IRCTC Special package :ಈ ಪ್ರವಾಸದ ಪ್ಯಾಕೇಜ್ ಮೂಲಕ ತಿರುಮಲಕ್ಕೆ ಸ್ಪೆಷಲ್ ಎಂಟ್ರಿ ಅವಕಾಶವನ್ನು ನೀಡುತ್ತದೆ. ತಿರುಮಲ ದರ್ಶನದ ಹೊರತಾಗಿ ಕಾಣಿಪಾಕಂ, ಶ್ರೀನಿವಾಸ ಮಂಗಪುರಂ, ಶ್ರೀಕಾಳಹಸ್ತಿ, ತಿರುಚಾನೂರಿಗೆ ಭೇಟಿ ನೀಡುವ ಅವಕಾಶವಿದೆ.
ಬಹುನಿರೀಕ್ಷಿತ ʻಕಬ್ಜʼ ಸಿನಿಮಾ ನಾಳೆ ರಿಲೀಸ್ ಆಗ್ತಿದೆ. ಇಷ್ಟುದಿನ ಭರ್ಜರಿ ಪ್ರಚಾರ ಮಾಡಿದ ಸಿನಿತಂಡ ಇದೀಗ ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ತೆರಳಿದ್ದಾರೆ. ನಾಳೆ ಸಿನಿಮಾ ಬಿಡುಗಡೆ ಹಿನ್ನೆಲೆ ಇಂದು ನಿರ್ದೇಶಕ ಆರ್.ಚಂದ್ರು, ನಟ ಉಪೇಂದ್ರ ಸೇರಿದಂತೆ ಕಬ್ಜ ಟೀಂ ತಿರುಪತಿಗೆ ತೆರಳಿದ್ದಾರೆ.
D Boss : ಪ್ರತಿಯೊಬ್ಬರು ಒಂದೊಂದು ದೇವರನ್ನು ನಂಬುತ್ತಾರೆ. ಹಾಗೆಯೇ ನಟ ದರ್ಶನ್ ಕೂಡ ತಿರುಪತಿ ತಿಮ್ಮಪ್ಪನನ್ನು ಹೆಚ್ಚು ನಂಬುತ್ತಾರೆ. ಅಲ್ಲದೆ ಅವರು ಆಗಾಗ ಬಿಡುವಿನ ಸಮಯದಲ್ಲಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯವುದು ಎಲ್ಲರಿಗೂ ತಿಳಿದಿರೋ ವಿಷಯ. ಈಗ ಮತ್ತೆ ದರ್ಶನ್ ತಮ್ಮ ಆಪ್ತರಂದಿಗೆ ತಿರುಪತಿ ದರ್ಶನ ಪಡೆದಿದ್ದಾರೆ.
ಅತಿಥಿ ಗೃಹಗಳು ಮತ್ತು ಕಾಟೇಜ್ಗಳ ಬಾಡಿಗೆ ದರದಲ್ಲಿನ ಈ ಹೆಚ್ಚಳಕ್ಕೆ ಸಂಬಂಧಿಸಿದಂತೆ ಇದೀಗ ಹೊಸ ವಿವಾದ ಹುಟ್ಟಿಕೊಂಡಿದೆ. ಅತಿಥಿ ಗೃಹಗಳು ಮತ್ತು ಕಾಟೇಜ್ಗಳ ಬಾಡಿಗೆ ದರವನ್ನು 10 ಪಟ್ಟು ಹೆಚ್ಚಿಸಲಾಗಿದೆ.
ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಸಚಿವ ಅಶ್ವತ್ಥ್ ನಾರಾಯಣ ಬೆಂಗಳೂರಿನ ಟಿಟಿಡಿ ದೇಗುಲಕ್ಕೆ ಭೇಟಿ ನೀಡಿದ್ದು ವೆಂಕಟೇಶ್ವರನಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.
ಮದುವೆಯಾದ ತಕ್ಷಣವೇ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಜೋಡಿ ವಿವಾದಕ್ಕೆ ಒಳಗಾಗಿತ್ತು. ನಯನತಾರಾ ಚಪ್ಪಲಿ ಹಾಕಿಕೊಂಡು ದೇವಸ್ಥಾನದ ಪ್ರಾಂಗಣ ಪ್ರವೇಶಿಸಿದ್ದು ವಿವಾದಕ್ಕೆ ಕಾರಣವಾಗಿತ್ತು.
MP Subhash Chandra Visits Tirumala: ರಾಜ್ಯಸಭಾ ಸದಸ್ಯರು ಹಾಗೂ ಜೀ ಗ್ರೂಪ್ ಸಂಸ್ಥಾಪಕರೂ ಆದ ಡಾ. ಸುಭಾಷ್ ಚಂದ್ರ ಅವರು ಗುರುವಾರ ಬೆಳಗ್ಗೆ ತಿರುಮಲ ತಿರುಪತಿ ದೇವಸ್ಥಾನಕ್ಕೆ ಆಗಮಿಸಿ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದರು.
TTD Sarvadarshan Tickets- ಏಕಾದಶಿ ನಿಮಿತ್ತ ವೈಕುಂಠ ದ್ವಾರ ದರ್ಶನಕ್ಕಾಗಿ ಜನವರಿ 13 ರಿಂದ ಜನವರಿ 22ರವರೆಗೆ ದಿನಕ್ಕೆ 5 ಸಾವಿರ ಟೋಕನ್ ನೀಡಲಾಗುವುದು. ಉಳಿದ ದಿನಗಳಲ್ಲಿ ದಿನಕ್ಕೆ 10 ಸಾವಿರ ಟೋಕನ್ ನೀಡಲಾಗುವುದು. ಭಕ್ತರು ಈ ಬಗ್ಗೆ ಗಮನಹರಿಸಬೇಕು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆಂಧ್ರಪ್ರದೇಶದಲ್ಲಿ ನಿರಂತರ ಮಳೆಯಿಂದಾಗಿ 17 ಜನರು ಸಾವನ್ನಪ್ಪಿದ್ದಾರೆ ಮತ್ತು 100 ಕ್ಕೂ ಹೆಚ್ಚು ಜನರು ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾರೆ ಎಂದು ವರದಿಯಾಗಿದೆ.ದೇವಾಲಯದ ಪಟ್ಟಣವಾದ ತಿರುಪತಿಯ ದೃಶ್ಯಗಳು ನೂರಾರು ಯಾತ್ರಾರ್ಥಿಗಳು ಬೃಹತ್ ಪ್ರವಾಹದಲ್ಲಿ ಸಿಲುಕಿರುವುದನ್ನು ತೋರಿಸುತ್ತವೆ.
Tirumala Tirupati Temple Sarva Darshan Tickets: ಸಾಮಾನ್ಯ ಯಾತ್ರಿಕರಿಗೆ ಪ್ರಮುಖ ಪರಿಹಾರವಾಗಿ, ತಿರುಮಲ ತಿರುಪತಿ ದೇವಸ್ಥಾನಗಳು (ಟಿಟಿಡಿ) ಬುಧವಾರ ಸೆಪ್ಟೆಂಬರ್ 26 ರಿಂದ ವಿಶೇಷ ಪ್ರವೇಶ ದರ್ಶನ (ಎಸ್ಇಡಿ) ಟೋಕನ್ಗಳಿಗೆ ಸಮನಾಗಿ ದಿನಕ್ಕೆ 8,000 ಸ್ಲಾಟ್ ಸರ್ವ ದರ್ಶನ (ಎಸ್ಎಸ್ಡಿ) ಟೋಕನ್ಗಳನ್ನು ನೀಡಲು ನಿರ್ಧರಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.