ಬಿಜೆಪಿ ಪಕ್ಷ ಸೇರೋ ವಿಚಾರ ಆ ರೀತಿ ಏನೂ ಇಲ್ಲ. ಪಕ್ಷದ ವರಿಷ್ಠರು ನನ್ನ ಜೊತೆ ಮಾತಾಡಿರೋದು ನಿಜಾ ಎಂದು ಸಂಸದೆ ಸುಮಲತಾ ಹೇಳಿಕೆ ನೀಡಿದ್ದಾರೆ. ನಾನು ಬಿಜೆಪಿ ಸೇರೋ ಬಗ್ಗೆ ಇನ್ನೂ ನಿರ್ಧರಿಸಿಲ್ಲ ಎಂದಿದ್ದಾರೆ.
ಹಳೆ ಮೈಸೂರು ಭಾಗದಲ್ಲಿ ಕಮಲ ಅರಳಿಸಲು ಬಿಜೆಪಿ ನಾಯಕರು ಪಣ ತೊಟ್ಟಿದ್ದಾರೆ. ಇತ್ತೀಚಿಗೆ ಮಂಡ್ಯಕ್ಕೆ ಕೇಂದ್ರ ಸಚಿವ ಅಮಿತ್ ಶಾ ಭೇಟಿ ನೀಡಿದ ಬೆನ್ನಲಿ ಬಿಜೆಪಿಯಲ್ಲಿ ಭಾರಿ ಬದಲಾವಣೆಯಾಗಿದೆ. ಹೇಗೆಂದರೆ, ಹೈ ಕಮಾಂಡ್ ಸೂಚನೆ ಪ್ರಕಾರ ಬಿಜೆಪಿ ಕಾರ್ಯಕರ್ತರ ಅಲರ್ಟ್ ಆಗಿದ್ದಾರೆ.
ಬಿಜೆಪಿ ಪಕ್ಷದಿಂದ ಯಾರಾದ್ರು ಸ್ಪರ್ಧೆ ಮಾಡುವುದಾದರೆ, ನಾನು ತನು,ಮನ,ಧನ ಅರ್ಪಿಸುತ್ತೇನೆ. ಈ ದೇಹದಲ್ಲಿ ಉಸಿರು ಇರುವವರೆಗೂ ಈ ತಾಲೂಕಿನ ಅಭಿವೃದ್ಧಿಗೆ ಸೇವಕನಾಗಿ ಕೆಲಸ ಮಾಡ್ತೇನೆ ಎಂದು ಹೇಳಿದ್ದಾರೆ.
ಮಂಡ್ಯ ಜಿಲ್ಲೆಯಲ್ಲಿ ಅಮಿತ್ ಶಾ ಪವರ್ ಶೋ ಮಂಡ್ಯದ ಜನಸಂಕಲ್ಪ ಯಾತ್ರೆಯಲ್ಲಿ ಕೇಸರಿ ಕಲರವ ಅಭಿವೃದ್ಧಿ ಜೊತೆ ಮತಬೇಟೆಗಿಳಿದ ಬಿಜೆಪಿ ಚಾಣಕ್ಯ ಮುಂಬರುವ ಚುನಾವಣೆಗೆ ಮಂಡ್ಯದಿಂದಲೇ ರಣಕಹಳೆ ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದ ಅಮಿತ್ ಶಾ ರೈತರಿಗೆ ಆದ ಅನ್ಯಾಯಗಳನ್ನು ಬಿಜೆಪಿ ಸರಿಪಡಿಸಿದೆ ರಾಜ್ಯ ಹಾಗೂ ರಾಷ್ಟ್ರದಲ್ಲಿ ಬಿಜೆಪಿ ಅಧಿಕಾರ ಶತಸಿದ್ಧ
ಮಂಡ್ಯದಲ್ಲಿ ಮೆಗಾ ಡೈರಿ ಉದ್ಘಾಟಿಸಿದ ಅಮಿತ್ ಶಾ, ಅಮಿತ್ ಶಾ ಜೊತೆ ವೇದಿಕೆ ಹಂಚಿಕೊಂಡ ದೇವೇಗೌಡ್ರು, ಮದ್ದೂರು ತಾಲೂಕಿನ ಗೆಜ್ಜಲಗೆರೆಯಲ್ಲಿ ನಿರ್ಮಾಣ, ದೀಪ ಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟನೆ, 47 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣವಾಗಿರುವ ಮೆಗಾ ಡೈರಿ,
ಅಮಿತ್ ಶಾ ಸ್ವಾಗತಕ್ಕೆ ಸಕ್ಕರೆನಾಡಿನಲ್ಲಿ ಸಕಲ ಸಿದ್ಧತೆ. ಮಂಡ್ಯ ವಿವಿ ಕಾಲೇಜು ಆವರಣದಲ್ಲಿ ಬೃಹತ್ ವೇದಿಕೆ. ಅಮಿತ್ ಶಾ ಕಾರ್ಯಕ್ರಮಕ್ಕೆ Z+ ಸೆಕ್ಯೂರಿಟಿ. ನಾಡಿದ್ದು ವಿವಿ ಕಾಲೇಜು ಆವರಣದಲ್ಲಿ ಸಮಾವೇಶ.
