ವಿದ್ಯುನ್ಮಾನವಾಗಿ ಹರಡುವ ಅಂಚೆ ಬ್ಯಾಲೆಟ್ ವ್ಯವಸ್ಥೆ (ETPBS) ಮೂಲಕ ಭಾರತದಿಂದ ಹೊರಗಡೆ ವಾಸಿಸುವ ಜನರು ಮತ ಚಲಾಯಿಸಲು ಸಾಧ್ಯವಿದೆಯೇ ಎಂದು ವರದಿಗಾರರು ಕೇಳಿದ ಪ್ರಶ್ನೆಗೆ ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ ಅವರು ಉತ್ತರಿಸಿದರು.
ರೊಮೇನಿಯಾದ ಅಧ್ಯಕ್ಷ ಲಾನ್ ಮಿಂಕು ರಾಡುಲೆಸ್ಕ್ ಅವರ ಬಳಿಕ ಸುನಿಲ್ ಅರೋರಾ ಅವರು ಎರಡು ವರ್ಷಗಳ ಅವಧಿಗೆ ಎ-ವೆಬ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ ಎಂದು ಚುನಾವಣಾ ಆಯೋಗದ ಹೇಳಿಕೆ ತಿಳಿಸಿದೆ.
ವಿದ್ಯುನ್ಮಾನ ಮತ ಯಂತ್ರವನ್ನು (ಇವಿಎಂ) ತಾಂತ್ರಿಕ ತೊಂದರೆಗಳಿಂದ ರಕ್ಷಿಸಲು ತೆಗೆದುಕೊಂಡ ಕ್ರಮಗಳನ್ನು ಉಲ್ಲೇಖಿಸಿ, ಅರೋರಾ "ಈ ಯಂತ್ರವು ಅತ್ಯಂತ ಪ್ರಬಲ ತಾಂತ್ರಿಕ ಭದ್ರತಾ ಕ್ರಮಗಳೊಂದಿಗೆ ದೇಶದ ರಕ್ಷಣಾ ಇಲಾಖೆಗೆ ಸಾಕಷ್ಟು ಶ್ರಮಿಸಿರುವ ಎರಡು ಸಾರ್ವಜನಿಕ ಕಂಪನಿಗಳಿಂದ ಮಾಡಲ್ಪಟ್ಟಿದೆ"
23 ನೇ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಆಗಿ ಸುನಿಲ್ ಅರೋರಾ ಇಂದು ಅಧಿಕಾರ ವಹಿಸಲಿದ್ದಾರೆ. ಶನಿವಾರದಂದು ಓಂ ಪ್ರಕಾಶ್ ರಾವತ್ ಅವರು ನಿವೃತ್ತರಾದ ಹಿನ್ನಲೆಯಲ್ಲಿ ಈಗ ನೂತನ ಆಯುಕ್ತರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ಸುನೀಲ್ ಅರೋರಾ ಅವರು 1980 ರ ಬ್ಯಾಚ್ ರಾಜಸ್ಥಾನ್ ಕೇಡರ್ನ ಐಎಎಸ್ ಅಧಿಕಾರಿ. ಅವರು ಹಣಕಾಸು, ಜವಳಿ ಮತ್ತು ಯೋಜನೆ ಆಯೋಗದಂತಹ ಸಚಿವಾಲಯ ಮತ್ತು ಇಲಾಖೆಗಳಲ್ಲಿ ವಿವಿಧ ಸ್ಥಾನಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.