ನವದೆಹಲಿ : ಇತ್ತೀಚಿನ ದಿನಗಳಲ್ಲಿ ಫೋನ್ ಕರೆಗಳಿಗಿಂತ ವಾಟ್ಸ್ಆ್ಯಪ್ ಮೆಸೇಜ್ (Whatsaap message) ಮೂಲಕವೇ ಕೆಲಸ ನಡೆದು ಹೋಗುತ್ತದೆ. ಆದರೆ ಕೆಲವೊಮ್ಮೆ ಟೈಪ್ ಮಾಡುವುದಕ್ಕೂ ಮನಸ್ಸಿರದೆ ಇರಬಹುದು. ಅದರಲ್ಲೂ ದೊಡ್ಡ ದೊಡ್ಡ ಸಂದೇಶಗಳನ್ನು ಕಳುಹಿಸಬೇಕಾದ ಸಂದರ್ಭ ಬಂದಾಗ ಏನು ಮಾಡಬಹುದು. ಈ ಸಂದರ್ಭದಲ್ಲಿ, ಕರೆ ಮಾಡಿಯೇ ಮಾತನಾಡಬೇಕು ಎಂದು ನೀವೆಂದು ಕೊಂಡರೆ ಅದು ತಪ್ಪು. ಟೈಪ್ ಮಾಡದೆಯೇ ಮೆಸೇಜ್ (Message without typing) ಕಳುಹಿಸಬಹುದು. ಕೇಳುವುದಕ್ಕೆ ವಿಚಿತ್ರ ಎನಿಸಿದರೂ ಈ ಟ್ರಿಕ್ ತಿಳಿದುಕೊಂದರೆ, ಟೈಪ್ ಮಾಡದೆ ಸುಲಭವಾಗಿ ಸಂದೇಶವನ್ನು ಕಳುಹಿಸಿ ಬಿಡಬಹುದು.
ಟೈಪ್ ಮಾಡದೆ ಈ ರೀತಿಯ ವಾಟ್ಸಾಪ್ ಸಂದೇಶಗಳನ್ನು ಕಳುಹಿಸಿ
1. ವಾಟ್ಸಾಪ್ (whatsapp) ಓಪನ್ ಮಾಡಿ, ಮೊದಲು ಯಾರಿಗೆ ಸಂದೇಶವನ್ನು ಕಳುಹಿಸಬೇಕೋ ಆ ವ್ಯಕ್ತಿಯ ಚಾಟ್ ಅನ್ನು ತೆರೆಯಿರಿ.
2. ಕೀಬೋರ್ಡ್ ಒಪನ್ ಮಾಡಿದ ನಂತರ, ಮೈಕ್ರೊಫೋನ್ (Microphone)ಆಯ್ಕೆ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದರೆ ಮೈಕ್ರೊಫೋನ್ ಆಕ್ಟಿವ್ ಆಗುತ್ತದೆ.
ಇದನ್ನೂ ಓದಿ : Vi App ಮೂಲಕವೂ COVID 19 ಲಸಿಕೆಯ ಸ್ಲಾಟ್ ಬುಕ್ ಮಾಡಬಹುದು, ಹೇಗೆ ತಿಳಿಯಿರಿ
3. ಕ್ಯಾಮೆರಾ ಐಕಾನ್ ಬಳಿ ಇರುವ ಆಪ್ಶನ್ ಇದಲ್ಲ ಎನ್ನುವುದು ಗೊತ್ತಿರಲಿ. ಅದರ ಕೆಳಗೆ ಕೂಡ ಐಕಾನ್ ಇದೆ. ಇಲ್ಲಿ ಈ ಫೀಚರ್ ಕಾರ್ಯನಿರ್ವಹಿಸುತ್ತದೆ.
4. GIF ಬಳಿ ಪ್ಲಸ್ ಚಿಹ್ನೆ ಬರುತ್ತದೆ, ಅಲ್ಲಿ ನಿಮಗೆ ಈ ಮೈಕ್ರೊಫೋನ್ ಕಾಣಿಸುತ್ತದೆ .
5. ಈ ಮೈಕ್ರೊಫೋನ್ (microphone) ಮೂಲಕ ನೀವು ಏನು ಹೇಳಿದರೂ ಟೈಪ್ ಆಗಲು ಪ್ರಾರಂಭಿಸುತ್ತದೆ.
ಮ್ಯೂಟ್ ಮಾಡಿ ವೀಡಿಯೊವನ್ನು ಕಳುಹಿಸಬಹುದು :
ವಾಟ್ಸಾಪ್ ಇತ್ತೀಚೆಗೆ ಈ ಹೊಸ ವೈಶಿಷ್ಟ್ಯವನ್ನು (Whatsapp features) ಬಿಡುಗಡೆ ಮಾಡಿದೆ. ಕೆಲವೊಮ್ಮೆ ಕೆಲವೊಂದು ವೀಡಿಯೊ ಗಳನ್ನು ಬೇರೆಯವರಿಗೆ ಕಳುಹಿಸುವ ಮೊದಲು ಅದರ ಆಡಿಯೋ ಬಗ್ಗೆ ಯೋಚನೆ ಮಾಡಬೇಕಾಗುತ್ತದೆ. ಇಂಥಹ ಸಂದರ್ಭದಲ್ಲಿ ಈ ಫೀಚರ್ ತುಂಬಾ ಉಪಯುಕ್ತವಾಗಿದೆ. ಇದರ ಮೂಲಕ, ಶೇರ್ ಮಾಡುವ ವೀಡಿಯೊವನ್ನು ಮ್ಯೂಟ್ (video mute) ಮಾಡಬಹುದು.
ಇದನ್ನೂ ಓದಿ :Smartphone Under Rs 6000 : 6,000 ರೂಪಾಯಿಗಳಿಗಿಂತ ಕಡಿಮೆ ಬೆಲೆಗೆ ಸಿಗಲಿದೆ ಈ ಸ್ಮಾರ್ಟ್ ಫೋನ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.