ಮಂಡ್ಯದಲ್ಲಿ ಮೂರನೇ ದಿನದ ಬಿಜೆಪಿ ವಿಜಯ ಸಂಕಲ್ಪ ರಥಯಾತ್ರೆ. ಇಂದು ನಾಗಮಂಗಲ ಕ್ಷೇತ್ರದಲ್ಲಿ ನಡೆಯುತ್ತಿರುವ ಬಿಜೆಪಿ ಯಾತ್ರೆ. ಬಿಜೆಪಿ ಮುಖಂಡ ಫೈಟರ್ ರವಿ ನೇತೃತ್ವದಲ್ಲಿ ನಡೆಯುತ್ತಿರುವ ಯಾತ್ರೆ. ಸೌಮ್ಯಕೇಶ್ವರ ದೇಗುಲದಲ್ಲಿ ಪೂಜೆ ಸಲ್ಲಿಸಿ ವಿಜಯಯಾತ್ರೆಗೆ ಚಾಲನೆ. ಮೆರವಣಿಗೆಯಲ್ಲಿ ಜಾನಪದ ಕಲಾ ತಂಡಗಳು ಸೇರಿ ನೂರಾರು ಜನ ಭಾಗಿ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು, ಸಚಿವರಾದ ಗೋಪಾಲಯ್ಯ, ಅಂಗಾರಾ, ಅರಗ ಜ್ಣಾನೇಂದ್ರ, ಕೋಟಾ ಶ್ರೀನಿವಾಸ್ ಪೂಜಾರಿ ಸೇರಿ ಹಲವರು ಭಾಗಿ.
ಮಾ. 12ರಂದು ಮಂಡ್ಯದಲ್ಲಿ ಮೋದಿ ಸಮಾವೇಶ ಹಿನ್ನೆಲೆ ಬೆಂ-ಮೈ ಹೆದ್ದಾರಿ ಸಂಚಾರ ರದ್ದು ಮಾಡಿದ ಜಿಲ್ಲಾಡಳಿತ. ಪರ್ಯಾಯ ಮಾರ್ಗದಲ್ಲಿ ಸಂಚಾರಕ್ಕೆ ಅನುವು. ಬೆಂ-ಮೈ ಹೆದ್ದಾರಿ ಸಂಚಾರದಲ್ಲಿ ಮಾರ್ಗ ಬದಲಾವಣೆ. ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಮಾರ್ಗ ಬದಲಾವಣೆ ಆದೇಶ. ಮಾರ್ಗ ಬದಲಾವಣೆ ಮಾಡಿ ಮಂಡ್ಯ ಜಿಲ್ಲಾಧಿಕಾರಿ ಆದೇಶ.
ಮಂಡ್ಯ ಬಿಜೆಪಿ ಮಯವಾಗಲಿದೆ ಎಂದು ಗೆಜ್ಜಲಗೆರೆಯಲ್ಲಿ ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದ್ದಾರೆ.. 1979ರಲ್ಲಿ ಇಂದಿರಾಗಾಂಧಿ ಬಿಟ್ಟರೇ ಯಾವ ಪ್ರಧಾನಿ ಕೂಡ ಭೇಬೇಟಿ ಕೊಟ್ಟಿಲ್ಲ. ಇವತ್ತು ಪ್ರಧಾನಿಯಾಗಿ ಮಂಡ್ಯಕ್ಕೆ ಬರ್ತಿದ್ದಾರೆ. ಮಂಡ್ಯದಲ್ಲಿ ದೊಡ್ಡ ಸೆಲೆಬ್ರೇಷನ್ ಮಾಡಬೇಕು ಎಂದಿದ್ದಾರೆ.
ಮಂಡ್ಯದಲ್ಲಿ ರೈತ ಸಂಘ ಚುನಾವಣಾ ಪ್ರಚಾರ ಶುರು ಮಾಡಿದೆ.. ಮೇಲುಕೋಟೆ ವಿಧಾನ ಸಭಾ ಕ್ಷೇತ್ರದಲ್ಲಿ ದಿ.ಕೆಎಸ್.ಪುಟ್ಟಣ್ಣಯ್ಯ ಪುತ್ರ ದರ್ಶನ್ ಪುಟ್ಟಣ್ಣಯ್ಯ ಪಾದಯಾತ್ರೆ ನಡೆಸುತ್ತಿದ್ದಾರೆ..
ಶ್ರೀ ಶನೇಶ್ವರ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ. ಹೂ ಅಲಂಕಾರದಿಂದ ಕಂಗೊಳಿಸುತ್ತಿರುವ ದೇವರು. ಮಂಡ್ಯದ ಹೊಸಹಳ್ಳಿಯಲ್ಲಿರುವ ಶನೇಶ್ವರ ಸ್ವಾಮಿ ದೇಗುಲಯ. ಸರತಿ ಸಾಲುನಲ್ಲಿ ನಿಂತು ದೇವರ ದರ್ಶನ ಪಡೆದ ಭಕ್ತರು.
