರೆ. ಆದರೆ ಯಾರೂ ಸಹ ಅವುಗಳನ್ನು ಸರಿಯಾಗಿ ಪಾಲಿಸುವುದಿಲ್ಲ. 2022ಕ್ಕೆ ಗುಡ್ ಬೈ ಹೇಳಿ 2023ರ ಹೊಸ ವರ್ಷವನ್ನು ಜನರು ಅದ್ದೂರಿಯಾಗಿ ಸ್ವಾಗತಿಸಿದ್ದಾರೆ. ಈಗ ದೃಢಸಂಕಲ್ಪ ಮಾಡುವ ಸಮಯವೆಂದು ಯೋಚಿಸುವ ಅನೇಕರು ಏನೇನೋ ಪ್ಲಾನ್ ಮಾಡುತ್ತಾರೆ. ಆದರೆ ಅವುಗಳನ್ನು ಒಂದೆರಡು ದಿನ ಕಾರ್ಯರೂಪಕ್ಕೆ ತಂದು ನಂತರ ಪಾಲಿಸುವುದಿಲ್ಲ.

ಪ್ರತಿ ಹೊಸ ವರ್ಷವೂ ಜನರು ಮಾಡುವ ಈ 5 ದೃಢಸಂಕಲ್ಪಗಳನ್ನೂ ಯಾರೂ ಸಹ ಪಾಲಿಸುವುದಿಲ್ಲ. ಅಂದುಕೊಂಡಷ್ಟು ಸುಲಭವಲ್ಲ ಅನ್ನೋದಕ್ಕೆ ಈ ದೃಢಸಂಕಲ್ಪಗಳೇ ನಿದರ್ಶನ. ಯಾಕಂದ್ರೆ ಸಂಕಲ್ಪ ಮಾಡುವುದು ಸುಲಭ, ಆದರೆ ಅವುಗಳನ್ನು ಪಾಲಿಸುವುದು ಕಷ್ಟ ಕಷ್ಟ. ಜನರು ಪ್ರತಿವರ್ಷ ಮಾಡುವ ಆದರೆ ಪಾಲಿಸಲು ಸಾಧ್ಯವಾಗದ ಕೆಲವು ನಿರ್ಣಯಗಳ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.  

1) ಆರೋಗ್ಯಕರ ಆಹಾರ ಸೇವಿಸುವುದು

ಬಹುತೇಕ ಜನರು ಹೊಸ ವರ್ಷದಂದು ಈ ಸಂಕಲ್ಪವನ್ನು ಮಾಡುತ್ತಾರೆ. ಆರೋಗ್ಯಕರ ಆಹಾರ ಸೇವಿಸಿ ನಮ್ಮ ಆರೋಗ್ಯವನ್ನು ಸಮತೋಲಿತವಾಗಿಟ್ಟುಕೊಳ್ಳಬೇಕೆಂದು ಬಯಸುತ್ತಾರೆ. ತೂಕ ಅಥವಾ ಆರೋಗ್ಯ ಕಾಪಾಡಿಕೊಳ್ಳಬಯಸುವವರು ಈ ನಿರ್ಣಯ ಮಾಡುತ್ತಾರೆ. ಇದು ಸಂಕಲ್ಪ ಮಾಡಲು ಸುಲಭವೆನಿಸಿದರೂ ಬಹುತೇಕರು ಇದನ್ನು ಪಾಲಿಸುವುದಿಲ್ಲ. ಆರೋಗ್ಯಕರ ಆಹಾರ ಸೇವಿಸುವ ಬದಲು ಅನೇಕರು ಬಾಯರುಚಿಗೆ ಜಂಕ್‍ಫುಡ್ ಸೇರಿದಂತೆ ಇನ್ನಿತರೆ ಆರೋಗ್ಯಕ್ಕೆ ಹಾನಿಕಾರಕ ಆಹಾರವನ್ನು ಸೇವಿಸುತ್ತಾರೆ.

