ಯೋಗರಾಜ್ ಭಟ್ರ ನಿರ್ದೇಶನದಲ್ಲಿ,ಶಿವಣ್ಣ ಮತ್ತು ಪ್ರಭುದೇವ್ ನಟನೆಯ ಇನ್ನೂ ಹೆಸರಿಡದ ಸಿನಿಮಾದ ಮುಹೂರ್ತ ಬೆಂಗಳೂರಿನಲ್ಲಿ ನಡೆಯಿತು.ಸಿನಿಮಾ ಬಗ್ಗೆ ಶಿವಣ್ಣ,ಯೋಗರಾಜ್ ಭಟ್ರು,ರಾಕ್ ಲೈನ್ ವೆಂಕಟೇಶ್ ಹೇಳಿದ್ದೇನು..ನೀವೇ ನೋಡಿ
ಯೋಗರಾಜ್ ಭಟ್ರ ನಿರ್ದೇಶನದಲ್ಲಿ, ಶಿವಣ್ಣ ಮತ್ತು ಪ್ರಭುದೇವ್ ನಟನೆಯ ಇನ್ನೂ ಹೆಸರಿಡದ ಸಿನಿಮಾದ ಮುಹೂರ್ತ ಬೆಂಗಳೂರಿನಲ್ಲಿ ನಡೆಯಿತು. ಸಿನಿಮಾ ಬಗ್ಗೆ ಶಿವಣ್ಣ,ಯೋಗರಾಜ್ ಭಟ್ರು,ರಾಕ್ ಲೈನ್ ವೆಂಕಟೇಶ್ ಹೇಳಿದ್ದೇನು..ನೀವೇ ನೋಡಿ
Vedha Teaser: ಸೆಂಚೂರಿ ಸ್ಟಾರ್ ಶಿವರಾಜ್ ಕುಮಾರ್ ನಟನೆಯ 125ನೇ ಚಿತ್ರ ಸಿದ್ಧವಾಗುತ್ತಿದೆ. ಮಾಸ್ ಲುಕ್ನಿಂದಲೇ ಅಭಿಮಾನಿಗಳ ಮನಗೆದ್ದ ಶಿವಣ್ಣ, ದೊಡ್ಮನೆಯ ಹಿರಿಯ ಪುತ್ರ. ಈಗಾಗಲೇ 124 ಸಿನಿಮಾಗಳಲ್ಲಿ ಅಭಿನಯಿಸಿರುವ ಶಿವರಾಜ್ ಕುಮಾರ್ ಅವರಿಗೆ ಬಹುದೊಡ್ಡ ಅಭಿಮಾನಿ ಬಳಗವಿದೆ.
ಪಾರ್ವತಮ್ಮ ರಾಜ್ ಕುಮಾರ್ ಕನ್ನಡ ಚಿತ್ರರಂಗದ ಬೆನ್ನೆಲುಬಾಗಿದ್ದರು. ಅವರ ರೀತಿ ಗೀತಾ ಪಿಕ್ಚರ್ ದೊಡ್ಡ ಮಟ್ಟಕ್ಕೆ ಬೆಳೆಯಲಿ ಎಂದು ನಟ, ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಶುಭ ಹಾರೈಸಿದ್ದಾರೆ.
ವೇದ... ಶಿವಣ್ಣ ಅಭಿನಯದ 125ನೇ ಚಿತ್ರ. ಬುಧವಾರ ಸಿನಿಮಾದ ಟೀಸರ್ ಹಾಗೂ ಮೋಷನ್ ಪೋಸ್ಟರ್ ರಿಲೀಸ್ ಆಗಿದೆ. ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್ನ ವೈಟ್ ಪೆಟಲ್ಸ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೀತಾ ಶಿವರಾಜ್ ಕುಮಾರ್ ನಿರ್ಮಾಣದ ಚೊಚ್ಚಲ ಚಿತ್ರದ ಟೀಸರ್ ಹಾಗೂ ಮೋಷನ್ ಪೋಸ್ಟರ್ ರಿಲೀಸ್ ಮಾಡಲಾಯ್ತು.. ಇದೇ ವೇಳೆ ಮಾತನಾಡಿದ ನಟ ಶಿವರಾಜ್ ಕುಮಾರ್, ನನ್ನ ಯಶಸ್ಸಿಗೆ ಕುಟುಂಬ, ಇಡೀ ಚಿತ್ರರಂಗ ಕಾರಣ.. ಇನ್ನು ನಿರ್ಮಾಪಕರು ನನ್ನನ್ನು ಯಾವಾಗಲು ಬ್ಯುಸಿಯಾಗಿ ಇಟ್ಟಿದ್ದಾರೆ. ಅವರಿಗೆ ನನ್ನ ಸಲಾಂ ಅಂತಾ ಹೇಳಿದ್ರು.