ಮಂಡ್ಯ MIMS ಕಾಲೇಜು ಸಿಬ್ಬಂದಿಯಿಂದ ಮತ್ತೊಂದು ಎಡವಟ್ಟು. ವಿದ್ಯಾರ್ಥಿನಿಯರ ಜೊತೆ ರೀಲ್ಸ್ ಮಾಡಿದ ಫಾರ್ಮಸಿ ಇನ್ಚಾರ್ಜ್. ಡ್ಯೂಟಿ ವೇಳೆಯಲ್ಲಿ ರೀಲ್ಸ್ ಮಾಡಿದ ಫಾರ್ಮಸಿ ವಿಭಾಗದ ಇನ್ಚಾರ್ಜ್ ಕೃಷ್ಣೇಗೌಡ. ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್.
ಸಿದ್ದರಾಮಯ್ಯ ವಿರುದ್ಧ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಇಂದು ಮಂಡ್ಯ ಜಿಲ್ಲಾ ಕಾಂಗ್ರೆಸ್ನಿಂದ ಪ್ರತಿಭಟನೆ ನಡೆಯಲಿದೆ.. ಜಿಲ್ಲೆಯಾದ್ಯಂತ ಅಶ್ವತ್ಥ್ ನಾರಾಯಣ್ ವಿರುದ್ಧ ಪ್ರತಿಭಟನೆ ನಡೆಸಿ ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಲಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯನನ್ನು ಟಿಪ್ಪು ರೀತಿ ಹೊಡೆದು ಹಾಕಬೇಕು
ಮಂಡ್ಯದಲ್ಲಿ ಸಚಿವ ಅಶ್ವಥ್ ನಾರಾಯಣ್ ವಿವಾದಾತ್ಮಕ ಹೇಳಿಕೆ
ನಿಮಗೆ ಸಾವರ್ಕರ್ ಬೇಕಾ..? ಟಿಪ್ಪು ಬೇಕಾ..? ನೀವೇ ತೀರ್ಮಾನಿಸಿ
ಟಿಪ್ಪುವಿನ ಜಾಗಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಬಂದು ಬಿಡ್ತಾರೆ
ಉರಿಗೌಡ ನಂಜೇಗೌಡ ಏನ್ ಮಾಡಿದ್ರಿ ಟಿಪ್ಪುಗೆ!
ಅದೇ ರೀತಿ ಸಿದ್ದರಾಮಯ್ಯನನ್ನು ಹೊಡೆದು ಹಾಕಬೇಕು
ಸಾತನೂರು ಗ್ರಾಮದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಹೇಳಿಕೆ
ಮಂಡ್ಯಕ್ಕೆ ಸಚಿವ ಅಶ್ವಥ್ ನಾರಾಯಣ ಆಗಮಿಸಿದ್ದಾರೆ.. ಮಂಡ್ಯದಲ್ಲಿ ಕಮಲ ಅರಳಿಸಲು ಅಶ್ವತ್ಥ್ ನಾರಾಯಣ್ ಪ್ಲಾನ್ ಮಾಡಿದ್ದಾರೆ. ಉಸ್ತುವಾರಿ ಸಚಿವರ ಗೈರಿನಲ್ಲಿ ಪಕ್ಷ ಸಂಘಟನೆಗೆ ಮುಂದಾಗಿದ್ದಾರೆ..
ಇಂದು ಸಕ್ಕರೆನಾಡು ಮಂಡ್ಯದಲ್ಲಿ ನಿಖಿಲ್ ಪ್ರವಾಸ. ಪಕ್ಷ ಸಂಘಟನೆಗೆ ಮುಂದಾದ ನಿಖಿಲ್ ಕುಮಾರಸ್ವಾಮಿ. ಜೆಡಿಎಸ್ ಭದ್ರಕೋಟೆಯಲ್ಲಿ ಇಂದು ನಿಖಿಲ್ ಹವಾ. ಜಿಲ್ಲಾ ಪ್ರವಾಸದ ಮೂಲಕ ನಿಖಿಲ್ ಪಕ್ಷ ಸಂಘಟನೆ. ಭಿನ್ನಮತ ಬೆನ್ನಲ್ಲೇ ಜೆಡಿಎಸ್ ಯುವ ನಾಯಕ ಅಲರ್ಟ್.
ಈ ಮಂಡ್ಯ ಜಿಲ್ಲೆ ಹಾಗೂ ಕ್ಷೇತ್ರದ ಇತಿಹಾಸವನ್ನು ನಾವು ಸ್ಮರಿಸಬೇಕು. ಸ್ವಾತಂತ್ರ್ಯ ಹೋರಾಟದಲ್ಲಿ ಈ ಭೂಮಿ ಮಹತ್ವದ ಪಾತ್ರ ವಹಿಸಿತ್ತು ಎಂಬುದಕ್ಕೆ ಶಿವಪುರಸೌಧವೆ ಸಾಕ್ಷಿ. ಬ್ರಿಟೀಷರನ್ನು ಓಡಿಸಲು ಈ ಭಾಗದ ಹಿರಿಯರು ಮಾಡಿದ ಹೋರಾಟ, ತ್ಯಾಗ ಬಲಿದಾನಕ್ಕೆ ಈ ಸೌಧ ಸಂಕೇತವಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.