ರಾಜ್ಯದಲ್ಲಿ ಎಲ್ಲಾ ಸಮೀಕ್ಷೆಗಳು ಸುಳ್ಳಾಗಲಿವೆ. ಮತ್ತೆ ಬಿಜೆಪಿ ಸರ್ಕಾರವೇ ಬಹುಮತ ಪಡೆದು ಸರ್ಕಾರ ರಚಿಸಲಿದೆ. ಹೀಗಂತ ಸಿಎಂ ಬೊಮ್ಮಾಯಿ ಮತ್ತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮತದಾನೋತ್ತರ ಸಮೀಕ್ಷೆ ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಸಂಚಲನ ಮೂಡಿಸಿದೆ. ಈ ಬಾರಿಯ ಎಕ್ಸಿಟ್ ಪೋಲ್ನಲ್ಲಿ ಕಾಂಗ್ರೆಸ್ಗೆ ಬಹುಪರಾಕ್ ಸಿಕ್ಕಿದೆ. ಮತ್ತೊಮ್ಮೆ ಸಿಎಂ ರೇಸ್ನಲ್ಲಿ ಮಾಜಿ ಡಿಸಿಎಂ ಪರಮೇಶ್ವರ್ ಹೆಸರು ಮುನ್ನೆಲೆಗೆ ಬಂದಿದೆ. ಈ ನಡುವೆ ಮತ್ತೊಬ್ಬ ಕಾಂಗ್ರೆಸ್ ಮುಖಂಡ ಕೂಡ ಪರಂ ಮುಂದಯೇ ಸಿಎಂ ಆಗೋ ಆಸೆ ಬಿಚ್ಚಿಟ್ಟಾರೆ.
ಈ ಸಲ ಕಾಂಗ್ರೆಸ್ ಸರ್ಕಾರ. ಮತದಾರಪ್ರಭುಗಳ ಶ್ರೀರಕ್ಷೆ ಸಿಕ್ಕಿದೆ. ಇದು ಕಾಂಗ್ರೆಸ್ ನಾಯಕರ ವಿಶ್ವಾಸ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಚಿವ ಎಂ.ಬಿ.ಪಾಟೀಲ್ ಮತ್ತು ಮಾಜಿ ಡಿಸಿಎಂ ಪರಮೇಶ್ವರ್ ಕೂಡ ಖುಷಿಯಾಗಿದ್ದಾರೆ.
ಸಿಎಂ ತವರು ಜಿಲ್ಲೆಗೆ ಇಂದು ಪ್ರಿಯಾಂಕಾ ಗಾಂಧಿ ಎಂಟ್ರಿ. ಹಿರೇಕೆರೂರಿನಲ್ಲಿ ಪ್ರಿಯಾಂಕಾ ಗಾಂಧಿ ಅಬ್ಬರದ ಪ್ರಚಾರ. 'ಕೈ' ಅಭ್ಯರ್ಥಿ ಯು.ಬಿ.ಬಣಕಾರ ಪರ ಪ್ರಿಯಾಂಕಾ ಮತಬೇಟೆ. ತಾಲೂಕು ಕ್ರೀಡಾಂಗಣದಲ್ಲಿ ಪ್ರಿಯಾಂಕಾ ಬಹಿರಂಗ ಸಮಾವೇಶ. ಮಧ್ಯಾಹ್ನ 1 ಗಂಟೆಗೆ ಸಮಾವೇಶದ ಮೂಲಕ ಮಹಿಳಾ ಮತಬೇಟೆ.
ಕೋಟೆಗಳ ನಾಡು ಚಿತ್ರದುರ್ಗ ನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ ಬೃಹತ್ ಸಮಾವೇಶ ಮಾಡುತ್ತಿದ್ದರೆ, ಅತ್ತ ಗ್ರಾಮೀಣ ಭಾಗಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಸಿ.ವೀರೇಂದ್ರ ಪಪ್ಪಿ "ನನ್ನ ಬೂತ್ ಗೆದ್ದರೆ ನನ್ನ ಕ್ಷೇತ್ರ ಗೆದ್ದಂತೆ" ಎಂದು ಗ್ರಾಮದಲ್ಲಿ ಮತದಾರರ ಮನ ಸೆಳೆದರು. ಎಲ್ಲಿ ನೋಡಿದರೂ ಪಪ್ಪಿ ಪಪ್ಪಿ ಪಪ್ಪಿ ಎಂಬ ಜಯಘೋಷ ಕೇಳುತ್ತಿತ್ತು. ಕಾಂಗ್ರೆಸ್ ಹಿರಿಯರು, ಮಹಿಳೆಯರು, ಯುವಕರು, ಕಾರ್ಯಕರ್ತರು ಸಾಥ್ ನೀಡಿದರು.
ಶಶಿಕಲಾ ಜೊಲ್ಲೆ ಪರ ಕೇಂದ್ರ ಸಚಿವರ ಭರ್ಜರಿ ಮತಬೇಟೆ. ನಿಪ್ಪಾಣಿ ತಾಲೂಕಿನ ಗಳತಗಾ ಗ್ರಾಮದಲ್ಲಿ ಪ್ರಚಾರ ಸಭೆ. ಜೊಲ್ಲೆ ಪರ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ರಾಮದಾಸ್ ಅಠವಳೆ ಪ್ರಚಾರ. ಪ್ರಚಾರ ಸಭೆಯಲ್ಲಿ ಭಾಗಿಯಾದ ಸಾವಿರಾರು ಮತದಾರರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.