ಸ್ಯಾಂಡಲ್ವುಡ್ ನಟ ದರ್ಶನ್ ಅವರ ಮೇಲೆ ನಡೆದ ಅಮಾನವೀಯ ಘಟನೆ ಚಂದನವದ ಕಲಾದರ ಮನಸ್ಸಿಗೆ ನೋವುಂಟು ಮಾಡಿದೆ. ಮೊನ್ನೆ ಸುದೀಪ್ ಅವರು ದರ್ಶನ ಅವರ ಪರ ನಿಂತು ಅಭಿಮಾನಿಗಳಿಗೆ ಬುದ್ದಿಮಾತು ಹೇಳುವ ಕೆಲಸ ಮಾಡಿದ್ದರು. ಇದೀಗ ದೊಡ್ಮನೆ ಕುಡಿ ನಟ ಯುವ ರಾಜಕುಮಾರ ಅವರು ಹೊಸಪೇಟೆಯಲ್ಲಿ ನಡೆದ ಘಟನೆ ಕುರಿತು ಮೌನ ಮುರಿದಿದ್ದಾರೆ.
Vedha kannada movie: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 125ನೇ ಚಿತ್ರ ವೇದ ರಿಲೀಸ್ ಆಗಿದೆ. ಗೀತಾ ಶಿವರಾಜಕುಮಾರ್ ಹಾಗೂ ಜೀ ಸ್ಟುಡಿಯೋಸ್ ನಿರ್ಮಿಸಿರುವ, ಎ.ಹರ್ಷ ನಿರ್ದೇಶನದಲ್ಲಿ ಶಿವರಾಜಕುಮಾರ್ ನಾಯಕರಾಗಿ ನಟಿಸಿರುವ ಬಹು ನಿರೀಕ್ಷಿತ "ವೇದ" ಚಿತ್ರ ಇಂದು ಬೆಳ್ಳಿತೆರೆಗೆ ಅಪ್ಪಳಿಸಿದೆ.
Vedha Movie : ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಚಿತ್ರಕ್ಕೆ ಸ್ವಾಮಿ ಜೆ ಗೌಡ ಛಾಯಾಗ್ರಹಣ, ದೀಪು ಎಸ್ ಕುಮಾರ್ ಸಂಕಲನ ಹಾಗೂ ರವಿವರ್ಮ, ವಿಕ್ರಮ್ ಮೋರ್, ಚೇತನ್ ಡಿಸೋಜ , ಅರ್ಜುನ್ ರಾಜ್ ಸಾಹಸ ನಿರ್ದೇಶನವಿದೆ.
ವೀರ ಕನ್ನಡಿಗ, ಶಾಂತಿಯ ಪ್ರತೀಕ, ಅಜಾತಶತ್ರು, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಒಳ್ಳೆಯತನಕ್ಕೆ ಹಿಡಿದ ಕೈಗನ್ನಡಿಯಾಗಿದ್ದರು. ಇಂದಿಗೂ ರಾಜವಂಶದ ಕುಡಿ ಕನ್ನಡಿಗರ ಹೃದಯದಲ್ಲಿ ಅಜರಾಮರ. ಅಪ್ಪು ತಮ್ಮ ಅಭಿಮಾನಿಗಳಿಗೆ ಸದಾ ಖುಷ್ ಖುಷಿಯಾಗಿ ಯಾರಿಗೂ ನೋವುಂಟು ಮಾಡದಂತೆ ಇರಲು ಹೇಳುತ್ತಿದ್ರು. ಆದ್ರೆ ಇದೀಗ ಅಂತಹ ಯುವರತ್ನನ ಅಭಿಮಾನಿಗಳು ದರ್ಶನ್ ಅವರ ಮೇಲೆ ಚಪ್ಪಲಿ ಎಸೆದು ಅವಮಾನ ಮಾಡುವ ಮಟ್ಟಕ್ಕೆ ಇಳಿದ್ರಾ ಎನ್ನುವ ಅನುಮಾನ ಕಾಡುತ್ತಿದೆ.
