ದಿ ಡಿವೈನ್ ಬ್ಲಾಕ್ಬಸ್ಟರ್ ಸಿನಿಮಾ ಕಾಂತಾರ ದೇಶಾದ್ಯಂತ ಸಿನಿ ರಸಿಕರಿಂದ ಅದ್ಬುತ ಪ್ರತಿಕ್ರಿಯೆ ಕನ್ನಡಿಗನ ಚಿತ್ರ. ಇತ್ತೀಚಿಗೆ ಕಾಂತಾರ ಸಿನಿಮಾದಲ್ಲಿ ತೋರಿಸಲಾದ ದೈವದ ಕುರಿತು ಅವಹೇಳನಕಾರಿ ರೀಲ್ಸ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡಲಾಗುತ್ತಿದೆ. ರಿಷಬ್ ಶೆಟ್ಟಿ ನಟನೆಯನ್ನು ಅನುಕರಣೆ ಮಾಡಿ ದೈವವನ್ನು ಅವಹೇಳನ ಮಾಡಲಾಗುತ್ತಿದೆ. ಇದೀಗ ಸಂತಾಕ್ಲಾಸ್ ವೇಷಧಾರಿ ಒಬ್ಬ ಕಾಂತಾರ ಸಿನಿಮಾದ ಕ್ಲೈಮ್ಯಾಕ್ಸ್ ಅನುಕರಣೆ ಮಾಡಿರುವ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
Super Spreader Santa Claus: ಬೆಲ್ಜಿಯಂನ ಆರೈಕೆ ಮನೆಯಲ್ಲಿ ವಾಸಿಸುವ ವೃದ್ಧರನ್ನು ಖುಶಿಕೊಡಲು ವೈದ್ಯರೊಬ್ಬರು ಸಾಂತಾಕ್ಲಾಸ್ ವೇಷ ತೊಟ್ಟು ಆಗಮಿಸಿದ್ದರು. ಆದರೆ ಅವರು ನಿರ್ಗಮಿಸಿದ ನಂತರ 157 ಜನರು ಅನಾರೋಗ್ಯಕ್ಕೆ ಒಳಗಾಗಿದ್ದು, ಅದರಲ್ಲಿ 18 ಮಂದಿ ಮೃತಪಟ್ಟಿದ್ದಾರೆ.
Merry Christmas 2020: ಪ್ರತಿಸಲದಂತೆ ಈ ಬಾರಿಯೂ ಕೂಡ ತಂಪು ಪಾನೀಯ ಕಂಪನಿ ಕೋಕಾ-ಕೋಲಾ ತನ್ನ ಒಂದು ವ್ಯವಹಾರ ಲಾಭಕ್ಕಾಗಿ ಸಾಂಟಾ ಕ್ಲಾಸ್ ಎಂಬ ಪರಿಕಲ್ಪನೆ ಹುಟ್ಟುಹಾಕಿದೆಯೇ ಎಂಬ ಪ್ರಶ್ನೆ ಮತ್ತೊಮ್ಮೆ ಉದ್ಭವಿಸಿದೆ. ಹತ್ತಿರದಿಂದ ನೋಡಿದಾಗ, ನಿಖರವಾಗಿ ಒಂದು ಕೆಂಪು-ಬಿಳಿ ಬಣ್ಣವನ್ನು ಕೋಕಾ-ಕೋಲಾ ಹೆಸರಿನಲ್ಲಿ ಮತ್ತು ಸಾಂತಾ ಅವರ ಬಟ್ಟೆಗಳಲ್ಲಿ ನೀವು ಕಾಣಬಹುದು. ಆದರೆ, ಕೋಕ್ ಕಂಪನಿ ಸಾಂಟಾ ಜೊತೆ ತನ್ನ ಯಾವುದೇ ಸಂಬಂಧವಿಲ್ಲ ಎಂದು ಹೇಳುತ್ತದೆ. ಹಾಗಾದರೆ ಯಾಕೆ ಈ ಎರಡು ಹೆಸರುಗಳಿಗೆ ಪರಸ್ಪರ ಕನೆಕ್ಷನ್ ಕಲ್ಪಿಸಲಾಗುತ್ತದೆ?
ಕ್ರಿಸ್ಮಸ್ ದಿನದಂದು ಕೆಂಪುಬಣ್ಣದ ಬಟ್ಟೆ ತೊಟ್ಟು ಬರುವ ಸಾಂತಾ ಕ್ಲಾಸ್'ಗೆ ಮಕ್ಕಳೆಂದರೆ ಬಲು ಪ್ರೀತಿ. ಅದಕ್ಕಾಗಿಯೇ ಮಕ್ಕಳಿಗಾಗಿ ಸಾಕಷ್ಟು ಉಡುಗೊರೆಗಳು, ಸಿಹಿತಿಂಡಿಗಳನ್ನು ತಂದು ಹಂಚುತ್ತಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.