ಇದನ್ನೂ ಓದಿ: Skin Care : ಹಾಲಿನಂಥ ಬಿಳುಪುಳ್ಳ ತ್ವಚೆ ನಿಮ್ಮದಾಗಬೇಕೆ? ಗುಲಾಬಿಯನ್ನು ಹೀಗೆ ಬಳಸಿ

2) ವ್ಯಾಯಾಮ ಮಾಡುವುದು

ಹೊಸ ವರ್ಷದಂದು ಅನೇಕರು ವ್ಯಾಯಾಮ ಮಾಡುವ ಸಂಕಲ್ಪ ಮಾಡುತ್ತಾರೆ. ಕೆಲವು ದಿನ ನಿರ್ಣಯವನ್ನು ಪಾಲಿಸುತ್ತಾರೆ. ಬಳಿಕ ಅದನ್ನು ಪಾಲಿಸುವುದಿಲ್ಲ. ಪ್ರತಿದಿನ ವ್ಯಾಯಾಮ ಮಾಡುವ ಗುರಿಯಿಂದ ಹಿಂದೆ ಸರಿಯುತ್ತಾರೆ. ಆರೋಗ್ಯಕ್ಕೆ ವ್ಯಾಯಾಮ ಅಗತ್ಯವಿದ್ದರೂ ಜಂಜಾಟದ ಜೀವನದಿಂದ ಯಾರೂ ಅದರ ಗೂಜಿಗೆ ಹೋಗುವುದಿಲ್ಲ.

3) ಹಣ ಉಳಿತಾಯ ಮಾಡುವುದು

ಹೊಸ ವರ್ಷದಂದು ಬಹುತೇಕರ ಗುರಿ ಹಣ ಉಳಿಸುವುದಾಗಿರುತ್ತದೆ. ಭವಿಷ್ಯದ ಜೀವನಕ್ಕೆ ಹಣ ಉಳಿತಾಯ ಮಾಡುವ ಸಂಕಲ್ಪ ಮಾಡುವ ಅನೇಕರು ಅದನ್ನು ಪಾಲಿಸುವುದಿಲ್ಲ. ಖರ್ಚು ಕಡಿಮೆ ಮಾಡಿ ಉಳಿತಾಯ ಜಾಸ್ತಿ ಮಾಡಿದ್ರೆ ನಮಗೆ ಲಾಭ ಅನ್ನೋದು ಗೊತ್ತಿದ್ದರೂ ಈ ನಿಯಮವನ್ನು ಯಾರೂ ಪಾಲಿಸುವುದಿಲ್ಲ.

4) ಅತಿಯಾದ ಮೊಬೈಲ್ ಬಳಕೆ

ಇಂದು ಪ್ರತಿಯೊಬ್ಬರೂ ಮೊಬೈಲ್ ದಾಸರಾಗಿದ್ದಾರೆ. ಅಂಗೈಯಲ್ಲೇ ಜಗತ್ತನ್ನೇ ವೀಕ್ಷಿಸಲು ಸಾಧ್ಯವಾಗಿರುವಾಗ ಶೇ.90ರಷ್ಟು ಜನರು ಮೊಬೈಲ್‍ನಲ್ಲಿಯೇ ಮಗ್ನರಾಗಿರುತ್ತಾರೆ. ಹೆಚ್ಚುಹೊತ್ತು ಮೊಬೈಲ್ ಬಳಕೆಯಿಂದ ತಮಗೆ ಹಾನಿ ಎಂಬುದು ಗೊತ್ತಿದ್ದರೂ ಅದರಿಂದ ದೂರ ಸರಿಯುವ ಸಂಕಲ್ಪವನ್ನು ಮಾಡುವುದಿಲ್ಲ.

ಇದನ್ನೂ ಓದಿ: Tulsi Astro Tips: ಮರೆತೂ ಕೂಡ ಈ ರೀತಿ ತುಳಸಿ ದಳಗಳನ್ನು ಕೇಳಬೇಡಿ, ಭಾರಿ ಹಾನಿಗೆ ಕಾರಣ

5) ಧೂಮಪಾನ

ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ ಎಂಬುದು ಗೊತ್ತಿದ್ದರೂ ಅನೇಕರಿಗೆ ಇದೊಂದು ಚಟವಾಗಿರುತ್ತದೆ. ಶೇ.90ರಷ್ಟು ಜನರು ಹೊಸ ವರ್ಷದಂದು ನಾನು ಧೂಮಪಾನ ಮಾಡುವುದಿಲ್ಲವೆಂದು ಸಂಕಲ್ಪ ಮಾಡುತ್ತಾರೆ. ಕೆಲವು ದಿನ ಪಾಲಿಸಿ ಮತ್ತೆ ಆ ಚಟವನ್ನು ಮುಂದುವರೆಸುತ್ತಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News