ShivaRajkumar on slipper hurled at Darshan : ರಾಜ್ ಕುಟುಂಬದ ಅಭಿಮಾನಿಗಳು ಈ ರೀತಿ ಮಾಡಲ್ಲ, ಯಾರೋ ಕಿಡಿಗೇಡಿಗಳು ಈ ಕೆಲಸ ಮಾಡಿದ್ದಾರೆ ಎಂದು ಶಿವರಾಜ್ಕುಮಾರ್, ರಾಘಣ್ಣ ಮತ್ತು ಅಪ್ಪು ಫ್ಯಾನ್ಸ್ ವಾದಿಸುತ್ತಿದ್ದಾರೆ. ಈ ಕುರಿತಾಗಿ ಶಿವರಾಜ್ಕುಮಾರ್ ಅವರ ಬಳಿ ಕೆಲ ಅಭಿಮಾನಿಗಳು ದಯವಿಟ್ಟು ಇದರ ಕುರಿತು ಮಾತನಾಡಿ ಎಂದು ಮನವಿ ಮಾಡಿದ್ದರು. ಈ ಬೆನ್ನಲ್ಲೇ ಶಿವರಾಜ್ಕುಮಾರ್ ಪ್ರತಿಕ್ರಿಯಿಸಿದ್ದಾರೆ.
Darshan : ಕ್ರಾಂತಿ ಚಿತ್ರದ ಎರಡನೇ ಸಾಂಗ್ ಬೊಂಬೆ ಬೊಂಬೆ ಹಾಡು ರಿಲೀಸ್ ಕಾರ್ಯಕ್ರಮ ಸರಾಗವಾಗಿ ಆರಂಭವಾಯಿತು. ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ ಎನ್ನುವ ಬೆನ್ನಲ್ಲೇ ಕಿಡಿಗೇಡಿಯೊಬ್ಬ ವೇದಿಕೆ ಮೇಲಿದ್ದ ನಟ ದರ್ಶನ್ ಅವರ ಮೇಲೆ ಚಪ್ಪಲಿ ಬಿಸಾಡಿದ್ದಾನೆ. ಈ ಘಟನೆ ಡಿ ಬಾಸ್ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ.
ಸ್ಯಾಂಡಲ್ವುಡ್ನ ಬಹುನಿರೀಕ್ಷಿತ ಸಿನಿಮಾ ʼವೇದʼ ಪ್ರಚಾರದಲ್ಲಿ ಡಾ. ಶಿವರಾಜ್ ಕುಮಾರ್ ಅವರು ಬ್ಯುಸಿಯಾಗಿದ್ದಾರೆ. ಮೊನ್ನೆ ತಾನೆ ಮಂತ್ರಾಲಯಕ್ಕೆ ಭೇಟಿ ನೀಡಿ ಗುರು ರಾಘವೇಂದ್ರ ಸ್ವಾಮೀಯ ಆರ್ಶಿವಾದ ಪಡೆದಿದ್ದರು. ಇಂದು ಹುಬ್ಬಳ್ಳಿಗೆ ಬೇಟಿ ನೀಡಿದ ಶಿವಣ್ಣ ಗುರು ಸಿದ್ಧಾರೂಢರ ದರ್ಶನ ಪಡೆದರು. ಅಲ್ಲದೆ, ಹುಬ್ಬಳ್ಳಿ ಅಂದ್ರೆ ತಮಗೆ ಲಕ್ಕಿ ಪ್ಲೇಸ್ ಅಂತ ಹೇಳಿದರು.
ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಮತ್ತು ಪವರ್ ಸ್ಟಾರ್ ಪುನೀತ್ರಾಜಕುಮಾರ ಅವರ ನಡುವೆ ಇದ್ದ ಪ್ರೀತಿ ಅದ್ಭುತ. ಅಣ್ಣ ತಮ್ಮಂದಿರು ಅಂದ್ರೆ ಇವರಂತಿರಬೇಕು ಅಂತ ಕರುನಾಡಿನ ಜನ ಹೇಳುವಂತಿತ್ತು. ಇಂದಿಗೂ ಅಪ್ಪು ಇಲ್ಲ ಎನ್ನುವ ಗುಂಗಿನಿಂದ ಶಿವಣ್ಣ ಹೊರ ಬಂದಿಲ್ಲ. ಇದೀಗ ಮತ್ತೆ ಅಪ್ಪು ಅವರನ್ನು ನೆನೆದು ಶಿವಣ್ಣ ಬಾವುಕರಾದ ಪ್ರಸಂಗ ಜೀ ವೇದಿಕೆಯ ಮೇಲೆ ನಡೆಯಿತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.