Karnataka Election 2023: ಇಂದು ಮಂಡ್ಯ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಅಶೋಕ ಜಯರಾಮ ಅವರ ಪರ ಪ್ರಚಾರ ನಡೆಸಿ ಅವರು ಮಾತನಾಡಿದ ಸಿಎಂ ಬೊಮ್ಮಾಯಿ, ಮಂಡ್ಯದಲ್ಲಿ ಈ ಬಾರಿ ಬದಲಾವಣೆ ಗಾಳಿ ಬೀಸುತ್ತಿದೆ. ಹೊಸ ನಾಯಕತ್ವಕ್ಕೆ ಅವಕಾಶ ಕೊಡಿ ಎಂದು ಹೇಳಿದರು.
ಸಕ್ಕರೆನಾಡು ಮಂಡ್ಯದಲ್ಲಿ ರಂಗೇರಿದ ರಾಜಕೀಯ ಅಖಾಡ. ಸಕ್ಕರೆನಾಡಿನ ಅಖಾಡಕ್ಕೆ ಸಿಎಂ ಬೊಮ್ಮಾಯಿ ಎಂಟ್ರಿ. ಬಿಜೆಪಿ ಅಭ್ಯರ್ಥಿಗಳ ಸಿಎಂ ಬೊಮ್ಮಾಯಿ ಭರ್ಜರಿ ಪ್ರಚಾರ. ಮಂಡ್ಯ ಮತ್ತು ಮದ್ದೂರಿನಲ್ಲಿ ರೋಡ್ ಶೋ, ಸಾರ್ವಜನಿಕ ಸಭೆ. ಸಂಜೆ 5 ಗಂಟೆಗೆ ಮಂಡ್ಯ, 6 ಗಂಟೆಗೆ ಮದ್ದೂರಿನಲ್ಲಿ ಪ್ರಚಾರ.
ಸಕ್ಕರೆನಾಡಿಗೆ ಯೋಗಿ ಆದಿತ್ಯನಾಥ್ ಎಂಟ್ರಿ. JDS ಭದ್ರಕೋಟೆ ಛಿದ್ರಕ್ಕೆ ಬಿಜೆಪಿಯಿಂದ ಯೋಗಿ ಅಸ್ತ್ರ. ರೋಡ್ ಶೋ ಮೂಲಕ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ. ಮಂಡ್ಯ ನಗರದಲ್ಲಿ ಯುಪಿ ಸಿಎಂ ಯೋಗಿ ರೋಡ್ ಶೋ.
Dog Predicts: ಕರ್ನಾಟಕದಲ್ಲಿ ಚುನಾವಣೆ ಅಖಾಡ ಜೋರಾಗಿ ನಡೆಯುತ್ತಿದೆ. ಅಭ್ಯರ್ಥಿಗಳ ನಾಮಪತ್ರ ಪ್ರಕ್ರಿಯೆಯು ಮುಗಿದಿದೆ. ಹೀಗಿರುವಾಗ ಕರ್ನಾಟಕದ ಮುಂದಿನ ಸಿಎಂ ಯಾರೆಂದು ಕಾಲ ಬೈರವ ಸುಳಿವು ನೀಡಿದೆ.
ಎಸ್.ಗುರುಚರಣ್ ಜೆಡಿಎಸ್ ಸೇರ್ಪಡೆ. ಅಧಿಕೃತವಾಗಿ JDS ಸೇರ್ಪಡೆಯಾದ ಗುರುಚರಣ್. ಎಸ್.ಗುರುಚರಣ್, SM ಕೃಷ್ಣ ಸಹೋದರನ ಪುತ್ರ. ʻಕೈʼ ಟಿಕೆಟ್ ವಂಚಿತ ಆಕಾಂಕ್ಷಿಯಾಗಿರೋ ಗುರುಚರಣ್. ಸೋಮನಹಳ್ಳಿಯ ತಮ್ಮ ಮನೆಯಲ್ಲಿ ಜೆಡಿಎಸ್ ಸೇರ್ಪಡೆ. ಗುರುಚರಣ್ಗೆ ಪಕ್ಷದ ಬಾವುಟ ಕೊಟ್ಟು, ಶಾಲು ಹೊದಿಸಿ ಹಾರ ಹಾಕಿ ಸ್ವಾಗತಿಸಿದ ಹೆಚ್.ಡಿ.ಕುಮಾರಸ್ವಾಮಿ.
ಮನ್ಮುಲ್ ಅಧ್ಯಕ್ಷ ರಾಮಚಂದ್ರುಗೆ ಒಲಿದ ಮಂಡ್ಯ ಟಿಕೆಟ್. ಮಂಡ್ಯದಲ್ಲಿ ಭುಗಿಲೆದ್ದ ಜೆಡಿಎಸ್ ಪಕ್ಷದ ಬಂಡಾಯದ ಕಿಚ್ಚು. ಮಂಡ್ಯದ ಶಾಸಕ ಸ್ಥಾನಕ್ಕೆ ಮತ್ತು ಪಕ್ಷಕ್ಕೆ ಎಂ.ಶ್ರೀನಿವಾಸ್ ರಿಸೈನ್. ಇಂದು ಮೂವರು JDS ಟಿಕೆಟ್ ಆಕಾಂಕ್ಷಿಗಳಿಂದ ಪ್ರತ್ಯೇಕ ನಾಮಪತ್ರ ಸಲ್ಲಿಕೆ.
ಪ್ರಜಾಧ್ವನಿ ಯಾತ್ರೆಯಲ್ಲಿ ದುಡ್ಡು ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಡ್ಯದಲ್ಲಿ ಡಿ.ಕೆ.ಶಿವಕುಮಾರ್ ವಿರುದ್ದ ಎಫ್ಐಆರ್ ದಾಖಲಾಗಿದೆ.. ಚುನಾವಣಾಧಿಕಾರಿಗಳ ದೂರು ಆಧರಿಸಿ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಲಿಂಗಾಯಿತ ಮತ ಬೇಟೆಗೆ ಮುಂದಾದ ಬಿಜೆಪಿ-ಜೆಡಿಎಸ್. ಸಕ್ಕರೆನಾಡು ಮಂಡ್ಯದಲ್ಲಿ ರಂಗೇರಿದ ಪುತ್ಥಳಿ ಪಾಲಿಟಿಕ್ಸ್. ಮಾಚಹಳ್ಳಿ ಗ್ರಾಮದಲ್ಲಿಂದು ಬಸವೇಶ್ಚರ ಪುತ್ಥಳಿ ಅನಾವರಣ. ಪುತ್ಥಳಿ ಉದ್ಘಾಟನೆ ಮಾಡಲಿರುವ ಮಾಜಿ ಸಿಎಂ ಕುಮಾರಸ್ವಾಮಿ. ಜೆಡಿಎಸ್ ಶಾಸಕ ಪುಟ್ಟರಾಜು ನೇತೃತ್ವದಲ್ಲಿ ಪುತ್ಥಳಿ ನಿರ್ಮಾಣ. 15 ಅಡಿ ಎತ್ತರದ ಕುದುರೆ ಮೇಲೆ ಕುಳಿತ ಬಸವೇಶ್ವರರ ಫೈಬರ್ ಪುತ್ಥಳಿ. ಇಂದಿನ ಪುತ್ಥಳಿ ಅನಾವರಣ ಕಾರ್ಯಕ್ರಮಕ್ಕಾಗಿ ಗ್ರಾಮದಲ್ಲಿ ಸಿದ್ಧತೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.