SIIMA 2022 : ಪುನೀತ್ ರಾಜ್ಕುಮಾರ್ ನೆನಪಲ್ಲಿ ಈ ಬಾರಿಯ ಸೈಮಾ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯುತ್ತಿದೆ. ಸೈಮಾ ಅವಾರ್ಡ್ ಕಾರ್ಯಕ್ರಮದಲ್ಲಿ ಪುನೀತ್ ನೆನೆದು ಶಿವರಾಜ್ ಕುಮಾರ್ ಕಣ್ಣೀರು ಹಾಕಿದ್ದಾರೆ.
ಕನ್ನಡಿಗರಿಗೆ ನೂರಾರು ಸಿನಿಮಾಗಳನ್ನು ಕಾಣಿಕೆಯಾಗಿ ನೀಡಿ, ಕೋಟಿ ಕೋಟಿ ಅಭಿಮಾನಿಗಳ ಮನರಂಜಿಸಿ, ಕನ್ನಡಿಗರ ಹೃದಯವನ್ನು ಗೆದ್ದಿರುವ ದೊಡ್ಮನೆಯ ಹಿರಿಯ ಪುತ್ರ ಹಾಗೂ ಕನ್ನಡಿಗರ ಪ್ರೀತಿಯ ನಟ ಶಿವಣ್ಣ ಅಭಿನಯದ 'ಬೈರಾಗಿ' ಸಿನಿಮಾ ಅದ್ಧೂರಿಯಾಗಿ ರಿಲೀಸ್ ಆಗಿತ್ತು. 'ಬೈರಾಗಿ' ಎಲ್ಲೆಲ್ಲೂ ದೊಡ್ಡ ಸದ್ದು ಮಾಡುವ ಜೊತೆಗೆ, ಬಾಕ್ಸ್ ಆಫಿಸ್ ಅಲ್ಲೂ ಸದ್ದು ಮಾಡಿತ್ತು. ಇದೀಗ 'ಬೈರಾಗಿ' ಸಿನಿಮಾ ಸಂಬಂಧ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ.
ಕೊರೊನಾ ಹಾಗೂ ಅಪ್ಪು ಅಗಲಿಕೆಯಿಂದ ಕನ್ನಡ ಚಿತ್ರರಂಗದ ಬಣ್ಣ ಮಾಸಿತ್ತು. ಆದರೆ ಈಗ ಮತ್ತೆ ಕನ್ನಡ ಚಿತ್ರರಂಗ ಸಿಂಗಾರಗೊಂಡು ಒಂದೇ ಸೂರಿನಡಿ ಇಂಡಸ್ಟ್ರಿಯ ಎಲ್ಲರೂ ಕಾಣಿಸಿಕೊಳ್ಳುವ ಶುಭ ಸೂಚನೆ ಸಿಕ್ಕಿದೆ.
60ನೇ ವಸಂತಕ್ಕೆ ಕಾಲಿಟ್ಟ ಹ್ಯಾಟ್ರಿಕ್ ಹೀರೋ ಶಿವಣ್ಣನಿಗೆ ಕನ್ನಡಿಗರಿಂದ ಪ್ರೀತಿಯ ಶುಭ ಹಾರೈಕೆಗಳು. ಅಪ್ಪು ಇಲ್ಲವೆಂಬ ಬೇಸರದ ನಡುವೆ ನಟ ಶಿವಣ್ಣ ಹುಟ್ಟುಹಬ್ಬವನ್ನ ಸರಳವಾಗಿ ಆಚರಿಸಿಕೊಂಡಿದ್ದಾರೆ.
ಶಿವರಾಜ್ ಕುಮಾರ್ ಅವರ ನಿಜವಾದ ಹೆಸರು ಬೇರೆಯೇ ಆಗಿದೆ. ಪಾಸ್ ಪೋರ್ಟ್, ಬ್ಯಾಂಕ್ ಅಕೌಂಟ್, ಸರಕಾರಿ ದಾಖಲಾತಿಗಳಲ್ಲಿ ಅವರ ನಿಜವಾದ ಹೆಸರನ್ನೇ ಬಳಸುತ್ತಾರೆ. ಈ ವಿಷಯವನ್ನು ಸ್ವತಃ ಶಿವರಾಜ್ ಕುಮಾರ್ ಅವರೇ ಬಹಿರಂಗ ಪಡಿಸಿದ್ದಾರೆ.
ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿರುವ ರಾಕ್ ಲೈನ್ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ರಾಕ್ ಲೈನ್ ವೆಂಕಟೇಶ್ ಅವರು ನಿರ್ಮಿಸುತ್ತಿರುವ "ಪ್ರೊಡಕ್ಷನ್ ನಂ 47" ಚಿತ್ರದ ಮುಹೂರ್ತ ಸಮಾರಂಭ ರಾಕ್ ಲೈನ್ ಸ್ಟುಡಿಯೋದಲ್ಲಿ ನಡೆಯಿತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.