ಮಂಡ್ಯ ಜಿಲ್ಲೆಯಲ್ಲಿ 7ನೇ ದಿನದ ಪಂಚರತ್ನ ರಥಯಾತ್ರೆ ನಡೀತಿದೆ. ನಾಗಮಂಗಲ ತಾಲೂಕಿನಲ್ಲಿ ಜೆಡಿಎಸ್ ಶಕ್ತಿ ಪ್ರದರ್ಶನ ನಡೆಯಲಿದೆ.. ಬೆಳ್ಳೂರು, TB ಸರ್ಕಲ್, ಭೀಮನಹಳ್ಳಿ, ಕೊಪ್ಪದಲ್ಲಿ ಜಾಥಾ ಸಾಗಲಿದೆ.
Mandya Politics: ಶಕುನಿಗಳ ಮಾತು ಕೇಳುವಂತ ಪ್ರಮೇಯ ನಮಗಿಲ್ಲ. ಅಧಿವೇಶನಕ್ಕೆ ಯಾವಾಗ ಹೋಗಬೇಕು, ಪಕ್ಷ ಹೇಗೆ ಕಟ್ಟಬೇಕು, ಅಭಿವೃದ್ಧಿ ಹೇಗೆ ಮಾಡಬೇಕು ಅನ್ನೋದನ್ನು ಅವರಿಂದ ಕಲಿಯುವ ಅವಶ್ಯಕತೆ ಇಲ್ಲ ಅಂತಾ ಸುರೇಶ್ ಗೌಡ ಹೇಳಿದ್ದಾರೆ.
ಸಕ್ಕರೆನಾಡಲ್ಲಿಂದು 2ನೇ ದಿನದ ಪಂಚರತ್ನ ರಥಯಾತ್ರೆ. ಮದ್ದೂರು ತಾಲೂಕಿನಲ್ಲಿ ದಳಪತಿಗಳ ಶಕ್ತಿ ಪ್ರದರ್ಶನ. ಮಳವಳ್ಳಿ ಮೂಲಕ ಮದ್ದೂರು ತಾಲೂಕಿಗೆ ಪ್ರವೇಶ. ಡಿ.ಸಿ.ತಮ್ಮಣ್ಣ ನೇತೃತ್ವದಲ್ಲಿ ರಥಯಾತ್ರೆಗೆ ಸ್ವಾಗತ.
43ನೇ ದಿನಕ್ಕೆ ಕಾಲಿಟ್ಟ ಮಂಡ್ಯ ರೈತರ ಹೋರಾಟ. ರೈತರಿಂದ ಬೆಂಗಳೂರು-ಮೈಸೂರು ಹೆದ್ದಾರಿ ತಡೆ. ನೃತ್ಯ ಮಾಡಿ ರೈತರಿಂದ ವಿನೂತನ ಪ್ರತಿಭಟನೆ. ಪ್ರತಿಭಟನೆಯಲ್ಲಿ ಅರೆಬೆತ್ತಲೆ ನೃತ್ಯ ಮಾಡಿ ಆಕ್ರೋಶ.
ರೈತರ ನೃತ್ಯ ಪ್ರತಿಭಟನೆಗೆ ಸಾಥ್ ನೀಡಿ ನೃತ್ಯ ಮಾಡುತ್ತ ಹುರಿದುಂಬಿಸಿದ ವಿದ್ಯಾರ್ಥಿಗಳು. ತಮಟೆ ಸದ್ದಿಗೆ ಕಬ್ಬಿನ ಜೊಲ್ಲೆ ಹಿಡಿದು ಕುಣಿದು ರೈತರ ಆಕ್ರೋಶ. ಪ್ರತಿಭಟನೆಯ ಒಂದು ಪ್ರತ್ಯಕ್ಷ ವರದಿ ಇಲ್ಲಿದೆ ನೋಡಿ.
ಪಾಂಡವಪುರ ತಾಲೂಕಿನಲ್ಲಿ ಕಟ್ಟೇರಿ ಗ್ರಾಮದ ಫ್ರೌಡಶಾಲಾ ಹೆಣ್ಣು ಮಕ್ಕಳ ವಸತಿ ನಿಲಯದಲ್ಲಿ ವಸತಿ ಶಾಲೆಯ ಉಸ್ತುವಾರಿ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದ ಶಿಕ್ಷಕ ಚಿನ್ಮಯಾನಂದ, ಹಾಸ್ಟೆಲ್ ವಿದ್ಯಾರ್ಥಿನಿಯರ ಜೊತೆಗೆ ಅಸಭ್ಯವಾಗಿ ವರ್ತಿಸುತ್ತಿದ್ದ. ಮಾತ್ರವಲ್ಲ, ಅವರಿಗೆ ಲೈಂಗಿಕ ಕಿರುಕುಳವನ್ನೂ ನೀಡುತ್ತಿದ್ದ ಎಂದು ತಿಳಿದುಬಂದಿದೆ.
ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ಕಾಂಗ್ರೆಸ್ ಸಿದ್ಧತೆ ಆರಂಭಿಸಿದೆ.. ಈಗಾಗಲೇ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಿದೆ ಎನ್ನಲಾಗ್ತಿದೆ. ಮಂಡ್ಯದ ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಗಳು ಯಾರು..? ಇಲ್ಲಿದೆ ನೋಡಿ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.