ಶಿವಣ್ಣನ ಸಕ್ಸಸ್ ಹಿಂದೆ ಇರೋದು ಗೀತಕ್ಕ ಎಂದು ನಟ ದುನಿಯಾ ವಿಜಯ್ ಹೇಳಿದ್ದಾರೆ.. ಶಿವರಾಜ್ ಕುಮಾರ್ ಅಭಿನಯದ 125ನೇ ಚಿತ್ರ ವೇದ ಟೀಸರ್ ಹಾಗೂ ಮೋಷನ್ ಪೋಸ್ಟರ್ ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ ದುನಿಯಾ ವಿಜಯ್, ಮುಂದೆ ಸಿನಿಮಾ ಮಾಡೋವಾಗ ನನ್ನನ್ನೂ ಸೇರಿಸಿ ಎಂದು ನಿರ್ದೇಶಕ ಹರ್ಷನಿಗೆ ಹೇಳಿದ್ದೇನೆ ಅಂತಾ ಹೇಳಿದ್ರು..
ಶಿವಣ್ಣ ಹಿಂದಿನ ಶಕ್ತಿ ಕುಟುಂಬ ಹಾಗೂ ಅಭಿಮಾನಿಗಳು ಎಂದು ಗೀತಾ ಶಿವರಾಜ್ ಕುಮಾರ್ ಹೇಳಿದ್ದಾರೆ.. ವೇದ ಸಿನಿಮಾದ ಟೀಸರ್, ಮೋಷನ್ ಪೋಸ್ಟರ್ ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಗೀತಾ ಶಿವರಾಜ್ ಕುಮಾರ್, ಇಡೀ ಕುಟುಂಬ ಶಿವರಾಜ್ ಕುಮಾರ್ ಹಿಂದಿರೋದ್ರಿಂದ ನಾವು ಇಲ್ಲಿಯವರೆಗೆ ಬಂದಿದ್ದೇವೆ. ವೇದ ನಮ್ಮ ಚಿತ್ರ ಅಲ್ಲ ನಿಮ್ಮೆಲ್ಲರ ಚಿತ್ರ ಅಂತಾ ಗೀತಾ ಶಿವರಾಜ್ ಕುಮಾರ್ ಹೇಳಿದ್ದಾರೆ.
ಕನ್ನಡದ ಸೆಂಚ್ಯೂರಿ ಸ್ಟಾರ್ ಶಿವರಾಜ್ಕುಮಾರ್ ಅವರು ಸೂಪರ್ಸ್ಟಾರ್ ರಜನಿಕಾಂತ್ ಅವರ ತಲೈವರ್ 169 ಚಿತ್ರತಂಡವನ್ನು ಸೇರಿಕೊಂಡಿದ್ದಾರೆ. ನೆಲ್ಸನ್ ದಿಲೀಪ್ಕುಮಾರ್ ನಿರ್ದೇಶನದ ಈ ಚಿತ್ರದ ಶೂಟಿಂಗ್ ಆಗಸ್ಟ್ನಲ್ಲಿ ಪ್ರಾರಂಭವಾಗುವ ಸಾಧ್ಯತೆಯಿದೆ.
ಕ್ರೇಜಿ಼ಸ್ಟಾರ್ ವಿ.ರವಿಚಂದ್ರನ್ ಅವರ ದ್ವಿತೀಯ ಪುತ್ರ ವಿಕ್ರಮ್ ನಟಿಸಿರುವ 'ತ್ರಿವಿಕ್ರಮ' ಜೂನ್ 24ರಂದು ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ವಿಕ್ಕಿ ನಾಯಕ ನಟನಾಗಿ ಎಂಟ್ರಿ ಕೊಡುತ್ತಿರುವ ಚೊಚ್ಚಲ ಸಿನಿಮಾ ಇದಾಗಿದ್ದು, ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ಪ್ರಾರಂಭದಿಂದಲೂ ಈ ಚಿತ್ರಕ್ಕೆ ಚಂದನವನದ ತಾರೆಯರು ಸಾಥ್ ನೀಡಿದ್ದಾರೆ. ಇದೀಗ ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಸಹ 'ತ್ರಿವಿಕ್ರಮ'ನಿಗೆ ಸಾಥ್ ನೀಡಿದ್ದಾರೆ.
ಸಚಿನ್ ರವಿ ನಿರ್ದೇಶನ ಮಾಡಲಿರುವ ಮುಂದಿನ ಸಿನಿಮಾದಲ್ಲಿ ಶಿವಣ್ಣ ಮಹಾಭಾರತದ ಅಶ್ವತ್ಥಾಮನಾಗಿ ಬಣ್ಣ ಹಚ್ಚಲಿದ್ದು, ಇದೊಂದು ಆಕ್ಷನ್ ಪ್ಯಾಕ್ಡ್ ಸ್ಪೈ ಥ್ರಿಲ್ಲರ್ ಕಥಾಹಂದರವನ್ನು ಒಳಗೊಂಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.