ಹೆಚ್ಚಿನ ಚುನಾವಣೋತ್ತರ ಸಮೀಕ್ಷೆಗಳ ಭವಿಷ್ಯದಂತೆ ರಾಜ್ಯದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಕರುನಾಡಿನಲ್ಲಿ ಮೋದಿ ಮೋಡಿ ಮಾಡುತ್ತೆ ಎಂದುಕೊಂಡಿದ್ದ ಕಮಲ ಬಾಡಿ ಹೋಗಿದೆ. ಇದೆಲ್ಲದರ ಜೊತೆಗೆ ಕೆಲ ಅಚ್ಚರಿಯ ರಾಜಕೀಯ ಬೆಳವಣಿಗೆಗಳು ಕೂಡ ರಾಜ್ಯದ ಜನರಿಗೆ ಶಾಕ್ ನೀಡಿವೆ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ.
ಆಡಳಿತ ವಿರೋಧಿ ಅಲೆಯಲ್ಲಿ ಗೆದ್ದು ಬಂದ ಕಾಂಗ್ರೆಸ್. ಕಾಂಗ್ರೆಸ್ ಜನಮಾನಸದಲ್ಲಿ ಅಭೂತಪೂರ್ವ ಗೆಲವು. ಚುನಾವಣೆ ಕೊನೇ ಕ್ಷಣದಲ್ಲಿ ಸದ್ದು ಮಾಡಿದ್ದ ಭಜರಂಗಬಲಿ. ಫಲಿತಾಂಶದಲ್ಲಿ ಭಜರಂಗಿ ಆದದ್ದು ಕಾಂಗ್ರೆಸ್, ಬಲಿ ಆದದ್ದು ಬಿಜೆಪಿ. ಕಳೆದ 34 ವರ್ಷಗಳಲ್ಲೇ ಕಾಂಗ್ರೆಸ್ ಪ್ರಚಂಡ ಗೆಲುವು. ರಾಜ್ಯದಲ್ಲಿ ಮತ್ತೆ ಗೆಲ್ಲುವ ಬಿಜೆಪಿ ಕನಸು ಭಗ್ನ. ಜೆಡಿಎಸ್ ಪಕ್ಷಕ್ಕೆ ಎರಡು ದಶಕಗಳಲ್ಲೇ ಅತಿ ಕಡಿಮೆ ಸ್ಥಾನ.
ನಂದಿನಿ ಪೇಡ ತಿನ್ನುವ ಮೂಲಕ ಕಾಂಗ್ರೆಸ್ ನಾಯಕರು ಸಂಭ್ರಮಾಚರಣೆ ಮಾಡಿದ್ದಾರೆ. ಕಾಂಗ್ರೆಸ್ ಭರ್ಜರಿ ಗೆಲುವಿನ ಹಿನ್ನೆಲೆ ನಂದಿನಿ ಪೇಡಾ ಸವಿಯುವ ಮೂಲಕ ಕಾಂಗ್ರೆಸ್ ನಾಯಕರು ಸಂಭ್ರಮಾಚರಣೆ ಮಾಡಿದ್ರು. ಕರ್ನಾಟಕದ ಚುನಾವಣೆಯಲ್ಲಿ ನಂದಿನಿ-ಅಮೂಲ್ ವಿವಾದ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿತ್ತು. ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರಿಗೆ ನಂದಿನಿ ಪೇಡಾವನ್ನು ಮಲ್ಲಿಕಾರ್ಜುನ ಖರ್ಗೆ ತಿನ್ನಿಸಿ ಸಂಭ್ರಮಿಸಿದ್ರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.