ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ) ಪ್ರತಿ ವರ್ಗಕ್ಕೆ ಅನುಗುಣವಾಗಿ ವಿಭಿನ್ನ ಪಾಲಿಸಿಗಳನ್ನು ನಿರ್ವಹಿಸುತ್ತದೆ. ಈ ಪಾಲಸಿಗಳನ್ನು ತೆಗೆದುಕೊಳ್ಳುವ ಮೂಲಕ ಜನರು ತಮ್ಮ ಮುಂದಿನ ಜೀವನವನ್ನು ಭದ್ರಪಡಿಸಿಕೊಳ್ಳಬಹುದು.
ಲೈಫ್ ಇನ್ಸುರನ್ಸ್ ಕಾರ್ಪೋರೇಶನ್ (LIC) ಕುರಿತು ನಮ್ಮ-ನಿಮ್ಮೆಲ್ಲರಿಗೂ ತಿಳಿದೇ ಇದೆ. ಇದರಲ್ಲಿ ನಾವೆಲ್ಲರೂ ಜೀವ ವಿಮೆ ಪಾಲಸಿ ಕೂಡ ಪಡೆಯುತ್ತೇವೆ. ಆದರೆ, LICಯಲ್ಲಿ ಒಂದು ವಿಶೇಷ ಪಾಲಸಿ ಇದ್ದು, ಇದು ಗ್ರಾಹಕರಿಗೆ ಒಂದೇ ಬಾರಿಗೆ ಹಣ ಹೂಡಿಕೆ ಮಾಡಿ ಜೀವನವಿಡಿ ಪೆನ್ಷನ್ ನೀಡುತ್ತದೆ ಪಡೆಯುವ ಅವಕಾಶ ನೀಡುತ್ತದೆ ಎಂಬುದು ತಿಳಿದಿದೆಯೇ. ಇಲ್ಲ ಎಂದಾದರೆ ಈ ವರದಿಯನ್ನೊಮ್ಮೆ ಓದಿ.
ಕಳೆದ ಐದು ತಿಂಗಳಲ್ಲಿ, ಕರೋನಾ ವೈರಸ್ ಮಹಾಮಾರಿ ಮತ್ತು ಲಾಕ್ಡೌನ್ ಹಿನ್ನೆಲೆ ಮನೆ ಖರೀದಿಸುವವರ ಸಂಖ್ಯೆಯಲ್ಲಿ ಭಾರಿ ಕುಸಿತ ಕಂಡುಬಂದಿದೆ. ಏತನ್ಮಧ್ಯೆ, ಹೊಸ ಗ್ರಾಹಕರನ್ನು ತನ್ನತ್ತ ಸೆಳೆಯಲು ಎಲ್ಐಸಿ ತನ್ನ ಬಡ್ಡಿದರಗಳನ್ನು ಕಡಿತಗೊಳಿಸುವುದಾಗಿ ಘೋಷಣೆ ಮಾಡಿದೆ.
ಗ್ರಾಹಕರಿಗೆ ವಂಚನೆ ಎಸಗುವ ಉದ್ದೇಶದಿಂದ ಅಧಿಕಾರಿಗಳು ಹಾಗೂ ನಿಯಂತ್ರಕರ ಸೋಗು ಧರಿಸುವ ಮೂಲಕ ವಂಚನೆ ಎಸಗಲಾಗುತ್ತಿದೆ ಎಂಬ ದೂರುಗಳು ಕೇಳಿಬಂದಿವೆ. ದೊಡ್ಡ ಲಾಟರಿ ಹಾಗೂ ದೊಡ್ಡ ಭರವಸೆಗಳನ್ನು ನೀಡಿ ನಕಲಿ ಯೋಜನೆಗಳಿಗೆ ಜನರಿಗೆ ಆಮೀಷವೊಡ್ಡಿ ಈ ಕರೆಗಳನ್ನು ಮಾಡಲಾಗುತ್ತಿದೆ.
ಒಂದುವೇಳೆ ನೀವೂ ಕೂಡ ಸಣ್ಣ ಉಳಿತಾಯದ ಮೂಲಕ ಕಡಿಮೆ ಕಾಲಾವಧಿಯಲ್ಲಿ ಲಕ್ಷಾಧಿಪತಿ ಆಗಲು ಬಯಸುತ್ತಿದ್ದರೆ. ಹಲವು ಯೋಜನೆಗಳ ಆಯ್ಕೆ ನಿಮ್ಮ ಮುಂದಿದ್ದು, ಅವುಗಳಿಂದ ನೀವು ಹೀಗೆ ಮಾಡಲು ಸಾಧ್ಯ. ಮತ್ತು ಈ ಯೋಜನೆಗಳಲ್ಲಿ ರಿಸ್ಕ್ ಕೂಡ ಇಲ್ಲ ಎಂದರೆ ಅತಿಶಯೋಕ್ತಿ ಎನಿಸದು.
ದೇಶದ ಕೋಟ್ಯಂತರ ನಾಗರಿಕರು ಇಂದು ತಮ್ಮ ಆಧಾರ್ ಕಾರ್ಡ್ ಬಳಸುತ್ತಿದ್ದಾರೆ. ಒಂದು ವೇಳೆ ನೀವೂ ಕೂಡ ಆಧಾರ್ ಕಾರ್ಡ್ ಹೊಂದಿದ್ದರೆ, ಅದನ್ನು ಬಳಸಿ ನೀವು ಗಳಿಕೆ ಮಾಡಬಹುದಾಗಿದೆ. ಭಾರತೀಯ ಜೀವ ವಿಮಾ ನಿಗಮ ನಿಮಗೆ ಈ ಅವಕಾಶ ನೀಡುತ್ತಿದೆ. ಇದಕ್ಕಾಗಿ ನೀವು ಸಣ್ಣ ಉಳಿತಾಯ ಯೋಜನೆಯಲ್ಲಿ ಉಳಿತಾಯ ಮಾಡಬೇಕು. ಹೌದು, ಕೇವಲ ವಿಮಾ ಪಾಲಸಿ ಅಲ್ಲದೆ LIC ಸಣ್ಣ ಉಳಿತಾಯ ಯೋಜನೆಯನ್ನು ಕೂಡ ನಡೆಸುತ್ತದೆ.
ಫೆಬ್ರವರಿ 1, 2020ರಿಂದ ಕೇಂದ್ರ ಸರ್ಕಾರ ಆರ್ಥಿಕ ಆಯವ್ಯಯ ಮಂಡಿಸಲಿದೆ. ಈ ಬಾರಿಯ ಬಜೆಟ್ ನಲ್ಲಿ ಆದಾಯ ತೆರಿಗೆಯಲ್ಲಿ ಭಾರಿ ಬದಲಾವಣೆಯನ್ನು ನಿರೀಕ್ಷಿಸಲಾಗುತ್ತಿದೆ. ಈ ಬಾರಿಯ ಬಜೆಟ್ ನಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಜನಸಾಮಾನ್ಯರಿಗೆ ಹಲವು ಯೋಜನೆಗಳನ್ನು ಹೊತ್ತು ತರಲಿದ್ದಾರೆ ಎನ್ನಲಾಗಿದೆ. ಆದರೂ ಸಹಿತ ಹಲವು ಸಂಗತಿಗಳಲ್ಲಿ ಬದಲಾವಣೆಯಾಗುತ್ತಿದ್ದು, ನಿಮ್ಮ ಜೇಬಿಗೆ ಭಾರಿಯಾಗಿ ಪರಿಣಮಿಸಲಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.